ತಂದೆ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜೂ.ಚಿರು, ವಿಡಿಯೋ!
ನಟ ಚಿರಂಜೀವಿ ಸರ್ಜಾ ಕಳದೆ ವರ್ಷ ಅಕಾಲಿಕ ಮರಣ ಹೊಂದಿದ್ದರು. ಅವರು ಅಭಿನಯಿಸಿದ್ದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಜೂ. ಚಿರು ಬಿಡುಗಡೆ ಮಾಡಿದ್ದಾರೆ.
Published: 19th February 2021 03:17 PM | Last Updated: 19th February 2021 04:04 PM | A+A A-

ಚಿತ್ರದ ಸ್ಟಿಲ್
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಕಳದೆ ವರ್ಷ ಅಕಾಲಿಕ ಮರಣ ಹೊಂದಿದ್ದರು. ಅವರು ಅಭಿನಯಿಸಿದ್ದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಜೂ. ಚಿರು ಬಿಡುಗಡೆ ಮಾಡಿದ್ದಾರೆ.
ಮೇಘನಾ ರಾಜ್ ತಮ್ಮ ಮಗನ ಕೈಯಲ್ಲಿ ಮೊಬೈಲ್ ನಲ್ಲಿ ವಿಡಿಯೋವನ್ನು ಲಾಂಚ್ ಮಾಡಿಸಿದ್ದಾರೆ. ಈ ವಿಡಿಯೋ ಮೇಘನಾ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿರಂಜೀವಿ ಸರ್ಜಾ ನಿಧನಕ್ಕೂ ಮುನ್ನ ರಾಜಮಾರ್ತಾಂಡ ಚಿತ್ರದಲ್ಲಿ ನಟಿಸಿದ್ದರು. ಇನ್ನು ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳು ಬಾಕಿ ಇತ್ತು. ಅಂತೆ ಅಣ್ಣನ ಚಿತ್ರಕ್ಕೆ ತಮ್ಮ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಬಿಡುಗಡೆ ದಿನದಂದೆ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಟ್ರೈಲರ್ ಬಿಡುಗಡೆ ಮಾಡಲಾಗಿದೆ.