ಯುಟ್ಯೂಬ್ ಸೇರಿ ಅಂತರ್ಜಾಲದಲ್ಲಿ 'ರಾಬರ್ಟ್' ಟ್ರೇಲರ್ ಅಬ್ಬರವೋ ಅಬ್ಬರ!
ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನದಂದು "ರಾಬರ್ಟ್" ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
Published: 18th February 2021 10:56 AM | Last Updated: 18th February 2021 01:07 PM | A+A A-

'ರಾಬರ್ಟ್' ಟ್ರೇಲರ್
ಫೆಬ್ರವರಿ 16 ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನ್ಮದಿನದಂದು "ರಾಬರ್ಟ್" ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಆಕ್ಷನ್-ಪ್ಯಾಕ್ಡ್ 2.20 ನಿಮಿಷಗಳ ಟ್ರೇಲರ್ ಚಾಲೆಂಜಿಂಗ್ ಸ್ಟಾರ್ ನ ಸೊಗಸಾದ ಮಾಸ್ ಪಾತ್ರದ ಒಂದು ಲುಕ್ ಅನ್ನು ನೀಡಿತು, ವಿ ಹರಿರಿಕೃಷ್ಣ ಸಂಯೋಜಿಸಿದ ಹಿನ್ನೆಲೆ ಸಂಗೀತ ಸುಧಾಕರ್ ಎಸ್ ರಾಜ್ ಅವರ ಚಿತ್ರೀಕರಣ ನೈಪುಣ್ಯ ಈ ಟ್ರೇಲರ್ ನಲ್ಲಿ ಎದ್ದು ಕಾಣುತ್ತಿತ್ತು.
ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಚಿತ್ರದ ಟ್ರೇಲರ್ ನಿಂದ ಒಂದೆರಡು ಡೈಲಾಗ್ಗಳು ಸಹ ವೈರಲ್ ಆಗಿವೆ. ಕನ್ನಡ ಟ್ರೇಲರ್ 7 ಮಿಲಿಯನ್ ವೀಕ್ಷಣೆಗಳನ್ನು ದಾಟಿ ಮುಂದುವರಿದು ಯುಟ್ಯೂಬ್ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದೇ ದಿನ ಬಿಡುಗಡೆಯಾದ ತೆಲುಗು ಆವೃತ್ತಿ ಸಹ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರತಂಡ ಇದೀಗ ಇಮ್ಮಡಿ ಉತ್ಸಾಹವನ್ನು ತಾಳಿದ್ದು ಜನ್ಮದಿನದಂದು ದರ್ಶನ್ ಗೆ ಶುಭಕೋರಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಲ್ಲದೆ ಟ್ರೇಲರ್ ಗೆ ನೀಡಿದ ಅದ್ಭುತ ಪ್ರತಿಕ್ರಿಯೆಗಾಗಿ ಸಹ ಮೆಸೇಜ್ ಹಂಚಿಕೊಂಡಿದೆ.
ರಾಬರ್ಟ್ ಎರಡು ಛಾಯೆಗಳಲ್ಲಿ ದರ್ಶನ್ ಅವರನ್ನು ತೋರಿಸಿದೆ. ಗಜಪತಿ ಬಾಬು, ರವಿ ಕಿಶನ್ ಮತ್ತು ರವಿಶಂಕರ್ ಅವರಂತಹ ಪ್ರಸಿದ್ಧ ನಟರೂ ಇರುವ ಈ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದರೆ, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ ಮತ್ತು ಐಶ್ವರ್ಯ ಪ್ರಸಾದ್ ಸಹ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಉಮಾಪತಿ ಎಸ್ ಗೌಡ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು ಮಹಾಶಿವರಾತ್ರಿಯ ದಿನವಾದ ಮಾರ್ಚ್ 11 ರಂದು "ರಾಬರ್ಟ್" ಚಿತ್ರಮಂದಿರಗಳಿಗೆ ಬರುತ್ತಿದೆ.