ನಾನೇ ಅದೃಷ್ಟಶಾಲಿ: 'ವಿಕ್ರಾಂತ್ ರೋಣ' ನಟಿ ನೀತಾ ಅಶೋಕ್!

ಮೇ 2014 ರಲ್ಲಿ ನೀತಾ ಅಶೋಕ್ ಮೊದಲು ಕ್ಯಾಮರಾ ಲೈಟ್ ಗಳನ್ನು ಎದುರಿಸಿದ್ದರು.  ನಾಲ್ಕು ವರ್ಷಗಳ ನಂತರ ಅವರೀಗ ಕನ್ನಡದಲ್ಲಿ ಮೂರು ಮೆಗಾ ಧಾರಾವಾಹಿ ಮತ್ತು ಹಿಂದಿಯಲ್ಲಿ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Published: 13th February 2021 10:58 AM  |   Last Updated: 13th February 2021 12:38 PM   |  A+A-


ನೀತಾ ಅಶೋಕ್

Posted By : Raghavendra Adiga
Source : The New Indian Express

ಮೇ 2014 ರಲ್ಲಿ ನೀತಾ ಅಶೋಕ್ ಮೊದಲು ಕ್ಯಾಮರಾ ಲೈಟ್ ಗಳನ್ನು ಎದುರಿಸಿದ್ದರು.  ನಾಲ್ಕು ವರ್ಷಗಳ ನಂತರ ಅವರೀಗ ಕನ್ನಡದಲ್ಲಿ ಮೂರು ಮೆಗಾ ಧಾರಾವಾಹಿ ಮತ್ತು ಹಿಂದಿಯಲ್ಲಿ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ನಟಿ ಇದೀಗ ಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ಅಭಿನಯದ "ವಿಕ್ರಾಂತ್ ರೋಣ" ಚಿತ್ರದ ಮೂಲಕ ದೊಡ್ಡ ಪರದೆ ಮೇಲೆ ಮಿಂಚಲು ತಯಾರಾಗಿದ್ದಾರೆ.

"ನಾನು ಅದೃಷ್ಟಶಾಲಿ. ಇದೊಂದು ಆಕಸ್ಮಿಕವಾಗಿ ಒಲಿದ ಅದೃಷ್ಟವಾಗಿದೆ." ಎಂದು ನಟಿ ನೀತಾ ಹೇಳಿದ್ದಾರೆ. , 2019 ರ ತುಳು ಚಿತ್ರದಲ್ಲಿ ಅಭಿನಯಿದಾಗ ಬೆಳ್ಳಿ ಪರದೆ ಕಡೆ ಗಮನಹರಿಸಿದ್ದಾರೆ. "ತುಳು ಚಲನಚಿತ್ರವು ನನ್ನ ಶಾಲೆಯ ಸೀನಿಯರ್ ಗಳನ್ನು ಒಳಗೊಂಡಿತ್ತು, ಅವರ ತಂದೆ ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸುತ್ತಿದ್ದರು. ಅದೇ ಸಮಯದಲ್ಲಿ ವಿಕ್ರಾಂತ್ ರೋಣ ತಂಡದಿಂದ ನನಗೆ ಕರೆ ಬಂತು" ಎಂದು ಅವರು ಹೇಳುತ್ತಾರೆ.

 "ಕಲರ್ಸ್ ಕನ್ನಡ ಆಯೋಜಿಸಿದ್ದ ಪಾರ್ಟಿಯಲ್ಲಿ ನಾನು ಸುದೀಪ್ ಅವರನ್ನು ಭೇಟಿಯಾಗಿದ್ದೆ. . ಚಿತ್ರಕ್ಕೆ ಸೂಕ್ತವಾದ ಪಾತ್ರದ ಆಯ್ಕೆಗೆ ತಂಡವು ನೋಡುತ್ತಿದ್ದಾಗ, ಸುದೀಪ್ ನನ್ನನ್ನು ನೆನಪಿಸಿಕೊಂಡಿದ್ದಾರೆ. ಆರಂಭದಲ್ಲಿ ನನಗೆ ಸಂದೇಹವಿತ್ತು. ಇದು ಕೇವಲ ತಮಾಷೆಯ ಸಂಗತಿ ಎಂದು ನಾನು ಭಾವಿಸಿದೆ. ಆದರೆ ತಂಡದಿಂದ , ನನಗೆ ಕರೆ ಬಂದಾಗ, ನನ್ನ ಉತ್ಸಾಹಕ್ಕೆ ಯಾವುದೇ ಮಿತಿಗಳಿರಲಿಲ್ಲ."

"ಬಿಗ್ ಬಾಸ್ ಕನ್ನಡದ ಬ್ರೇಕ್ ಗಳಲ್ಲಿ ಕಾಣಿಸಿಕೊಳ್ಳುವ ನನ್ನ ಧಾರಾವಾಹಿಗಳ ಪ್ರೋಮೋಗಳನ್ನು ಅವರು ವೀಕ್ಷಿಸಿದ್ದಾರೆ. . ನನ್ನ ನಗು ಮತ್ತು ಸ್ಕ್ರೀನ್ ಮೇಲಿನ ನನ್ನ ಪ್ರಸ್ತುತಿಯು  ಅವರಿಗೆ ಇಷ್ಟವಾಗಿದೆ ಎಂದು ಅವರು ಹೇಳಿದ್ದಾರೆ."

ಪನ್ನಾ ಎಂದು ಕರೆಯಲ್ಪಡುವ ಅಪರ್ಣಾ ಬಲ್ಲಾಳ್ ಪಾತ್ರ ನೀತಾ ಕಿರುತೆರೆಯಲ್ಲಿ ಇತರರಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣುವಂತೆ ಮಾಡಿದೆ. "ನಾನು ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ನಾಯಕಿಯ ಸೈಡ್ ಪಾತ್ರವನ್ನು ನಿರ್ವಹಿಸುತ್ತೇನೆ.ಆದರೆ ಪನ್ನಾ ಮುಂಬೈನಲ್ಲಿರುವ ಅತ್ಯಂತ ಆಧುನಿಕ ಪಾಶ್ಚಾತ್ಯವಿಶಾಲ ಮನಸ್ಸಿನ ಹುಡುಗಿಯ ಪಾತ್ರ,. ಆಕೆಯದು ಹೊಸ ಹೊಸ ಪ್ರದೇಶದ ಅನ್ವೇಷಣೆ, ಸಾಹಸವನ್ನು ಇಷ್ಟಪಡುವ ಗುಣ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹೋಲಿಕೆಯಾಗುತ್ತದೆ." ಟಿವಿ ಧಾರಾವಾಹಿ ನಟಿಗೆ  ಬೆಳ್ಳಿ ಪರದೆ ಇಷ್ಟವಾಗಿದೆಯೆ?. "ಒಂದೇ ವ್ಯತ್ಯಾಸವೆಂದರೆ ಧಾರಾವಾಹಿಗಳ ಚಿತ್ರೀಕರಣದ ಸಮಯದಲ್ಲಿ, ನಾವು ದಿನಕ್ಕೆ 10 ರಿಂದ 15 ದೃಶ್ಯಗಳನ್ನು ಮಾಡುತ್ತೇವೆ, ಆದರೆ ಒಂದು ಚಿತ್ರಕ್ಕಾಗಿ, ಒಂದು ದೃಶ್ಯಕ್ಕೂ ಸಹ ಹೆಚ್ಚಿನ ಗಮನ ಹರಿಸಬೇಕಿದೆ. ಪ್ರತಿ ನಿಮಿಷದ ವಿವರಗಳನ್ನು ನೋಡಲಾಗುತ್ತದೆ. ಶೂಟಿಂಗ್ ಮಾಡುವಾಗ ತಾಳ್ಮೆ ಒಂದು ಪ್ರಮುಖ ಅಂಶವಾಗಿದೆ ಎಂದು ಸಿನಿಮಾ ನಮಗೆ ತೋರಿಸಿದೆ."

"ಸೋದರರಾದ ಅನೂಪ್ ಹಾಗೂ ನಿರೂಪ್ ಭಂಡಾರಿ ಸಹಕಾರ ಉದ್ದಕ್ಕೂ ನನಗೆ ದೊರಕಿದೆ. ಶೂಟಿಂಗ್ ಇಲ್ಲದ ವೇಳೆ ಅಂತ್ಯಾಕ್ಷರಿಯಂತಹಾ ಆಟವಾಡುತ್ತಿದ್ದೆವು.ಒಂದು ಕ್ಷಣವೂ ನಾನು ಒಬ್ಬಂಟಿಯಾಗಿ ಉಳಿದಿಲ್ಲ. ಅವರು ನನ್ನನ್ನು ಅವರ ಕುಟುಂಬ ಸದಸ್ಯರಂತೆ ಕಾಣುತ್ತಿದ್ದರು.

"ಅನೂಪ್ ಹಾಗೂ ಸುದೀಪ್ ಸರ್ ಮಾರ್ಗದರ್ಶಕರನ್ನು ಹೊಂದಲು ನನಗೆ ಸಂತೋಷವಾಗಿದೆ. ವಿಕ್ರಾಂತ್ ರೋಣ  ಬಿಡುಗಡೆಯನ್ನು ನಾನು ಮೊದಲು ಎದುರು ನೋಡುತ್ತೇನೆ. ಆ ನಂತರ ಮುಂದಿನ ತೀರ್ಮಾನ," ನೀತಾ ಹೇಳಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp