ಚಾರ್ಲಿ ಚಾಪ್ಲಿನ್ ಕುರಿತ ವಿಶೇ‍ಷ ಎಪಿಸೋಡ್ 'ಶಾಂತಂ ಪಾಪಂ'ನಲ್ಲಿ! ಕಾಮಿಡಿ ಜೊತೆ ಕ್ರೈಮ್ ಏಕೆ ಗೊತ್ತಾ?

ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶಾಂತಂ ಪಾಪಂ'ನಲ್ಲಿ, ವ್ಯಾಲಂಟೈನ್ ದಿನದ ಪ್ರಯುಕ್ತ ಚಾರ್ಲಿ ಚಾಪ್ಲಿನ್ ಅವರ ಬಗೆಗೆ ವಿಶೇಷ ಎಪಿಸೋಡ್ ಪ್ರಸಾರವಾಗಲಿದೆ. 

Published: 13th February 2021 10:32 PM  |   Last Updated: 13th February 2021 11:17 PM   |  A+A-


ಚಾರ್ಲಿ ಚಾಪ್ಲಿನ್ ಪಾತ್ರದಲ್ಲಿ ವಿನೋದ್ ಗೊಬ್ಬರಗಾಲ

Posted By : Prasad SN
Source : Online Desk

ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಶಾಂತಂ ಪಾಪಂ'ನಲ್ಲಿ, ವ್ಯಾಲಂಟೈನ್ ದಿನದ ಪ್ರಯುಕ್ತ ಚಾರ್ಲಿ ಚಾಪ್ಲಿನ್ ಅವರ ಬಗೆಗೆ ವಿಶೇಷ ಎಪಿಸೋಡ್ ಫೆಬ್ರವರಿ 15ಕ್ಕೆ ಪ್ರಸಾರವಾಗಲಿದೆ. 

'ಚಾಪ್ಲಿನ್ ಗೋವಿಂದ' ಎಂಬ ಈ ವಿಶೇಷ ಸಂಚಿಕೆ ಪ್ರೇಮಿಗಳ ಹಬ್ಬದ ಪ್ರಯುಕ್ತ ಚಿತ್ರಪ್ರೇಮಿಗಳಿಗೆ 'ಸಿಟಿ ಲೈಟ್ಸ್'ನಂತ ಅಮರ ಪ್ರೇಮದ ಕಥಾನಕವನ್ನು ಕೊಟ್ಟ ಚಾರ್ಲಿ ಚಾಪ್ಲಿನ್ ಗೆ ಸಮರ್ಪಿತ. ಕಾಮಿಡಿ ಜೊತೆ ಕ್ರೈಮ್ ಏಕೆ ಅನ್ನೋದೆ ಈ ಸಂಚಿಕೆಯ ವಿಶೇಷ.

ಚಾರ್ಲಿ ಚಾಪ್ಲಿನ್ ನ 'ಸಿಟಿ ಲೈಟ್ಸ್ ' ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದು. ಈ ಎಪಿಸೋಡ್ ನಲ್ಲಿನ ಕಥೆಯು ಬಡತನ, ಸಂಪತ್ತಿನ ಅಸಮಾನತೆ, ಸಹಾನುಭೂತಿ, ಹಾಸ್ಯ ಮತ್ತು ಲೈಂಗಿಕ ಕಿರುಕುಳದ ಕುರಿತ ಅಂಶಗಳನ್ನು ಒಳಗೊಂಡಿದೆ. 

'ಸಿಟಿ ಲೈಟ್ಸ್' ಸ್ಫೂರ್ತಿ ಪಡೆದು ಭಾರತದಲ್ಲಿ 60 ಸಿನಿಮಾಗಳನ್ನು ಮಾಡಲಾಗಿದೆ. ಆದರೆ ಸಿಟಿ ಲೈಟ್ಸ್ ಚಿತ್ರವನ್ನು ಆಧರಿಸಿ ಟೆಲಿವಿಷನ್ ನಲ್ಲಿ ವಿಶೇಷ ಸಂಚಿಕೆಯೊಂದು ರೂಪಿತವಾಗಿರುವುದು ಇದೇ ಪ್ರಥಮ. 

ಈಗಾಗಲೇ 'ಶಾಂತಂ ಪಾಪಂ' ಎಂದರೆ ನಿಜ ಜೀವನದಲ್ಲಿ ನಡೆದ ಅಪರಾಧಗಳು, ಸಾಮಾಜಿಕ ಸಂದೇಶಗಳ ಕುರಿತು ಇರುತ್ತದೆ ಎನ್ನುವಂತಾಗಿತ್ತು. ಇದೇ ಪ್ರಥಮ ಬಾರಿಗೆ ಕಾಮಿಡಿಯ ಜೊತೆಗೆ ಕ್ರೈಮ್ ನ ಸಮ್ಮಿಶ್ರಣವನ್ನು ಚಾಪ್ಲಿನ್ ನ ಛಾಯೆಯಲ್ಲಿ ತರಲು ಪ್ರಯತ್ನಿಸಲಾಗಿದೆ. ಈ ವಿಶೇ‍ಷ ಎಪಿಸೋಡ್ ಮಾತ್ರ ತುಂಬಾ ವಿಭಿನ್ನವಾಗಿರಲಿದೆ.

ಸಾಮಾನ್ಯವಾಗಿ ಕ್ರೈಮ್ ಧಾರಾವಾಹಿಯಲ್ಲಿ ಕಾಮಿಡಿಯನ್ನು ತರುವುದು ಸುಲಭ ಸಾಧ್ಯವಲ್ಲ. ಆದರೆ, ಈ ವಿಶೇಷ ಸಂಚಿಕೆಯ ಕತೆಯು ಚಾಪ್ಲಿನ್ ತನ್ನ ಸಿನೆಮಾಗಳಲ್ಲಿ ತೋರಿಸುತ್ತಿದ್ದ ಮಾನವೀಯ ಅನುಕಂಪ, ಬಾಂಧವ್ಯ, ಕರುಣೆ, ಪ್ರೇಮ, ತಿಳಿಹಾಸ್ಯದ ಜೊತೆಗೆ ಕ್ರೈಮ್ ನ ಕಿರುಲೇಪನವಿದ್ದರೂ ಇಡೀ ಕುಟುಂಬ ಸಮೇತ ನೋಡುವ ಸಂಚಿಕೆಯಾಗಿದೆ. 

ಡಾವೆಂಕಿ ಕತೆಗೆ, ಪ್ರಶಾಂತ್ ಕ್ರಿಷ್ಣ ಚಿತ್ರಕತೆ ಸಂಭಾಷಣೆ ಬರೆದಿದ್ದು, ರವೀನ್ ಕುಮಾರ್ ನಿರ್ಮಾಣದಲ್ಲಿ, ನವೀನ್ ಸೋಮ್ನಳ್ಳಿ ನಿರ್ದೇಶಿಸಿದ್ದಾರೆ. ರವಿ ಕನಕಪುರ ಛಾಯಾಗ್ರಹಣದಲ್ಲಿ ಕುಂದಾಪುರದ ತ್ರಾಸಿ ಮರವಂತೆ ಬೀಚ್ ಗಳ ಆಸುಪಾಸಿನಲ್ಲಿ ಚಿತ್ರೀಕರಣ ನಡೆದಿದೆ. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಕಾಂಪೌಂಡರ್ ಗೋವಿಂದ ಮತ್ತು ಎನ್ ಎಂ ಎಲ್ ಪಾತ್ರದಲ್ಲಿ ಜನಪ್ರಿಯ ಜೋಡಿಯಾಗಿದ್ದ ವಿನೋದ್ ಗೊಬ್ಬರಗಾಲ ಮತ್ತು ನಾಗನಂದಿನಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp