ಜಗ್ಗೇಶ್ ಮನೆಗೆ ಬಂದರೆ ಅತಿಥ್ಯ, ಆದರೆ, ರೇಸ್ ಅಂತ ಬಂದಾಗ ರೇಸ್ ಗೆ ನಿಲ್ತೇನೆ: ದರ್ಶನ್ ತಿರುಗೇಟು

ನವರಸ ನಾಯಕ ಜಗ್ಗೇಶ್ ಜೊತೆಗಿನ ಅಭಿಮಾನಿಗಳ ಕಿರಿಕ್ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Published: 24th February 2021 06:46 PM  |   Last Updated: 24th February 2021 07:34 PM   |  A+A-


Darshan_Jaggesh1

ದರ್ಶನ್, ಜಗ್ಗೇಶ್

Posted By : Nagaraja AB
Source : Online Desk

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಜೊತೆಗಿನ ಅಭಿಮಾನಿಗಳ ಕಿರಿಕ್ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಮೈಸೂರಿನಲ್ಲಿ ಜಗ್ಗೇಶ್ ಅವರನ್ನು ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿದ ಬಗ್ಗೆ ಪರ ಹಾಗೂ ವಿರುದ್ಧವಾದ ಅಭಿಪ್ರಾಯಗಳು ಕೇಳಿಬರುತಿತ್ತು.  ಈ ಬಗ್ಗೆ ಇಂದು ಸಹ ಜಗ್ಗೇಶ್ ಬನ್ನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಇಷ್ಟಾದರೂ ದರ್ಶನ್ ಫೋನ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿವಾದಗಳಿಗೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ 'ಡಿ'ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊನೆಗೂ ಮೌನ ಮುರಿದಿದ್ದಾರೆ.

ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ದರ್ಶನ್, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಬಂದಿದ್ದರೆ, ಅಭಿಮಾನಿಗಳಿಗೆ ಎರಡು ಬಿಟ್ಟು ಬುದ್ದಿ ಹೇಳುತ್ತಿದೆ.  ಜಗ್ಗೇಶ್ ಸರ್ ಹಿರಿಯರು, ಅವರು ನಮ್ಮ ಮುಂದಿರಬೇಕು, ನನ್ನಿಂದ ಹಾಗೂ ಅಭಿಮಾನಿಗಳಿಂದ ಜಗ್ಗೇಶ್ ಅವರಿಗೆ ಬೇಸರಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.

ಜಗ್ಗೇಶ್ ಅವರ ಸಂಪರ್ಕಕ್ಕೆ ಪ್ರಯತ್ನಿಸಿದೆ ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಜಗ್ಗೇಶ್ ಅವರು ಮನೆಗೆ ಬಂದರೆ ಅತಿಥ್ಯ ನೀಡುತ್ತೇನೆ ಎಂದು ರೇಸ್ ಅಂತಾ ಬಂದಾಗ ರೇಸ್ ಗೆ ನಿಲ್ಲುತ್ತೇನೆ, ನಮ್ಮದು ಹೊಟ್ಟೆಪಾಡು ಅದಕ್ಕಾಗಿ ರೇಸ್ ಗೆ ನಿಲ್ಲುತ್ತೇನೆ ಎಂದು ದರ್ಶನ್ ಮಾರ್ಮಿಕವಾಗಿ ತಿರುಗೇಟು ನೀಡಿದರು.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp