ಹುಬ್ಬಳ್ಳಿಯಲ್ಲಿ ರಾಬರ್ಟ್ ಅಬ್ಬರ: ಫೆಬ್ರವರಿ 28 ರಂದು ಅದ್ಧೂರಿ ಪ್ರಿ-ರಿಲೀಸ್ ಕಾರ್ಯಕ್ರಮ

ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಬರ್ಟ್ ಚಿತ್ರದ ಬಿಡುಗಡೆಗೆ ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿರುವುದರಿಂದ, ದರ್ಶನ್-ನಟನೆಯ ರಾಬರ್ಟ್ ದ ಚಿತ್ರದ ತಯಾರಕರು ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ತಲುಪಿಸಲು ಸಿಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

Published: 22nd February 2021 10:21 AM  |   Last Updated: 22nd February 2021 12:29 PM   |  A+A-


A srill from roberrt

ರಾಬರ್ಟ್ ಸಿನಿಮಾ ಸ್ಟಿಲ್

Posted By : Shilpa D
Source : The New Indian Express

ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಬರ್ಟ್ ಚಿತ್ರದ ಬಿಡುಗಡೆಗೆ ಒಂದು ತಿಂಗಳಿಗಿಂತಲೂ ಕಡಿಮೆ ಸಮಯವಿರುವುದರಿಂದ, ದರ್ಶನ್-ನಟನೆಯ ರಾಬರ್ಟ್ ದ ಚಿತ್ರದ ತಯಾರಕರು ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ತಲುಪಿಸಲು ಸಿಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಈಗಾಗಲೇ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಪ್ರಮೋಷನ್ ಚಟುವಟಿಗಳಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ರಾಬರ್ಟ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. 

ಇನ್ನು ಚಿತ್ರದಿಂದ ರಿಲೀಸ್ ಆಗಿರುವ ಹಾಡುಗಳು ಸಹ ಗಾನಪ್ರಿಯರ ಹೃದಯ ಗೆದ್ದಿವೆ. ಮೊನ್ನೆ ಮೊನ್ನೆಯಷ್ಟೆ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಸಿನಿಮಾತಂಡ ಮತ್ತೊಂದು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಉತ್ತರ ಕರ್ನಾಟಕದ ಅಭಿಮಾನಿಗಳ ಮನಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

ರಿಲೀಸ್ ಗೂ ಮೊದಲು ಸಿನಿಮಾ ತಂಡ ಅದ್ದೂರಿಯಾಗಿ ಪ್ರಿ ರಿಲೀಸ್ ಕಾರ್ಯಕ್ರಮ ಮಾಡಲು ಪ್ಲಾನ್ ಮಾಡಿದೆ. ವಿಶೇಷ ಎಂದರೆ ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. 

ಫೆಬ್ರವರಿ 28ಕ್ಕೆ ನಡೆಯಲಿದೆ ಕಾರ್ಯಕ್ರಮ ಗಂಡು ಮೆಟ್ಟಿದ ನಾಡು ಹಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದೆ. ಇಡೀ ರಾಬರ್ಟ್ ತಂಡ ಹುಬ್ಬಳ್ಳಿಯಲ್ಲಿ ಬೀಡುಬಿಡಲಿದೆ. ಈಗಾಗಲೇ ಗ್ರ್ಯಾಂಡ್ ಈವೆಂಟ್ ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಹುಬ್ಬಳ್ಳಿ ಮಂದಿ ದರ್ಶನ್ ಅವರನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. 

ಇನ್ನು ವಿಶೇಷ ಎಂದರೆ ಈ ಅದ್ದೂರಿ ವೇದಿಕೆಯಲ್ಲಿ ರಾಬರ್ಟ್ ಸಿನಿಮಾದ ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ತೆಲುಗಿನಲ್ಲೂ ಅದ್ದೂರಿಯಾಗಿ ತೆರೆಗೆ ಬರುತ್ತಿದೆ ರಾಬರ್ಟ್ ರಾಬರ್ಟ್ ಸಿನಿಮಾ ಕನ್ನಡದ ಜೊತೆಗೆ ತೆಲುಗಿನಲ್ಲೂ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp