ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಶ್ವೇತಾ ಪ್ರಸಾದ್

ಕಿರುತೆರೆ ನಿರೂಪಕ ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ಪ್ರೀತಿ, ಮದುವೆ ಇತ್ಯಾದಿ ಸಿನಿಮಾದಲ್ಲಿ ರಾಧಾ ರಮಣ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

Published: 24th February 2021 01:42 PM  |   Last Updated: 24th February 2021 01:48 PM   |  A+A-


Shwetha Prasad

ಶ್ವೇತಾ ಪ್ರಸಾದ್

Posted By : Shilpa D
Source : The New Indian Express

ಕಿರುತೆರೆ ನಿರೂಪಕ ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ಪ್ರೀತಿ, ಮದುವೆ ಇತ್ಯಾದಿ ಸಿನಿಮಾದಲ್ಲಿ ರಾಧಾ ರಮಣಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

ಶ್ರೀರಸ್ತು ಶುಭಮಸ್ತು ಹಾಗೂ ರಾಧಾ ರಮಣ ಕಿರುತೆರೆ ಧಾರಾವಾಹಿಗಳಿಂದ ಶ್ವೇತಾ ಪ್ರಸಾದ್ ಮನೆ ಮಾತಾಗಿದ್ದಾರೆ, ಈ ಮೊದಲು ಕಳ್ಳಬೆಟ್ಟದ ದರೋಡೆಕೋರರು  ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಅಭಿನಯಿಸಿದ್ದರು.

ಅದಾದ ನಂತರ ಸಂಕಷ್ಟಕರ ಗಣಪತಿ ಸಿನಿಮಾದಲ್ಲಿಯೂ ನಟಿಸಿದ್ದ ಶ್ವೇತಾ ಪ್ರೀತಿ, ಮದುವೆ ಇತ್ಯಾದಿ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಜೊತೆ ಪರದೆ ಹಂಚಿಕೊಳ್ಳುತ್ತಿದ್ದಾರೆ.

ಮಾರ್ಚ್ ತಿಂಗಳ ಮದ್ಯದಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಅದಕ್ಕೂ ಮುನ್ನ ಫೋಟೋ ಶೂಟ್ ನಡೆಯಲಿದೆ. ಕಿರಿಕ್ ಕೀರ್ತಿ ರೇಡಿಯೋದಲ್ಲಿ ಮೊದಲು ಕೆಲಸ ಮಾಡುತ್ತಿದ್ದು ನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಈಗ ನಿರ್ದೇಶನದತ್ತ ಹೊರಳಿದ್ದಾರೆ. 

ಕಿರಿಕ್ ಕೀರ್ತಿ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ, ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಹೊರ ಬೇಕಿದೆ. ತುಳು ಸಿನಿಮಾ ರಂಗದಲ್ಲಿ ಪ್ರಸಿದ್ದವಾಗಿರುವ ಲಿಖಿತ್ ಶೆಟ್ಟಿ ಫ್ಯಾಮಿಲಿ ಪ್ಯಾಕ್ ನಲ್ಲಿ ನಟಿಸಿದ್ದಾರೆ. ಸಂಕಷ್ಟಕರ ಗಣಪತಿ ನಂತರ ಮತ್ತೊಮ್ಮೆ ಅರ್ಜುನ್ ಕುಮಾರ್ ಜೊತೆ ಕೆಲಸ ಮಾಡುತ್ತಿದ್ದಾರೆ.


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp