'ಭೈರತಿ ರಣಗಲ್' 125 ನೇ ಸಿನಿಮಾ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಶಿವಣ್ಣನಿಗೆ ಡೈರೈಕ್ಷನ್ ಮಾಡಿಯೇ ತೀರುತ್ತೇನೆ: ನರ್ತನ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ಭೈರತಿ ರಣಗಲ್, ನರ್ತನ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
Published: 11th February 2021 11:58 AM | Last Updated: 11th February 2021 12:57 PM | A+A A-

ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ಭೈರತಿ ರಣಗಲ್, ನರ್ತನ್ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.
ಭೈರತಿ ರಣಗಲ್ ಸಿನಿಮಾ ಘೋಷಣೆಯಾಗಿ ಸುದೀರ್ಘ ಸಮಯವಾಗಿದೆ, ಆದರೆ ಸದ್ಯ ಸಿನಿಮಾ ಇರುವ ಪರಿಸ್ಥಿತಿ ನೋಡಿದರೇ ಇದು ನರ್ತನ್ -ಶಿವಣ್ಣ ಜೋಡಿಯ 125ನೇ ಸಿನಿಮಾ ಆಗಲಾರದು ಎಂದು ತೋರುತ್ತಿದೆ, 2020 ರಲ್ಲಿ ಸಂಭವಿಸಿದ ಕೊರೋನಾದಿಂದಾಗಿ ಸಿನಿಮಾ ವೇಳಪಟ್ಟಿಯೇ ಸಂಪೂರ್ಣ ಬದಲಾಗಿ ಹೋಗಿದೆ.
ಶಿವಣ್ಣ ಅವರಿಗೆ ಡೈರೆಕ್ಷನ್ ಮಾಡುವುದು ನನ್ನ ಜವಾಬ್ದಾರಿ, ಅವರು ಕಥೆ ಕೇಳಿ ಒಪ್ಪಿಗೆ ನೀಡಿದ್ದಾರೆ, ಮುಫ್ತಿ ನಂತರ ನಾವು ಈ ಪ್ರಾಜೆಕ್ಟ್ ಬಗ್ಗೆ ಪ್ಲಾನ್ ಮಾಡಿದ್ದೆವು, ಆದರೆ ಆ ಸಮಯದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ, ಶಿವಣ್ಣ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ನಾನು ಕೂಡ ಯಶ್ ಜೊತೆ ಸಿನಿಮಾದಲ್ಲಿ ನಿರತನಾಗಿದ್ದೆ ಎಂದು ನಿರ್ದೇಶಕ ನರ್ತನ್ ಹೇಳಿದ್ದಾರೆ.
ಸಿನಿಮಾ ಸಂಖ್ಯೆ ಮುಖ್ಯವಾಗುವುದಿಲ್ಲ, ನಾನು ಶಿವಣ್ಣ ಅವರ 125ನೇ ಸಿನಿಮಾ ನಿರ್ದೇಶನ ಮಾಡುತ್ತೇನೋ ಇಲ್ಲವೋ, ಆದರೆ ಯಶ್ ಜೊತೆಗೆ ನನ್ನ ಸಿನಿಮಾ ಮುಗಿದ ಕೂಡಲೇ ನಾನು ಭೈರತಿ ರಣಗಲ್ ನಿರ್ದೇಶಿಸುತ್ತೇನೆ ಎಂದು ನರ್ತನ್ ತಿಳಿಸಿದ್ದಾರೆ.
ಭೈರತಿ ರಣಗಲ್ ಕಥೆ ಈಗಾಗಲೇ ಸಿದ್ದವಾಗಿದೆ, ಸೆಟ್ ಗೆ ಸಿನಿಮಾ ತಂಡ ಹೋಗುವುದಷ್ಟೇ ಬಾಕಿ, ಎರಡನೇಯದಾಗಿ ಸಿನಿಮಾಗೆ ಹೆಚ್ಚಿನ ಪ್ರಮಾಣದ ಬಜೆಟ್ ಬೇಕಾಗಿದೆ, ಯಶ್ ಅವರೊಂದಿಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ