'ಬಹದ್ದೂರ್ ಗಂಡು' ಆಗಲಿದ್ದಾರೆ 'ಕನ್ನಡತಿ' ಸೀರಿಯಲ್ ನ ಕಿರಣ್ ರಾಜ್!
ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಬಹದ್ದೂರ್ ಗಂಡು' ಸಿನಿಮಾವನ್ನು ಮಾಡುತ್ತಿದ್ದಾರೆ. ಕಿರಣ್ ರಾಜ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಲಿದ್ದಾರೆ.
Published: 13th February 2021 09:49 AM | Last Updated: 13th February 2021 12:38 PM | A+A A-

ಕಿರಣ್ ರಾಜ್
ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಬಹದ್ದೂರ್ ಗಂಡು' ಸಿನಿಮಾವನ್ನು ಮಾಡುತ್ತಿದ್ದಾರೆ. ಕಿರಣ್ ರಾಜ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಲಿದ್ದಾರೆ.
ನಾನು ಡಾ.ರಾಜ್ ಕುಮಾರ್ ಅವರ ಬಹು ದೊಡ್ಡ ಅಭಿಮಾನಿ, ಅವರ ಸಿನಿಮಾ ನೋಡುವುದೆಂದರೇ ನನಗೆ ಅಪಾರ ಖುಷಿ, ಅವರ ವ್ಯಕ್ತಿತ್ವ ಹಾಗೂ ಅವರ ಸಿನಿಮಾಗಳು ನನ್ನ ಪಾಲಿಗೆ ಅತ್ಯಮೂಲ್ಯ. ನಾನೊಬ್ಬ ಸಂಗೀತಗಾರನಾಗಿರುವ ಕಾರಣ ರಾಜ್ ಕುಮಾರ್ ಸಿನಿಮಾ ಗೀತೆಗಳನ್ನು ಹೆಚ್ಚಾಗಿ ಹಾಡುತ್ತಿದೆ. ಬಹದ್ದೂರ್ ಗಂಡು ಟೈಟಲ್ ತುಂಬಾ ಹಿಡಿಸಿತು ಎಂದು ನಿರ್ದೇಶಕ ಪ್ರಸಿದ್ಧ ಹೇಳಿದ್ದಾರೆ.
ಈ ಮೊದಲು ಭಗೀರಥ ಎಂಬ ಟೈಟಲ್ ಇತ್ತು, ಆದರೆ ಆ ಹೆಸರು ಈಗಾಗಲೇ ಇದ್ದಿದ್ದರಿಂದ ನಾನು ಬಹದ್ದೂರ್ ಗಂಡು ಟೈಟಲ್ ಪಡೆದುಕೊಂಡೆ, ಟೈಟಲ್ ಗೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನದು, ಈ ಚಿತ್ರಕ್ಕಾಗಿ ಹಳ್ಳಿ ಕಥೆಯನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮಾರ್ಚ್ 11 ರಿಂದ ಶೂಟಿಂಗ್ ಆರಂಭವಾಗಲಿದ್ದು, ಪ್ರಿ ಪ್ರೊಜಕ್ಷನ್ ಕೆಲಸಗಳು ನಡೆಯುತ್ತಿವೆ, ಜೋಗಿ, ವಿಲ್ಲನ್ ಸಿನಿಮಾಗೆ ಸಂಭಾಷಣೆ ಬರೆದಿದ್ದಮಳವಳ್ಳಿ ಸಾಯಿಕೃಷ್ಣ ಇದರಲ್ಲೂ ತಮ್ಮ ಕೈ ಚಳಕ ತೋರಿಸಲಿದ್ದಾರೆ. ಒಟ್ಟು 8 ಹಾಡುಗಳಿ್ದು, ಅದರಲ್ಲಿ ಮೂರು ಚಿಕ್ಕ ಗೀತೆಗಳಾಗಿವೆ ಎಂದು ಪ್ರಸಿದ್ಧ ತಿಳಿಸಿದ್ದಾರೆ.
ನಿರ್ದೇಶನ ಮಾಡುತ್ತಿದ್ದಾರೆ. ವರ್ಷಾ ಕುಮಾರ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಇನ್ನು 'ಕನ್ನಡತಿ' ಧಾರಾವಾಹಿ ತುಂಬ ರೋಚಕವಾಗಿ ಮೂಡಿಬರುತ್ತಿದೆ. ತೆಲುಗಿನ ಸಿನಿಮಾವೊಂದರಲ್ಲಿ ಕಿರಣ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕಿರಣ್ ರಾಜ್ ತುಂಬ ಬ್ಯುಸಿಯಿದ್ದಾರೆ. ಕನ್ನಡ ಒಂದೇ ಅಲ್ಲದೆ ಹಿಂದಿಯಲ್ಲಿ 'ಲವ್ ಬೈ ಚಾನ್ಸ್', 'ತು ಆಶಿಕಿ', 'ಕ್ರೈಂ ಪೆಟ್ರೋಲ್' ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ.