'ಕೆಟಿಎಂ'ನಲ್ಲಿ ದೀಕ್ಷಿತ್ ಶೆಟ್ಟಿಗೆ ಸಂಜನಾ ದಾಸ್ ಜೋಡಿ!

ದೀಕ್ಷಿತ್ ಶೆಟ್ಟಿ ನಟಿಸಿರುವ ಕೆಟಿಎಂ ಸಿನಿಮಾಗೆ ನಾಯಕಿಯಾಗಿ  ಸಂಜನಾ ದಾಸ್ ಆಯ್ಕೆಯಾಗಿದ್ದಾರೆ.

Published: 24th February 2021 12:55 PM  |   Last Updated: 24th February 2021 01:02 PM   |  A+A-


sanjana doss

ಸಂಜನಾ ದಾಸ್

Posted By : Shilpa D
Source : The New Indian Express

ದೀಕ್ಷಿತ್ ಶೆಟ್ಟಿ ನಟಿಸಿರುವ ಕೆಟಿಎಂ ಸಿನಿಮಾಗೆ ನಾಯಕಿಯಾಗಿ  ಸಂಜನಾ ದಾಸ್ ಆಯ್ಕೆಯಾಗಿದ್ದಾರೆ.

ಅರುಣ್ ಕುಮಾರ್ ನಿರ್ದೇಶನದ ಕೆಟಿಎಂ ರೋಮ್ಯಾಂಟಿಕ್ ಕಥೆಯುಳ್ಳ ಸಿನಿಮಾವಾಗಿದ್ದು, ಮಾಡೆಲ್ ಕಮ್ ನಟಿ ಸಂಜನಾ ದಾಸ್ ನಾಯಕಿಯಾಗಿದ್ದಾರೆ. ರತ್ನಮ್ ನಿರ್ದೇಶನದ ಮನಸ್ಮಿತಾ ಚೊಚ್ಚಲ ಸಿನಿಮಾದಲ್ಲಿ ಸಂಜನಾ  ನಟಿಸಿದ್ದು, ಇನ್ನೂ ಸಿನಿಮಾ ರಿಲೀಸ್ ಆಗಬೇಕಿದೆ.

ಸಂಜನಾ ಎರಡನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈಗಾಗಲೇ ಕೆಟಿಎಂ ಚಿತ್ರೀಕರಣ ಪ್ರಾರಂಭವಾಗಿದೆ, 2020 ರಲ್ಲೇ ಸಿನಿಮಾ ಸೆಟ್ಟೇರಿದ್ದು,  ಕೊರೋನಾ ಕಾರಣಕ್ಕಾಗಿ ಮುಂದೂಡಲಾಗಿತ್ತು. ದೀಕ್ಷಿತ್ ಶೆಟ್ಟಿ, ನಾಲ್ಕು ಶೇಡ್ ಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈಗಾಗಲೇ ಸಂಜನಾ ಲೆಟ್ಸ್ ಬ್ರೆೇಕಪ್ ಸಿನಿಮಾಗೂ ಕೂಡ ಸಹಿ ಮಾಡಿದ್ದರು, ಆದರೆ ಕಾರಣಾಂತರಗಳಿಂದ ಸಿನಿಮಾದಿಂದ ಹೊರಬಂದಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ದೀಕ್ಷಿತ್ ಶೆಟ್ಟಿ ದಿಯಾ ಸಿನಿಮಾ  ಮೂಲಕ ಮನೆ ಮಾತಾಗಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp