ಮೌನ ಮುರಿಯದ ನಟ ದರ್ಶನ್, ಹಳೆಯ ನೆನಪುಗಳನ್ನು ಕೆದಕಿ ನಟ ಜಗ್ಗೇಶ್ ಗರಂ!

ಚಿತ್ರೀಕರಣ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮುತ್ತಿಗೆ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಕುರಿತು ಮೌನ ವಹಿಸಿರುವ ನಟ ದರ್ಶನ್ ಬಗ್ಗೆ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published: 24th February 2021 03:59 PM  |   Last Updated: 24th February 2021 04:07 PM   |  A+A-


Jaggesh_Darshan1

ನಟರಾದ ಜಗ್ಗೇಶ್, ದರ್ಶನ್

Posted By : Nagaraja AB
Source : Online Desk

ಮೈಸೂರು: ಚಿತ್ರೀಕರಣ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಮುತ್ತಿಗೆ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡುಬರುತ್ತಿಲ್ಲ. ಈ ಕುರಿತು ಮೌನ ವಹಿಸಿರುವ ನಟ ದರ್ಶನ್ ಬಗ್ಗೆ ಜಗ್ಗೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬನ್ನೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ನೆನಪುಗಳನ್ನು ಕೆದಕುವ ಮೂಲಕ  ದರ್ಶನ್ ಅವರನ್ನು ಕುಟುಕಿದರು.  ಅವತ್ತು ಸಣ್ಣ ನಟಿ ಮನೆಯಲ್ಲಿ ದರ್ಶನ್ ನನ್ನು ಚಪ್ಪಲಿ ಇಲ್ಲದೆ ಪೊಲೀಸರು ನಿಲ್ಲಿಸಿದ್ದರು, ಅಂತಹ ಸಂದರ್ಭದಲ್ಲಿ ದರ್ಶನ್ ನೆರವಿಗೆ ಬಂದದ್ದು ಯಾರು?  ಅವತ್ತು ಆತನ ನೆರವಿಗೆ ಬಂದಿದ್ದೆ.  ಅಂದಿನ ಡಿಸಿಪಿ ಸಿದ್ದರಾಮಪ್ಪ ಜೊತೆಗೆ ವಾಗ್ವಾದ ನಡೆಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿ ಕಳುಹಿಸಿದೆ. ಅದನ್ನು ದರ್ಶನ್ ಮರೆಯಬಾರದು ಎಂದರು.

ಮುತ್ತಿಗೆ ಹಾಕಿದ ಕೂಡಲೇ ಚಿತ್ರರಂಗ ಆತಂಕಗೊಂಡಿತ್ತು. ದರ್ಶನ್ ಗೆ ಅಪಘಾತವಾದಾಗ ಫೋನ್ ಮಾಡಿ ವಿಚಾರಿಸಿದ್ದೆ. ದರ್ಶನ್ ನನ್ನು ರಜನಿಕಾಂತ್ ಅಂತಾ ಕರೆದಿದ್ದೆ. ಆದರೆ, ತನ್ನ ಅಭಿಮಾನಿಗಳಿಂದ ಮುತ್ತಿಗೆ ಹಾಕಿದ್ದರೂ ದರ್ಶನ್ ಒಂದು ಫೋನ್ ಕಾಲ್ ಮಾಡಿಲ್ಲ,  40 ವರ್ಷಗಳಿಂದ ಸೇವೆ ಸಲ್ಲಿಸಿದ್ದಕ್ಕೆ ದೊಡ್ಡ ಸನ್ಮಾನ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮನಗರ ಸರ್ಕಲ್ ನಲ್ಲಿಯೇ ಮುತ್ತಿಗೆ ಹಾಕಲು ಹುನ್ನಾರ ನಡೆಸಲಾಗಿತ್ತು. ಜೊತೆಯಲ್ಲಿದ್ದವರೇ ನನ್ನ ಚಲನವಲನಗಳ ಬಗ್ಗೆ
ಮಾಹಿತಿ ನೀಡುತ್ತಿದ್ದರು. ಇದನ್ನು ಎಲ್ಲಿ ಬೇಕಾದರೂ ನಾನು ಸಾಬೀತುಪಡಿಸುತ್ತೇನೆ ಎಂದು ಜಗ್ಗೇಶ್ ಹೇಳಿದರು.


Stay up to date on all the latest ಸಿನಿಮಾ ಸುದ್ದಿ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp