'ಪೊಗರು' ನನಗಾಗಿ ಮಾಡಿದ ಕಥೆಯಲ್ಲ: ಧ್ರುವ ಸರ್ಜಾ
"ಪೊಗರು" ಸಿನಿಮಾವನ್ನು ತಮ್ಮ ಸೋದರ ದಿವಂಗತ ಚಿರಂಜೀವಿ ಸರ್ಜಾ ಅವರಿಗೆ ಅರ್ಪಿಸುತ್ತಿರುವ ನಟ ಧ್ರುವ ಸರ್ಜಾ ನಂದ ಕಿಶೋರ್ ನಿರ್ದೇಶನ ವಾಸ್ತವಕ್ಕೆ ಹತ್ತಿರವಾಗುವಂತಿರುತ್ತದೆ ಎಂದಿದ್ದಾರೆ.
Published: 18th February 2021 11:04 AM | Last Updated: 18th February 2021 01:09 PM | A+A A-

ಧ್ರುವ ಸರ್ಜಾ
"ಪೊಗರು" ಸಿನಿಮಾವನ್ನು ತಮ್ಮ ಸೋದರ ದಿವಂಗತ ಚಿರಂಜೀವಿ ಸರ್ಜಾ ಅವರಿಗೆ ಅರ್ಪಿಸುತ್ತಿರುವ ನಟ ಧ್ರುವ ಸರ್ಜಾ ನಂದ ಕಿಶೋರ್ ನಿರ್ದೇಶನ ವಾಸ್ತವಕ್ಕೆ ಹತ್ತಿರವಾಗುವಂತಿರುತ್ತದೆ ಎಂದಿದ್ದಾರೆ.
"ಸಿನಿ ಎಕ್ಸ್ಪ್ರೆಸ್"ನೊಂದಿಗೆ ,ಮಾತನಾಡಿರುವ ಧ್ರುವ ಸರ್ಜಾ "ಅದ್ದೂರಿ","ಬಹದ್ದೂರ್","ಭರ್ಜರಿ" ನಂತರ ನಾಲ್ಕನೇ ಚಿತ್ರ "ಪೊಗರು" ಗಾಗಿ ಎಲ್ಲವನ್ನೂ ಮಾಡಿದಾರೆ. “ಇದು ನನಗಾಗಿ ಮಾಡಿದ ಕಥಾ ಪ್ರಕಾರವಲ್ಲ. ನಿರ್ದೇಶಕರು ಚಿತ್ರಿಸಿದ ಮತ್ತು ಕಥೆಯ ಆಧಾರದ ಮೇಲೆ ನಾನು ವಿವಿಧ ಹಂತಗಳಲ್ಲಿ ಪಾತ್ರದಲ್ಲಿದ್ದೇನೆ” ಎಂದು ಧ್ರುವ ಹೇಳುತ್ತಾರೆ.
"ನಾನು ಹೇಗೆ ಕಾಣಬೇಕು ಮತ್ತು ಅನುಭವವಾಗಬೇಕು ಎಂಬುದರ ಬಗೆಗೆ ಪೊಗರು ಸಿನಿಮಾದಲ್ಲಿ ನನಗೆ ಆಯ್ಕೆಗಳಿರಲಿಲ್ಲ. ಬದಲಾಗಿ, ಪಾತ್ರಕ್ಕೆ ಏನು ಬೇಕೋ ಅದಕ್ಕೆ ನಾನು ತಯಾರಾಗಬೇಕಿತ್ತು. ಇದರಲ್ಲಿ ನಾನು 17 ವರ್ಷದ ಹುಡುಗನಾಗಿ ಕಾಣಬೇಕಿತ್ತು. ನಾನು ಆರಂಭದಲ್ಲಿ 5 ಕೆಜಿ ಇಳಿಸಲು ನೋಡಿದೆ, ನಂತರ 10 ಕೆಜಿ, ಆದರೆ 33 ಕೆಜಿ ತೂಕವನ್ನು ಕಳೆದುಕೊಂಡೆ. ನಂತರ, ನನ್ನನ್ನು ಮತ್ತೆ ತೀವ್ರ ರೀತಿಯಲ್ಲಿ ತೂಕ ಏರಿಸಿಕೊಳ್ಳಲು ಕೇಳಲಾಯಿತು, ಒಟ್ಟಾರೆಯಾಗಿ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ಸುಲಭದ ಕೆಲಸವಲ್ಲ”ಎಂದು ನಟ ವಿವರಿಸಿದ್ದಾರೆ. ನಿರ್ದೇಶಕ ನಂದ ಕಿಶೋರ್ ಚಿತ್ರ ಪ್ರಾರಂಭವಾಗುವ ಮೊದಲು ಈ ಎಲ್ಲ ಅಂಶಗಳನ್ನು ತನ್ನ ಮುಂದೆ ಇಟ್ಟಿದ್ದರು ಎಂದು ಧ್ರುವ ನೆನಪಿಸಿಕೊಳ್ಳುತ್ತಾರೆ.
"ಹೆಚ್ಚು ಯೋಚಿಸಿದ ನಂತರ ಣಾನು ಅದನ್ನು ಸವಾಲಾಗಿ ಸ್ವೀಕರಿಸಿದೆ. ನನ್ನ ಪಾತ್ರದಲ್ಲಿ ನಾನು ತುಂಬಾ ತೊಡಗಿಸಿಕೊಂಡಿದ್ದೇನೆ, ಶಾಲಾಮಕ್ಕಳ ಲುಕ್ ಗಾಗಿ ನಾನು ಯಾರಿಗೂ ವಂಚಿಸಲು ಬಯಸುವುದಿಲ್ಲ. ನಾನು ಅದನ್ನು ಒಂದು ಅವಕಾಶವಾಗಿ ತೆಗೆದುಕೊಂಡಿದ್ದೇನೆ ಹೈ-ಆಕ್ಟೇನ್-ಆಕ್ಷನ್ ಮತ್ತು ಎಲ್ಲಾ ಕಮರ್ಷಿಯಲ್ ಅಂಶಗಳ ಹೊರತಾಗಿ, ಪೊಗರು ಒಂದು ಫ್ಯಾಮಿಲಿ ಡ್ರಾಮಾ ಆಗಿದೆ ಎಂದು ಧ್ರುವ ಹೇಳುತ್ತಾರೆ.
"ತಾಯಿ-ಮಗನ ಬಂಧ, ಸಹೋದರ-ಸಹೋದರಿ ಸಂಬಂಧ, ಮತ್ತು ನಾಯಕಿಯೊಂದಿಗಿನ ನಾಯಕನ ಬಾಂಧವ್ಯ, ಇವೆಲ್ಲವೂ ಯುವಕ ಭೂತಕಾಲದ ಹಿನ್ನೆಲೆಯಲ್ಲಿ ಹೇಳಲಾಗಿದೆ. ಬಾಲ್ಯದ ಕೆಟ್ಟ ಅನುಭವಗಳು ಆತನ ಬೆಳವಣಿಗೆಯಲ್ಲಿ ಬೀರುವ ಪರಿಣಾಮ, ಆತನ ಭವಿಷ್ಯದ ಜೀವನವನ್ನು ರೂಪಿಸುವ ರೀತಿ ಮತ್ತು ಅವನ ಸಂಬಂಧಗಳ ಮೇಲೆ ಅದರ ಪರಿಣಾಮದ ಬಗ್ಗೆ ಚಿತ್ರ ಮಾತನಾಡಿದೆ" ಎಂದು ಧ್ರುವ ಹೇಳಿದರು.
“ನಾನು ಈ ಚಿತ್ರಕ್ಕಾಗಿ ಯಾವುದೇ ಮೇಕಪ್ ಮಾಡಿಲ್ಲ. ಗ್ಲಿಸರಿನ್ ಬಳಸಿಲ್ಲ. ಪೊಗರುನಲ್ಲಿನ ಎಲ್ಲಾ ಸಂಗತಿಗಳು ನನಗೆ ವಾಸ್ತವಕ್ಕೆ ಬಹಳ ಹತ್ತಿರವಾಗುತ್ತವೆ ”ಎಂದು ಧ್ರುವ ಹೇಳುತ್ತಾರೆ.