ಕಿರಿಕ್ ಕೀರ್ತಿ ನಿರ್ದೇಶನದ 'ಪ್ರೀತಿ ಮದುವೆ ಇತ್ಯಾದಿ'ಗೆ ಲಿಖಿತ್ ಶೆಟ್ಟಿ ಹೀರೋ!

ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ಪ್ರಿತಿ ಮದುವೆ ಇತ್ಯಾದಿ ಸಿನಿಮಾಗೆ ಲಿಖಿತ್ ಶೆಟ್ಟಿ ನಾಯಕರಾಗಿದ್ದಾರೆ. 

Published: 10th February 2021 10:54 AM  |   Last Updated: 10th February 2021 12:35 PM   |  A+A-


kirik Keethi and likhit shetty

ಕಿರಿಕ್ ಕೀರ್ತಿ ಮತ್ತು ಲಿಖಿತ್ ಶೆಟ್ಟಿ

Posted By : Shilpa D
Source : The New Indian Express

ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ಪ್ರಿತಿ ಮದುವೆ ಇತ್ಯಾದಿ ಸಿನಿಮಾಗೆ ಲಿಖಿತ್ ಶೆಟ್ಟಿ ನಾಯಕರಾಗಿದ್ದಾರೆ. 

ಲಿಖಿತ್ ಶೆಟ್ಟಿ ಈ ಹಿಂದೆ ಸಂಕಷ್ಟಕರ ಗಣಪತಿ, ಮತ್ತು ಫ್ಯಾಮಿಲಿ ಪ್ಯಾಕ್ ಸಿನಿಮಾಗಳಲ್ಲಿ ಲಿಖಿತ್ ಶೆಟ್ಟಿ ಹೀರೋ ಆಗಿ ನಟಿಸಿದ್ದಾರೆ. ಕಿರಿಕ್ ಕೀರ್ತಿ ಈ ಹಿಂದೆ ಎರಡನೇ ಸಲ,ಮತ್ತು ಚಿತ್ರಾಲಿ ಸಿನಿಮಾಗಳಲ್ಲಿ ನಟಿಸಿದ್ದರು. 

ರೇಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಕಿರಿಕ್ ಕೀರ್ತಿ, ಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕೂಡ ಕೆಲಸ ಮಾಡಿದ್ದರು. ಬಿಗ್ ಬಾಸ್ ಕನ್ನಡ ಶೋ ನಲ್ಲೂ ಕೂಡ ಕೀರ್ತಿ ಭಾಗವಹಿಸಿದ್ದರು.

ಪ್ರೀತಿ ಮದುವೆ ಇತ್ಯಾದಿ  ಸಿನಿಮಾ ರೋಮ್ಯಾಂಟಿಕ್ ಕಥೆಯಾಗಿದ್ದು, ಅವರು ಮೊದಲ ಬಾರಿಗೆ ಲಿಖಿತ್ ಜೊತೆ ಸೇರಿಕೊಳ್ಳುತ್ತಿದ್ದಾರೆ. ಇಬ್ಬರೂ ಚಿತ್ರಕಥೆಯನ್ನು ಅಂತಿಮಗೊಳಿಸಿದ್ದುಈಗ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

ತುಳು ಚಿತ್ರರಂಗದಲ್ಲಿ ಜನಪ್ರಿಯ ಹೆಸರಾಗಿರುವ ಲಿಖಿತ್ ಶೆಟ್ಟಿ ಸಂಕಷ್ಟ ಕರ ಗಣಪತಿಯೊಂದಿಗೆ ಬೆಳಕಿಗೆ ಬಂದರು. ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್  ಮುಂದಿನ ಚಿತ್ರ ಫ್ಯಾಮಿಲಿ ಪ್ಯಾಕ್‌ಗಾಗಿ ನಿರ್ದೇಶಕ ಅರ್ಜುನ್ ಕುಮಾರ್ ಅವರೊಂದಿಗೆ ಮತ್ತೊಮ್ಮೆ ಲಿಖಿತ್ ಕೈಜೋಡಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp