ಫೆಬ್ರವರಿ 14ಕ್ಕೆ ಜೂ.ಚಿರುಗೆ ಹಲೋ...ಹೇಳಿ ಎಲ್ಲರೂ: ಮೇಘನಾ ರಾಜ್
ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಇತ್ತೀಚೆಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರು ಈಗ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
Published: 12th February 2021 04:51 PM | Last Updated: 12th February 2021 04:51 PM | A+A A-

ಮೇಘನಾ ರಾಜ್
ಬೆಂಗಳೂರು: ಸದ್ಯದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಇತ್ತೀಚೆಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ಅವರು ಈಗ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ತಮ್ಮ ಮುದ್ದು ಮಗನ ಕುರಿತು ಮೇಘನಾ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಫೆಬ್ರವರಿ 14ಕ್ಕೆ ಮಗನ ಫೋಟೋವನ್ನು ರಿವೀಲ್ ಮಾಡುವುದಾಗಿ ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ.
ಚಿರಂಜೀವಿ ಜೊತೆ ಇರುವ ಸುಂದರ ಕ್ಷಣಗಳ ಫೋಟೋಗಳ ಜೊತೆಗೆ ಮುದ್ದಾದ ಮಗನನ್ನು ಎತ್ತಿಕೊಂಡಿರುವ ಫೋಟೋಗಳು ಇರುವ ವಿಡಿಯೋವನ್ನು ಮೇಘನಾ ಶೇರ್ ಮಾಡಿದ್ದು, 'ಫೆಬ್ರವರಿ 14ಕ್ಕೆ ಮಗನಿಗೆ ಎಲ್ಲರೂ ಹಲೋ ಹೇಳಿ' ಎಂದು ಬರೆದುಕೊಂಡಿದ್ದಾರೆ.
ಮುದ್ದಾಗಿ ಬೆಳೆದಿರುವ ಜೂ.ಚಿರು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ತೊಟ್ಟಿಲ ಶಾಸ್ತ್ರದ ಬಳಿಕ ಮೇಘನಾ ಮಗನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಪ್ರೇಮಿಗಳ ದಿನದಂದು ಮಗನನ್ನು ಅಭಿಮಾನಿಗಳಿಗೆ ತೋರಿಸಲಿದ್ದಾರೆ.