'ಶಾಂತಂ ಪಾಪಂ' ನಲ್ಲಿ ಆನ್ ಲೈನ್ ಫ್ರಾಡ್ ಗಳ ಬಗ್ಗೆ ವಿಶೇಷ ಎಪಿಸೋಡ್!

ನೈಜ ಘಟನೆಗಳನ್ನಾಧಾರಿಸಿ, ತಯಾರಿಸಿ, ಪ್ರಸಾರವಾಗುತ್ತಿರುವ “ಶಾಂತಂ ಪಾಪಂ” ಧಾರಾವಾಹಿ, ಜಗತ್ತನ್ನೇ ತಲ್ಲಣ ಗೊಳಿಸುತ್ತಿರುವ ಆನ್ ಲೈನ್ ಫ್ರಾಡ್ ಗಳ ಬಗ್ಗೆ ವಿಶೇಷ ಎಪಿಸೋಡನ್ನು ಪ್ರಸಾರ ಮಾಡಲಿದೆ.

Published: 13th February 2021 01:22 PM  |   Last Updated: 16th February 2021 05:53 PM   |  A+A-


ಎಪಿಸೋಡ್ ದೃಶ್ಯ

Posted By : Raghavendra Adiga
Source : Online Desk

ನೈಜ ಘಟನೆಗಳನ್ನಾಧಾರಿಸಿ, ತಯಾರಿಸಿ, ಪ್ರಸಾರವಾಗುತ್ತಿರುವ “ಶಾಂತಂ ಪಾಪಂ” ಧಾರಾವಾಹಿ, ಜಗತ್ತನ್ನೇ ತಲ್ಲಣ ಗೊಳಿಸುತ್ತಿರುವ ಆನ್ ಲೈನ್ ಫ್ರಾಡ್ ಗಳ ಬಗ್ಗೆ ವಿಶೇಷ ಎಪಿಸೋಡನ್ನು ಪ್ರಸಾರ ಮಾಡಲಿದೆ.

“ಇದು ಪಾಪದ ಕತೆಗಳು... ಪಾಠ ಕಲಿಸುವ ಕತೆಗಳು” – ಎನ್ನುವ ಟ್ಯಾಗ್ ಲೈನ್ ನ ಅಡಿಯಲ್ಲಿ “ಶಾಂತಂ ಪಾಪಂ” ಎನ್ನುವ, ಅಪರಾಧಸಂಬಂಧಿತ ಕತೆಗಳನ್ನು ಕಲರ್ಸ್ ಕನ್ನಡ ಚಾನೆಲ್, ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿದಿನ ರಾತ್ರಿ ಹತ್ತಕ್ಕೆ ಪ್ರಸಾರಮಾಡುತ್ತಿದೆ.

ಇಂದು ಇಂಟರ್ನೆಟ್ ಇಲ್ಲದ ಜೀವನವಿಲ್ಲ, ಮೊಬೈಲ್ ಇಲ್ಲದ ಬದುಕಿಲ್ಲ ಎನ್ನುವ ಪರಿಸ್ಥಿತಿಯಿದೆ. ನಮ್ಮ ಸಣ್ಣ ಸಣ್ಣ ಅವಶ್ಯಕತೆಗಳಿಗೂ ನಾವು ಇವೆರಡರ ಆಸರೆ ಪಡೆದಿರುವಾಗ, ಇದನ್ನೇ ಉಪಯೋಗಿಸಿಕೊಂಡು, ನಮಗೇ ತಿಳಿಯದಂತೆ ನಮ್ಮ ಗುಪ್ತ ಮಾಹಿತಿಗಳನ್ನು ಕದ್ದು, ಅದರಿಂದ ನಮಗೆ ಅರ್ಥಿಕ ಮತ್ತು ಮಾನಸಿಕ ಹಿಂಸೆ ಕೊಡುವ ವ್ಯವಸ್ಥಿತ ಜಾಲವೇ ಕಾರ್ಯನಿರತವಾಗಿದೆ.

ಒಂದು ಮೊಬೈಲ್ ಮತ್ತು ಒಂದು ಲ್ಯಾಪ್ಟಾಪ್ ನಿಂದ ವಿಶ್ವದ ಯಾವುದೊ ಮೂಲೆಯಲ್ಲಿ ಕುಳಿತು ನಮ್ಮ ಖಾಸಗೀ ಮಾಹಿತಿಗಳಾದ, ಬ್ಯಾಂಕ್ ಅಕೌಂಟ್ ವಿವರಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ನಂಬರ್ ಗಳು , ಪಾಸ್ವರ್ಡ್ ಗಳು, OTP ಇತ್ಯಾದಿಗಳನ್ನು ನಿಮಿಷಾರ್ಧದಲ್ಲಿ ಕದಿಯುತ್ತಾರೆ.ಇದಕ್ಕೆ ಇಂಗ್ಲಿಶ್ ನಲ್ಲಿ “ಫಿಶಿಂಗ್” ಎನ್ನುತ್ತಾರೆ. ಸೈಬರ್ ಕ್ರೈಂ ನ ಅಪರಾಧಗಳ ಪಟ್ಟಿಯಲ್ಲಿ ಇದಕ್ಕೇ ಮೊದಲ ಸ್ಥಾನ. ಭಾರತದಲ್ಲಿ ಪ್ರತಿದಿನ ಸಾವಿರಾರು ಜನ ಈ ಫಿಶಿಂಗ್ ಜಾಲಕ್ಕೆ ಬಲಿಯಾಗುತ್ತಿದ್ದಾರೆ.

ಇಂಥದ್ದೇ ಒಂದು ಘಟನೆಯನ್ನಾಧರಿಸಿ ತಯಾರಿಸಿರುವ ವಿಶೇಷ ಎಪಿಸೋಡ್ ನಲ್ಲಿ,ಫಿಶಿಂಗ್ ಮಾಡುವವರ ವಂಚನೆಯ ಜಾಲ, ಅವರು ಮೋಸ ಮಾಡುವ ವಿಧಾನಗಳು,ಅದರಿಂದಬಚಾವಾಗುವ ಬಗೆ, ಅಲ್ಲದೇ, ಸಿಕ್ಕಿಕೊಂಡ ಸಂಧರ್ಭದಲ್ಲಿ ಮಾಡಬೇಕಾದ ಕಾರ್ಯಗಳು, ಸರ್ಕಾರದ ಮತ್ತು ಬ್ಯಾಂಕ್ ನ ನಿಯಮಗಳು ಇತ್ಯಾದಿಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಈ ವಿಶೇಷ ಎಪಿಸೋಡ್ ನ ಕತೆ, ಚಿತ್ರಕತೆ ಮತ್ತು ಸಂಭಾಷಣೆ, ವಾಸುದೇವ್ ಬರೆದಿದ್ದು, ಈ ಎಪಿಸೋಡ್ ನ ನಿರ್ದೇಶನ ಮಹೇಶ್ ಭಗವಾನ್ ಸಾರಂಗ್ ಮಾಡಿದ್ದಾರೆ.

ಈ ವಿಶೇಷ ಎಪಿಸೋಡ್, ದಿನಾಂಕ 16/2/2021 ಮಂಗಳವಾರ ರಾತ್ರಿ ಹತ್ತಕ್ಕೆ, ಕಲರ್ಸ್ ಕನ್ನಡ ಮತ್ತು voot ನಲ್ಲಿ ಪ್ರಸಾರವಾಗಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp