ಬಾಲಿವುಡ್ ನಾಯಕನ ಪ್ರೊಫೈಲ್ ಗೆ ಬೇಕಾದ ವ್ಯಕ್ತಿತ್ವ ನನಗಿದೆ; ಹಿಂದಿ ಸಿನಿಮಾಗಾಗಿ ನಾಗಶೇಖರ್ ಜೊತೆ ಚರ್ಚೆ: ಜೈದ್ ಖಾನ್

ನಿರ್ದೇಶಕ ನಾಗಶೇಖರ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಸದಭಿರುಚಿಯ ಸಿನಿಮಾಗಳನ್ನು ನೀಡಿದ್ದಾರೆ. ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾ ನೀಡಿರುವ ನಾಗಶೇಖರ್ ಬಾಲಿವುಡ್ ಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

Published: 10th February 2021 12:48 PM  |   Last Updated: 10th February 2021 01:08 PM   |  A+A-


Zaid khan

ಜೈದ್ ಖಾನ್

Posted By : Shilpa D
Source : The New Indian Express

ನಿರ್ದೇಶಕ ನಾಗಶೇಖರ್ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹಲವು ಸದಭಿರುಚಿಯ ಸಿನಿಮಾಗಳನ್ನು ನೀಡಿದ್ದಾರೆ. ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾ ನೀಡಿರುವ ನಾಗಶೇಖರ್  ಬಾಲಿವುಡ್ ಗೂ ಪಾದಾರ್ಪಣೆ ಮಾಡುತ್ತಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಪುತ್ರ ಜೈದ್ ಖಾನ್ ಜೊತೆ ಮಾತುಕತೆ ನಡೆದಿದ್ದು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತರಲು ಸಿದ್ಧತೆ ನಡೆಸುತ್ತಿದ್ದಾರೆ, ಸದ್ಯ ಜೈದ್ ಖಾನ್ ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬನಾರಸ್ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. 

ನಾಗಶೇಖರ್ ಜೊತೆಗಿನ ಮಾತುಕತೆಯನ್ನು ಖಚಿತ ಪಡಿಸಿರುವ ಜೈದ್ ಖಾನ್, ಲವ್ ಸ್ಟೋರಿಯೊಂದಿಗೆ ನಾಗಶೇಖರ್ ಬಂದಿದ್ದಾರೆ, ಅವರು ಮೊದಲಾರ್ದದ ಕತೆ ಹೇಳಿದ್ದು, ನನಗೆ ಇಷ್ಟವಾಗಿದೆ, ಉಳಿದ ಕಥೆ ಕೇಳಿದ ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಇದೊಂದು ದ್ವಿಭಾಷಾ ಸಿನಿಮಾವಾಗಿದೆ, ಕನ್ನಡದಲ್ಲಿ ನಾನು ನಚಿಸಿರುವ ಸಿನಿಮಾ ರಿಲೀಸ್ ಆಗಬೇಕೆಂದು ನಾನು ಬಯಸುತ್ತೇನೆ,  ಇದೊಂದು ಷರತ್ತನ್ನು ನಾನು ಎಲ್ಲಾ ನಿರ್ದೇಶಕರಿಗೆ ಹೇಳುತ್ತೇನೆ. ಬಾಲಿವುಡ್ ನಾಯಕನ ಪ್ರೊಫೈಲ್ಗೆ ಸರಿಹೊಂದುವ ಮುಖ ಮತ್ತು ವ್ಯಕ್ತಿತ್ವವನ್ನು ನಾನು ಹೊಂದಿದ್ದೇನೆ, ಅದು ಪ್ಲಸ್ ಪಾಯಿಂಟ್ ಆಗಿದೆ, ಮತ್ತು ನಾನು ಅದನ್ನು ಎನ್ಕ್ಯಾಶ್ ಮಾಡಲು ಬಯಸುತ್ತೇನೆ ಎಂದು ಜೈದ್ ಖಾನ್ ತಿಳಿಸಿದ್ದಾರೆ.

ಬನಾರಸ್ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಬೇಕೆಂದು ನಾನು ಬಯಸುತ್ತೇನೆ, ಕೆಲವು ನಿರ್ಮಾಪಕರು ಈ ಸಿನಿಮಾ ವೀಕ್ಷಿಸಿದ್ದಾರೆ,  ಕನ್ನಡ ಸೇರಿ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲು ಮುಂದಾಗಿದ್ದಾರೆ. ಬನಾರಸ್ ಸಿನಿಮಾ ಪ್ರಪಂಚಾದ್ಯಂತ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp