ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ 'ಪೊಗರು': ಮೂರು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ?
ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಕಳೆದ ವಾರ ಸುಮಾರು 1 ಸಾವಿರ ಸ್ಕ್ರೀನ್ ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಕಂಡ ಆಕ್ಷನ್ ಕಿಂಗ್ ಧ್ರುವ ಸರ್ಜಾ ಅಭಿನಯದ ನಾಲ್ಕನೇ ಸಿನಿಮಾ 'ಪೊಗರು' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.
Published: 22nd February 2021 06:09 PM | Last Updated: 22nd February 2021 06:10 PM | A+A A-

ಧ್ರುವ ಸರ್ಜಾ
ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಕಳೆದ ವಾರ ಸುಮಾರು 1 ಸಾವಿರ ಸ್ಕ್ರೀನ್ ಗಳಲ್ಲಿ ಗ್ರ್ಯಾಂಡ್ ಓಪನಿಂಗ್ ಕಂಡ ಆಕ್ಷನ್ ಕಿಂಗ್ ಧ್ರುವ ಸರ್ಜಾ ಅಭಿನಯದ ನಾಲ್ಕನೇ ಸಿನಿಮಾ 'ಪೊಗರು' ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.
ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಸಾಧಾರಣ ವಹಿವಾಟು ನಡೆಸಿರುವ ಪೊಗರು, ಬಿಡುಗಡೆಯಾದ ಮೂರನೇ ದಿನಕ್ಕೆ 30ಕ್ಕೂ ಹೆಚ್ಚು ಕೋಟಿ ರೂ. ಬಾಚಿದೆ ಎನ್ನಲಾಗಿದೆ. ಈ ಬಗ್ಗೆ ಟ್ವೀಟರ್ ನಲ್ಲಿ ಧ್ರುವ ಸರ್ಜಾ ಅವರೇ ಹೇಳಿಕೊಂಡಿದ್ದು, ಚಿತ್ರವನ್ನು ಬೆಂಬಲಿಸಿರುವ ವೀಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
POGARUU Thanks to Karnataka Jai Hanuman pic.twitter.com/Txj4GWcMJr
— Dhruva Sarja (@DhruvaSarja) February 22, 2021
ಕರ್ನಾಟಕವೊಂದರಲ್ಲಿಯೇ ಬಿಡುಗಡೆಯಾದ ಎರಡು ದಿನಗಳಲ್ಲಿ 21 ಕೋಟಿ ರೂ. ಕಲೆಕ್ಷನ್ ಮಾಡಿರುವ ಪೊಗರು ಚಿತ್ರ, ಮೂರನೇ ದಿನವಾದ ಭಾನುವಾರದಂದು ದೊಡ್ಡ ಮಟ್ಟದ ವಹಿವಾಟು ನಡೆಸಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಒಟ್ಟಾರೇ, 30ಕ್ಕೂ ಹೆಚ್ಚು ಕೋಟಿ ಬಾಚಿರುವ ವಿಶ್ವಾಸ ಹೊಂದಿರುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.
1st 2days colleaction of POGARUU in Karnataka is 21 cr Thanks to Karnataka Jai Hanuman pic.twitter.com/6A45q1qXKN
— Dhruva Sarja (@DhruvaSarja) February 21, 2021
ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪೊಗರು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದೆ . ಆದಾಗ್ಯಾ, ಈ ಸಂಬಂಧದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಬಿ. ಕೆ. ಗಂಗಾಧರ್ ನಿರ್ಮಿಸಿರುವ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದು, ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.