'ಹಿರೋ' ಟೀಂಗೆ ಸ್ವಾವಲಂಬನೆ ಕಲಿಸಿದ ಕೊರೋನಾ ಅವಧಿ!

ರಿಷಭ್ ಶೆಟ್ಟಿ ನಟನೆಯ ಹಿರೋ ಸಿನಿಮಾ, ಅತ್ಯಂತ ಸವಾಲಿನ ಕೋವಿಡ್-19 ಅವಧಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವುದೂ ಸೇರಿ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಈ ಪೈಕಿ ಸ್ವಾವಲಂಬನೆಯೂ ಪ್ರಮುಖವಾದದ್ದು. 

Published: 23rd February 2021 02:14 PM  |   Last Updated: 23rd February 2021 02:43 PM   |  A+A-


Arvind Kashyap

ಛಾಯಾಗ್ರಹಣ ನಿರ್ದೇಶಕ ಅರವಿಂದ್ ಕಶ್ಯಪ್

Posted By : Srinivas Rao BV
Source : The New Indian Express

ರಿಷಭ್ ಶೆಟ್ಟಿ ನಟನೆಯ ಹಿರೋ ಸಿನಿಮಾ, ಅತ್ಯಂತ ಸವಾಲಿನ ಕೋವಿಡ್-19 ಅವಧಿಯಲ್ಲಿ ಚಿತ್ರೀಕರಣಗೊಂಡ ಸಿನಿಮಾ ಎನ್ನುವುದೂ ಸೇರಿ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಈ ಪೈಕಿ ಸ್ವಾವಲಂಬನೆಯೂ ಪ್ರಮುಖವಾದದ್ದು. 

ಕೋವಿಡ್-19 ಅವಧಿ ಎಂದಮೇಲೆ ಕೇಳಬೇಕೆ? ನಿರ್ಬಂಧಗಳು, ಕಡಿಮೆ ಸಂಖ್ಯೆಯಲ್ಲಿ ಜನರನ್ನಿಟ್ಟುಕೊಂಡು ಕೆಲಸ ಮಾಡುವುದೆಲ್ಲಾ ತಿಳಿದೇ ಇದೆ. ಅಂತಹದ್ದೇ ಪರಿಸ್ಥಿತಿಯನ್ನು ಸದ್ವಿನಿಯೋಗ ಮಾಡಿಕೊಂಡು ಅದ್ಭುತಗಳನ್ನು ಸೃಷ್ಟಿಸಿದೆ ಹಿರೋ ಸಿನಿಮಾದ ತಂಡ. 

ಈ ಬಗ್ಗೆ ಸಿನಿಮಾದ ಛಾಯಾಗ್ರಹಣ ನಿರ್ದೇಶಕ ಅರವಿಂದ್ ಕಶ್ಯಪ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಕೊರೋನಾ ಅವಧಿಯಲ್ಲಿ ಚಿತ್ರೀಕರಣ ನಡೆದಿದ್ದು ತಂಡಕ್ಕೆ ಸ್ವಾವಲಂಬನೆಯ ಮಂತ್ರವನ್ನು ಕಲಿಸಿತ್ತು, 24 ಜನರನ್ನೊಳಗೊಂಡ ತಂಡದಲ್ಲಿ ಎಲ್ಲವೂ ಸುರಕ್ಷತೆಯಿಂದ ನಡೆಯಬೇಕಿತ್ತು, ಅಷ್ಟೇ ಅಲ್ಲದೇ ಹೆಚ್ಚಿನ ಮಾನವ ಶಕ್ತಿಯನ್ನು ಬಳಸಿಕೊಳ್ಳದೇ ಇರುವುದರಲ್ಲಿಯೇ ಸಿನಿಮ ಕಥೆಗೆ ಅಗತ್ಯವಿರುವ ರೀತಿಯಲ್ಲಿ ಚಿತ್ರೀಕರಣ ಮಾಡಬೇಕಾಯಿತು. ಈ ವೇಳೆ ಹಲವು ಸ್ವಾವಲಂಬನೆಯ ಪಾಠಗಳನ್ನು ಕಲಿತಿದ್ದೆವೆ. ತಂಡದಲ್ಲಿರುವವರನ್ನೇ ನಿಭಾಯಿಸಿಕೊಂಡು ಶೂಟಿಂಗ್ ಮಾಡಲಾಗಿದೆ. ಕಲಾವಿದರೂ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಈ ಸ್ವಾವಲಂಬನೆಯ ಮಂತ್ರದಿಂದ ಸಾಕಷ್ಟು ಸಂಗತಿಗಳನ್ನು ಅನ್ವೇಷಿಸುವುದಕ್ಕೆ ಸಾಧ್ಯವಾಯಿತು, ಸೃಜನಶೀಲತೆ ಹೆಚ್ಚಾಗಿ ಮೂಡಲು ಸಾಧ್ಯವಾಯಿತು" ಎನ್ನುತ್ತಾರೆ ಅರವಿಂದ್ ಕಶ್ಯಪ್ 

ಸಾಮಾನ್ಯವಾಗಿ ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಕನಿಷ್ಟ ಸೂಕ್ತವಾದ ಯುನಿಟ್ ನ ಲಭ್ಯತೆ ಇರುತ್ತದೆ. ಆದರೆ ಹಿರೋನಲ್ಲಿ ನಿರ್ದಿಷ್ಟ ಸಂಖ್ಯೆಯ ಪಾತ್ರವರ್ಗ ಮತ್ತು ಸಿಬ್ಬಂದಿ ಸದಸ್ಯರನ್ನಿಟ್ಟುಕೊಂಡೇ ಪ್ರಯೋಗ ಮಾಡಬೇಕಾಗಿತ್ತು. ಕೋವಿಡ್-19 ಇಲ್ಲದೇ ಇದ್ದಿದ್ದರೆ ಇಂತಹ ವಿನೂತನ ಪ್ರಯೋಗಗಳಿಗೆ ಅವಕಾಶ ಇರುತ್ತಿರಲಿಲ್ಲ, ಸೃಜನಶೀಲತೆಯೂ ಈ ಪ್ರಮಾಣದಲ್ಲಿ ಮೂಡುತ್ತಿರಲಿಲ್ಲ ಎಂದು ತಮ್ಮ ಅನುಭವಗಳನ್ನು ಅರವಿಂದ್ ಕಶ್ಯಪ್ ಹಂಚಿಕೊಂಡಿದ್ದಾರೆ. 

ಸೃಜನಶೀಲತೆ ದೃಷ್ಟಿಯಿಂದ ನೋಡಿದರೆ ಸರಳವಾಗಿದ್ದಷ್ಟೂ ಸುಂದರವಾಗಿ ಕಾಣುತ್ತದೆ. ಎಲ್ಲವೂ ಲಭ್ಯವಿದ್ದಾಗ ಮಿತಿಮೀರಿ ಮಾಡಲು ಯತ್ನಿಸುತ್ತೇವೆ. ಕೊರತೆ ಎದುರಾದಾಗಲೇ ಸೃಜನಶೀಲತೆ ಪರಿಣಾಮಕಾರಿಯಾಗುವುದು ಎಂದು ಅರವಿಂದ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ. 

ಅಗತ್ಯವಿದ್ದ ಉಪಕರಣಗಳು ಲಭ್ಯವಾಗದೇ ಸ್ವಾಭಾವಿಕವಾಗಿ ಏನು ಲಭ್ಯವಿತ್ತೋ ಅದರಲ್ಲಿಯೇ ಅತ್ಯುತ್ತಮವಾದುದ್ದನ್ನು ಚಿತ್ರೀಕರಿಸಿದ್ದೇವೆ. ಸಾಮಾನ್ಯ ದೀಪಗಳು ಮತ್ತು ರಿಗ್ಗಳು ಲಭ್ಯವಗಾದೇ, 10,000 ಚದರ ಅಡಿ ವಿಸ್ತೀರ್ಣದ ಇಡೀಯ ಮನೆಯನ್ನೇ ಸಿಂಗರಿಸಿದೆವು, ಛಾವಣಿಗಳಲ್ಲಿ ವೈರ್ ಕಟ್ಟಿ ಬೇಕಾದಾಗ ಬಲ್ಬ್ ಗಳನ್ನು ಅಳವಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಯಿತು.

"ಹೊಗೆಯನ್ನು ಸೃಷ್ಟಿಸುವುದು ಅತ್ಯಂತ ಆಸಕ್ತಿದಾಯಕವಾಗಿದ್ದು, ಮಂಜು ಅಥವಾ ಮಂಜಿನ ವಾತಾವರಣ ನಿರ್ಮಾಣವಾಗಬೇಕಿತ್ತು, ಆದರೆ ಇದಕ್ಕೆ ಪೂರಕವಾದ ಪ್ರತ್ಯೇಕ ತಂಡ ಇಲ್ಲದೇ ಸಿನಿಮಾ ಸಿಬ್ಬಂದಿ ತಂಡದಲ್ಲಿ ಯಾರು ಬಿಡುವಾಗಿರುತ್ತಾರೋ ಅವರ ಕೈಲಿ ಬಾಣಲೆ/ತಟ್ಟೆಯಲ್ಲಿ ಇದ್ದಿಲನ್ನು ಹೊತ್ತಿಸಿ ಹೊಗೆ ಬರುವಂತೆ ಮಾಡುವ ಮೂಲಕ  ಮಂಜಿನ ವಾತಾವರಣ ನಿರ್ಮಿಸಲಾಗುತ್ತಿತ್ತು. ಒಂದು ಹಂತದಲ್ಲಿ ಮೂವರು ಮಂದಿ ಈ ರೀತಿಯ ಇದ್ದಿಲನ್ನು ಹೊತ್ತು 2 ಕಿ,ಮೀ ದೂರದವರೆಗೂ ಟ್ರ್ಯಾಕ್ಟರ್ ನ್ನು ಹಿಂಬಾಲಿಸಿದ್ದರು, ಎಂದು ಚಿತ್ರೀಕರಣದ ಸವಾಲುಗಳನ್ನು ಹಾಗೂ ವಿಶೇಷವಾಗಿ ತಮ್ಮ ಸಹೋದ್ಯೋಗಿ ಮನು ಅವರನ್ನು ಅರವಿಂದ್ ಕಶ್ಯಪ್ ನೆನಪಿಸಿಕೊಂಡಿದ್ದಾರೆ. 

"ಮಳೆಯಲ್ಲಿ ಚಿತ್ರೀಕಣ ಮಾಡುವ ದೃಶ್ಯ ಇತ್ತು. ಚಿತ್ರೀಕರಣದ ವೇಳೆ ಮಳೆ ನಿಂತು ಹೋಗಿತ್ತು, ಆದರೆ ಅಡಿಕೆ ಸಸ್ಯಗಳಿಗೆ ನೀರು ಹಾಯಿಸುವ ಯಂತ್ರವನ್ನು ಬಳಕೆ ಮಾಡಿ ಮಳೆಯ ವಾತಾವರಣವನ್ನು ಸೃಷ್ಟಿಸಲಾಯಿತು, ಇದಂತೂ ಸಾಮಾನ್ಯ ಸೆಟಪ್ ಗಿಂತಲೂ ಅದ್ಭುತವಾಗಿ ಮೂಡಿಬಂದಿದೆ ಎಂದು ಅರವಿಂದ್ ಕಶ್ಯಪ್ ಹೇಳಿದ್ದಾರೆ. 

ಅರವಿಂದ್ ಕಶ್ಯಪ್ ದಯವಿಟ್ಟು ಗಮನಿಸಿ ಮೂಲಕ ಪಾದಾರ್ಪಣೆ ಮಾಡಿದ್ದು, ಲಂಬೋದರ, ಬೆಲ್ ಬಾಟಮ್ ನಂತಹ ಜನಪ್ರಿಯ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗಳಲ್ಲಿ 
ಅರವಿಂದ್ ಕಶ್ಯಪ್ ಛಾಯಾಗ್ರಾಹಕರಾಗಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp