ನಾನು ಈಗ ವಯಸ್ಸಾಗಿರುವ ಪರಿಪಕ್ವ ನಟಿ: ಶೃತಿ ಹರಿಹರನ್

ನಟಿ ಶೃತಿ ಹರಿಹರನ್ ಪಾತ್ರ ಆಯ್ಕೆ ಮಾಡುವಾಗ ತುಂಬಾ ಜಾಗ್ರತೆಯಿಂದ ಹೆಜ್ಜೆ ಇಡುತ್ತಾರೆ. ಮದುವೆ, ಮಗುವಿನ ನಂತರ ತಮಿಳಿವ ವಧಂ ಎಂಬ ಸಿರೀಸ್ ಮೂಲಕ ವಾಪಸಾಗುತ್ತಿದ್ದಾರೆ.

Published: 23rd February 2021 02:08 PM  |   Last Updated: 23rd February 2021 02:13 PM   |  A+A-


Sruthi hariharan

ಶೃತಿ ಹರಿಹರನ್

Posted By : Shilpa D
Source : The New Indian Express

ನಟಿ ಶೃತಿ ಹರಿಹರನ್ ಪಾತ್ರ ಆಯ್ಕೆ ಮಾಡುವಾಗ ತುಂಬಾ ಜಾಗ್ರತೆಯಿಂದ ಹೆಜ್ಜೆ ಇಡುತ್ತಾರೆ. ಮದುವೆ, ಮಗುವಿನ ನಂತರ ತಮಿಳಿವ ವಧಂ ಎಂಬ ಸಿರೀಸ್ ಮೂಲಕ ವಾಪಸಾಗುತ್ತಿದ್ದಾರೆ.

ಈ ವೆಬ್ ಸಿರೀಸ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಒಟಿಟಿಯಲ್ಲಿ ಬಿಡುಗಡೆಯಾದ ಈ ವೆಬ್ ಸಿರೀಸ್  ನಲ್ಲಿ ಅಶ್ವತ್ತಿ ವಾರಿಯರ್ ಮತ್ತು ಸೆಮ್ಮಲಾರ್ ಅಣ್ಣಂ  ನಟಿಸಿದ್ದಾರೆ.  ಮಹಿಳಾ ಪೋಲೀಸ್ ಅಧಕಾರಿಯೊಬ್ಬರು ವೃತ್ತಿ ಮತ್ತು ಕುಟುಂಬದಲ್ಲಿ ಹೇಗೆ ನಿರ್ವಹಣೆ ಮಾಡುತ್ತಾರೆ ಎಂಬ ನೈಜ ಜೀವನದ ಕಥೆ ಇದಾಗಿದೆ.

2018 ರಲ್ಲಿ ಈ ವೆಬ್ ಸಿರೀಸ್ ಶೂಟಿಂಗ್ ಮಾಡಲಾಗಿತ್ತು, ಗರ್ಭಿಣಿಯಾಗುವುದಕ್ಕಿಂತ ಮುಂಚೆ ಮತ್ತು  ಮೂರು ತಿಂಗಳಲ್ಲಿ ಶೂಟ್ ಮಾಡಲಾಗಿತ್ತು, ಇದೆಲ್ಲಾ ನನ್ನ ಕಮಿಟ್ ಮೆಂಟ್,  ಇಡೀ ತಂಡವೇ ನನಗೆ ಉತ್ತಮ ಸಹಕಾರ ನೀಡಿತ್ತು.  ನನ್ನ ಎಲ್ಲಾ ಪಾತ್ರಗಳಿಗಿಂತ ಇದು ಅತ್ಯುತ್ತಮ ಎಂದೆನಿಸಿತ್ತು. 

ಲೂಸಿಯಾ ಸಿನಿಮಾದಲ್ಲಿ ಶ್ವೇತಾ, ಊರ್ವಿಯಲ್ಲಿ ಆಶಾ, ನಾತಿಚರಾಮಿಯಲ್ಲಿ ಗೌರಿಯಾಗಿ ಶೃತಿ ಕಾಣಿಸಿಕೊಂಡಿದ್ದರು. ಮುಂದೆ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದ್ದಾರೆ. 

ನನಗೆ ಈಗ ವಯಸ್ಸಾಗಿದೆ ಮತ್ತು ಬುದ್ದಿವಂತಳಾಗಿದ್ದಾನೆ, ಪಾತ್ರಕ್ಕೆ ಅವಶ್ಯಕತೆ ಇದ್ದರೆ ನಾನು  ಕಮರ್ಷಿಯಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ, ವೆಬ್ ಸಿರೀಸ್ ಮತ್ತು ಸಿನಿಮಾಗಳಲ್ಲಿ ಮಹಿಳಾ ಪ್ರಧಾನವಾದ ಕತೆಗಳನ್ನು ಇಷ್ಯ ಪಡುವ ಶೃತಿ , ಒಟಿಟಿಗಳಲ್ಲಿ ನಿರ್ದೇಶಕರಿಗೆ ವಿಷಯದ ಮೇಲೆ ಪ್ರಯೋಗ ನಡೆಸುವ ಸ್ವಾತಂತ್ರ್ಯವಿರುತ್ತೆ ಎಂದು ಹೇಳಿದ್ದಾರೆ.

ಸದ್ಯ ತಾಯ್ತನದ ಖುಷಿ ಅನುಭವಿಸುತ್ತಿರುವ ಶೃತಿ ಅಭಿಮಾನಿಗಳು ಆಕೆಯನ್ನು ತೆರೆಯ ಮೇಲೆ ಕಾಣದೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಒಂದೂವರೆ ವರ್ಷದ ಮಗು ಈಗ ಹೆಜ್ಜೆ ಇಡಲು ಆರಂಭಿಸಿದ್ದು, ಶೀಘ್ರವೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಮೀಟೂ ಅಭಿಯಾದನ ಭಾಗವಾಗಿದ್ದ ಶೃತಿ ಹರಿಹರಲ್ ರಾಜಕಾರಣಿ ಎಂಜೆ ಅಕ್ಬರ್ ವಿರುದ್ಧ ಪ್ರಿಯಾ ರಮಣಿ  ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

ನಾನು ಅವರ ಕೇಸ್ ಅನ್ನು ತುಂಬಾ ಹತ್ತಿರದಿಂದ ಗಮನಿಸಿದ್ದೆ, ಇದು ನನ್ನ ವಯಕ್ತಿಕ ಗೆಲುವು ಎಂದು ನಾನು ಭಾವಿಸಿಕೊಳ್ಳುತ್ತೇನೆ, ಲೈಂಗಿಕ ಕಿರುಕುಳ ಕೆಲವರಿಗೆ ತುಬಾ ಗಂಬೀರ ವಿಷಯ ಎನಿಸುವುದಿಲ್ಲ, ನಾನು ಕೂಡ ಇದನ್ನು ಅನುಭವಿಸಿದ್ದೇನೆ,  ಇದು ಅತ್ಯಾಚಾರ ಅಥವಾ ಗಂಭೀರ ಕಿರುಕುಳ ಅಲ್ಲದಿರಬಹುದು, ಆದರೆ ಆ ರೀತಿ ವರ್ತನೆ ಮಾತು ತುಂಬಾ ಹಿಂಸೆ ನೀಡುತ್ತದೆ. ಇದು ವ್ಯವಸ್ಥೆ ವಿರುದ್ಧದಹೋರಾಟ ಎಂದು ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp