ನನ್ನ ಕೆಲಸಕ್ಕೆ ಮನ್ನಣೆ ಸಿಗುವ ಸಮಯವಿದು: ನಿರ್ದೇಶಕ ನಂದ ಕಿಶೋರ್
ನಿರ್ದೇಶಕ ನಂದ ಕಿಶೋರ್ ತಮ್ಮ ಸಿನಿ ಕೆಲಸಕ್ಕಾಗಿ ಸೂಕ್ತ ಗೌರವಕ್ಕಾಗಿ ಕಾಯುತ್ತಿದ್ದಾರೆ."ಪೊಗರು" ಚಿತ್ರದ ಮೂಲಕ ಇದನ್ನು ಸಾಬೀತುಪಡಿಸಲು ಹೊರಟಿರುವ ನಿರ್ದೇಶಕ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾರೆ.
Published: 16th February 2021 11:13 AM | Last Updated: 16th February 2021 12:45 PM | A+A A-

ಪೊಗರು ಚಿತ್ರದ ದೃಶ್ಯ
ನಿರ್ದೇಶಕ ನಂದ ಕಿಶೋರ್ ತಮ್ಮ ಸಿನಿ ಕೆಲಸಕ್ಕಾಗಿ ಸೂಕ್ತ ಗೌರವಕ್ಕಾಗಿ ಕಾಯುತ್ತಿದ್ದಾರೆ."ಪೊಗರು" ಚಿತ್ರದ ಮೂಲಕ ಇದನ್ನು ಸಾಬೀತುಪಡಿಸಲು ಹೊರಟಿರುವ ನಿರ್ದೇಶಕ ಇದನ್ನೊಂದು ಸವಾಲಾಗಿ ಸ್ವೀಕರಿಸಿದ್ದಾರೆ. ಈ ಚಿತ್ರದ ಮೂಲಕ ವಿಶ್ವಾಸಾರ್ಹತೆಯನ್ನು ಗಳಿಸಲು ಹೊರಟಿದ್ದಾರೆ. ಇದೇ ಶುಕ್ರವಾರ "ಪೊಗರು" ಚಿತ್ರ ತೆರೆ ಕಾಣುತ್ತಿದ್ದು ಇದಕ್ಕೆ ಮುನ್ನ ನಂದ ಕಿಶೋರ್ "ಸಿನಿ ಎಕ್ಸ್ಪ್ರೆಸ್" ಜತೆ ಮಾತನಾಡಿದ್ದಾರೆ
“ನಾನು ಇತರರ ಮೇಲೆ ಬಹಳ ಅವಲಂಬಿತನಾಗಿದ್ದೇನೆ.ನಾನೇ ಸ್ವಂತ ಯೋಜನೆ ತಯಾರಿಸಲು ಸಾಧ್ಯವಿಲ್ಲ ಎಂದು ಜನ ಭಾವಿಸಿದ್ದ ಸಮಯವಿತ್ತು. ನನ್ನ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆಗಳು ಎದ್ದವು. ಇದೆಲ್ಲವನ್ನೂ ನಾನು ನನ್ನ ಮನಸ್ಸಿಗೆ ತೆಗೆದುಕೊಂಡೆ.ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ ಮತ್ತು ನಾನು ಯಾವಾಗಲೂ ಟೀಂ ನ ಭಾಗವಾಗಿದ್ದೇನ್ ಎಂದುಕೊಂಡಿದ್ದೆ. ಆದರೆ ನನ್ನ ಕೆಲಸ ನನಗೆ ಹೆಸರು ತರಲಿಲ್ಲ.
"ಪೊಗರು" ಸಿನಿಮಾ ಕೇವಲ ನಂದ ಕಿಶೋರ್ ಅವರದ್ದೇ ಯೋಜನೆ ಎನ್ನುವುದುಅನ್ನು ನಿರ್ದೇಶಕ ಸಾರಿ ಸಾರಿ ಹೇಳಲು ಹೊರಟಿಸಿದ್ದಾರೆ.ತಮ್ಮ ಪ್ರಯತ್ನಗಳಿಗೆ ಸರಿಯಾದ ಗೌರವವನ್ನು ಪಡೆಯುವ ಸಮಯಎಂದು ಅವರು ಭಾವಿಸುತ್ತಾರೆ ಮತ್ತು ಯೋಗರಾಜ್ ಭಟ್, ಸೂರಿ ಮತ್ತು ಪ್ರಶಾಂತ್ ನೀಲ್ ಅವರಂತಹ ನಿರ್ದೇಶಕರ ಸಾಲಿನಲ್ಲಿ ಕಾಣಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾರೆ.ಈ ಹಿಂದೆ "ಬೃಹಸ್ಪತಿ", ಚಿತ್ರ ಮಾಡಿದಾಗ ಜನ ಸಂತಸಪಟ್ಟರು ಆದರೆ ಗುರುತಿಸಿಲ್ಲ.ರೀಮೇಕ್ ನೊಂದಿಗೆ ಹಿಟ್ ಚಿತ್ರ ನೀಡುವುದು ಸುಲಭದ ಮಾತಲ್ಲ.ನಾನು ಎರಡೂ ಕೆಲಸಗಳನ್ನು ಮಾಡಬಹುದು ಎಂದು ಸಾಬೀತುಪಡಿಸಲು ಇಲ್ಲಿ ನಿಂತಿದ್ದೇನೆ."
ನಂದ ಕಿಶೋರ್ ಹೇಳಿದಂತೆ "ಪೊಗರು"‘ಮಾಸ್ ಫ್ಲಿಕ್’ ಸಿನಿಮಾ, ಈ ಚಿತ್ರದಲ್ಲಿ ಧ್ರುವ ಅವರಿಗಾಗಿ ಚಿತ್ರಿಸಿದ ಪಾತ್ರದ ಬಗ್ಗೆ ವಿವರಿಸಿದ ನಿರ್ದೇಶಕ , “ಪ್ರಮುಖ ಪಾತ್ರವು ಕುಖ್ಯಾತವಾಗಿದ್ದು ಖರಾಬು ಅಂತಹಾ ಪದಗಳ ಬಳಕೆ ಮಾಡಿದ್ದೇನೆ. , ಅದು ನಾಯಕನಿಂದ ನಿಯಮಿತ ಕೆಲಸ ಬೇಡುವುದಿಲ್ಲ.ಪೊಗರು ಒಂದು ವರ್ತನೆ, ಅದು ನಿಮಗೆತಿಳಿದಾಗ ಮತ್ತು ಯಾವುದನ್ನಾದರೂ ನಂಬುವಾಗ ಕಾಣಿಸುತ್ತದೆ.. ಅದನ್ನೇ ನಾನು ಧ್ರುವ ಪಾತ್ರದ ಮೂಲಕ ಹೊರತರುವ ಪ್ರಯತ್ನ ಮಾಡಿದ್ದೇನೆ, ಕಮರ್ಷಿಯಲ್ ಅಂಶಗಳಲ್ಲದೆ , ಕಥೆಯ ಕೇಂದ್ರ ಬಿಂದುವಾಗಿರುವ ಭಾವನಾತ್ಮಕ ತಾಯಿ-ಮಗನ ಸಂಬಂಧವನ್ನು ವೀಕ್ಷಕರು ಇಲ್ಲಿ ಕಾಣುತ್ತಾರೆ. ಎಮ್ದು ಬ್ಲಾಕ್ಬಸ್ಟರ್ ಚಿತ್ರ ಜೋಗಿಯ ಉದಾಹರಣೆ ನೀಡಿ ನಂದ ಕಿಶೋರ್ ತಿಳಿಸಿದ್ದಾರೆ.
“ನಾನು ಕೋಪ ಮತ್ತು ಅಸಡ್ಡೆ ಮುಂತಾದ ಭಾವನೆಗಳನ್ನು ಹಾಗೇ ಇರಿಸಬೇಕಿತ್ತು. ನನ್ನ ಮೊದಲ ಹೆಜ್ಜೆ ಧ್ರುವ ಲುಕ್ ಅನ್ನು ಬದಲಾಯಿಸುವುದು. ಅವರು ತೆಳ್ಳಗಿದ್ದ್ವನು ಬೃಹತ್ ಗಾತ್ರಕ್ಕೆ ಬದಲಾಗಬೇಕಿತ್ತು.
“ಎಲ್ಲಾ ಸ್ಟಾರ್ ಗಳು ಮುದ್ದುಗರೆಯುವ ಮಕ್ಕಳಂತೆ, ಧ್ರುವನನ್ನು ಸಹ ನಾನು ಚಿಕ್ಕ ಬಾಲಕನಂತೆ ಕಾಣುತ್ತೇನೆ. ಅವನು ನನ್ನನ್ನು ಅಪ್ಪಾಜಿ ಎಂದು ಕರೆಯುತ್ತಾನೆ ” ತಮಗೆ ಈ ಯೋಜನೆ ನೀಡಿದ್ದ ನಟ ಮತ್ತು ನಿರ್ಮಾಪಕ ಬಿ.ಕೆ.ಗಂಗಾಧರ್ ಅವರಿಗೆ ನಂದ ಕಿಶೋರ್ ಧನ್ಯವಾದ ಹೇಳಿದ್ದಾರೆ. ತಮಿಳು ಮತ್ತು ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವ ಪೊಗರು ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, “ಇಂದು ನಾವು ಕನ್ನಡ, ತಮಿಳು, ತೆಲುಗು ಅಥವಾ ಮಲಯಾಳಂ ನಿರ್ದೇಶಕರಾಗಿ ವಿಭಜಿತವಾಗಿಲ್ಲ. ಏಕೆಂದರೆ ಭಾಷೆಗಳ ಅಡೆತಡೆಗಳನ್ನು ದಾಟಿದ್ದೇವೆ. ಇದು ಇತರ ರಾಜ್ಯಗಳಲ್ಲಿ ಲ್ಲಿ ನಮ್ಮ ಕೆಲಸವನ್ನು ಪ್ರದರ್ಶಿಸುವ ಸಮಯ."
ರಶ್ಮಿಕಾ ಮಂದಣ್ಣ, ಧನಂಜಯ್, ಮಯೂರಿ, ಸಂಪತ್, ಚಿಕ್ಕಣ್ಣ, ಮತ್ತು ಕುರಿ ಪ್ರತಾಪ್ ಮುಂತಾದವರು ಅಭಿನಯಿಸಿರುವ ಚಿತ್ರ ವಿಳಂಬವಾಗುತ್ತಿರುವ ಬಗ್ಗೆ ಜನರು ಆಗಾಗ್ಗೆ ಮಾತನಾಡುತ್ತಾರೆ, ಮತ್ತು ಅಂತಹ ಕೆಲವುಮಾತುಗಳು ನಮಗೆ ನೋವುಂಟು ಮಾಡಿದೆ. ಸಾಂಕ್ರಾಮಿಕವು ಸುಮಾರು ಒಂದು ವರ್ಷದ ಕಾಲ ಜಗತ್ತನ್ನು ನಿಷ್ಕ್ರಿಯವಾಗಿಸಲಿದೆ ಎಂದು ನಾನು ಭಾವಿಸಿರಲಿಲ್ಲ. ಅಲ್ಲದೆ ಧ್ರುವ ಕುಟುಂಬದಲ್ಲಿ ಸಂಭವಿಸಿದ ದುರಂತವನ್ನು ನಾವು ಊಹಿಸಲು ಸಾಧ್ಯವಿಲ್ಲ. ನಾವು ಪ್ರಕೃತಿಗೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ, ಆದರೆ ಸುಮಾರು ಮೂರೂವರೆ ವರ್ಷಗಳಿಂದ ಯೋಜನೆಯ ಕೆಲಸದಲ್ಲಿದ್ದರೂ ನಾವಿನ್ನೂ ಅದನ್ನು ಹೊಸತನದಿಂದ ಕೂಡಿರುವಂತೆ ಜಾಗೃತಿ ವಹಿಸಿದ್ದೇವೆ.ಅದನ್ನೇ ನಾನು ‘ಅದೃಷ್ಟ’ ಎಂದು ಕರೆಯುತ್ತೇನೆ, ”ಎಂದು ಅವರು ಹೇಳುತ್ತಾರೆ.