ಭಾನುವಾರದಿಂದ 'ಬಿಗ್ ಬಾಸ್' ಕನ್ನಡ ಸೀಸನ್ 8: ಕೊರೋನಾ ನಿಯಮಗಳ ನಡುವೆ 100 ದಿನಗಳ ಆಟ ಶುರು!

ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

Published: 25th February 2021 07:24 PM  |   Last Updated: 25th February 2021 07:24 PM   |  A+A-


Bigg boss

ಬಿಗ್ ಬಾಸ್

Posted By : Vishwanath S
Source : UNI

ಬೆಂಗಳೂರು: ರಾಜ್ಯದ ಬಹುಪಾಲು ಜನರನ್ನು ಆಕರ್ಷಿಸಿರುವ ಬಿಗ್ ಬಾಸ್ ನ 8ನೇ ಸೀಸನ್ ಗೆ ಇನ್ನು ಮೂರೇ ದಿನ ಬಾಕಿಯಿದ್ದು, ಇದೇ ಭಾನುವಾರ ಫೆ 28ರಿಂದ ಅದ್ದೂರಿಯಾಗಿ ಆರಂಭವಾಗಲಿದೆ.

ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ ಗುಂಡ್ಕಲ್ ಹಾಗೂ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಸೀಸನ್ 8ರ ಆರಂಭದ ಕುರಿತು ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಭಾನುವಾರ ಸಂಜೆ 6 ಗಂಟೆಗೆ ರಿಯಾಲಿಟಿ ಶೋಗೆ ಅದ್ದೂರಿ ಆರಂಭ ಸಿಗಲಿದೆಯಾದರೂ, ಎಂದಿನಂತೆ ಸ್ಪರ್ಧಿಗಳ ಕುರಿತು ರಹಸ್ಯ ಕಾಪಾಡಿಕೊಳ್ಳಲಾಗಿದ್ದು, ಮನೆಯೊಳಗೆ ಹೋಗುವ ಸ್ಪರ್ಧಿಗಳ ಬಗ್ಗೆ ಭಾನುವಾರವೇ ಎಲ್ಲರಿಗೂ ತಿಳಿದುಬರಲಿದೆ. ಆದಾಗ್ಯೂ, ಸಿನೆಮಾ, ಕಿರುತೆರೆ, ರಾಜಕೀಯ, ಕ್ರೀಡೆ, ಸಂಗೀತ, ಡಿಜಿಟಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ವ್ಯಕ್ತಿಗಳೇ ಭಾಗವಹಿಸಲಿದ್ದಾರೆ. ಸೆಲೆಬ್ರಿಟಿ, ಸೆಮಿ ಸೆಲೆಬ್ರಿಟಿಗಳಿರಲಿದ್ದಾರೆ. ಬಿಗ್ ಬಾಸ್ ಒಂದು ಬಿಗ್ ಪ್ರಪಂಚ. ಪ್ರತಿಕ್ಷಣವೂ ಸ್ಪರ್ಧಿಗಳ ನಡೆ, ನುಡಿ ಗಮನಿಸುವ ಮಂದಿ ಇರುತ್ತಾರೆ. 80ಕ್ಕೂ ಹೆಚ್ಚು ಕ್ಯಾಮರಾಗಳು ಕಣ್ಣಿಟ್ಟಿರುತ್ತವೆ ಎಂದು ಸುದೀಪ್ ಹಾಗೂ ಪರಮೇಶ್ ತಿಳಿಸಿದ್ದಾರೆ.

ಪ್ರತಿ ವರ್ಷವೂ ಬಿಗ್‌ ಬಾಸ್‌ ಮನೆಯ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆ ಮಾಡಲಾಗುತ್ತದೆ. ಅದರಿಂದ ನೋಡುಗರಿಗೆ ಹೊಸತನದ ಫೀಲ್‌ ಸಿಗುತ್ತದೆ. ಈ ಸೀಸನ್‌ನಲ್ಲಿ ಮನೆಯ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಡುಗೆ ಮನೆಯ ಒಂದು ಫೋಟೋವನ್ನು ಪರಮೇಶ್ವರ್‌ ಗುಂಡ್ಕಲ್‌ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಆಕರ್ಷಕವಾಗಿ ಮನೆಯನ್ನು ಸಿದ್ಧಪಡಿಸಲಾಗಿದೆ. ಮನೆಯಲ್ಲಿ ಇನ್ನೂ ಏನೆಲ್ಲ ವಿಶೇಷತೆಗಳಿವೆ ಎಂಬುದು ಫೆ.28ರಂದೇ ಬಹಿರಂಗ ಆಗಲಿದೆ.

ಈ ಬಾರಿ ಕೋವಿಡ್‌ 19 ಹಾವಳಿ ಇರುವುದರಿಂದ ಅದಕ್ಕೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಟಾಸ್ಕ್‌ಗಳ ನಿಯಮಗಳಲ್ಲೂ ಕೂಡ ಬದಲಾವಣೆ ಕಾಣಿಸಲಿದೆ. ಈಗಾಗಲೇ ಸ್ಪರ್ಧಿಗಳ ಕೋವಿಡ್ ಟೆಸ್ಟ್ ಆಗಿದ್ದು, ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಮತ್ತೊಮ್ಮೆ ನಡೆಸುವ ಪರೀಕ್ಷೆಯಲ್ಲಿ ನೆಗೆಟಿವ್ ಬಂದರಷ್ಟೇ ಮನೆಯೊಳಗೆ ಕಳುಹಿಸಲಾಗುತ್ತದೆ. ಹೀಗಾಗಿ ಸ್ಪರ್ಧಿಗಳ ಸಂಖ್ಯೆ ಇಂತಿಷ್ಟೇ ಎಂದು ಹೇಳಲಾಗುತ್ತಿಲ್ಲವೆಂದು ಪರಮೇಶ್‍ ತಿಳಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp