'ಮಹಾವೀರ್ಯರ್' ಸಿನಿಮಾ ಮೂಲಕ ಮಾಲಿವುಡ್ ಗೆ ಶಾನ್ವಿ ಶ್ರೀವಾಸ್ತವ್ ಪ್ರವೇಶ

ಮಲಯಾಳಂ ನಟ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿದ್ದಾರೆ.

Published: 25th February 2021 01:03 PM  |   Last Updated: 25th February 2021 04:07 PM   |  A+A-


ಮಲಯಾಳಂ ಸಿನಿಮಾ ಮೂಹೂರ್ತದಲ್ಲಿ ಶಾನ್ವಿ

Posted By : Shilpa D
Source : The New Indian Express

ತೆಲುಗು, ಕನ್ನಡದಲ್ಲಿ ಯಶಸ್ವಿ ನಟಿ ಎನಿಸಿಕೊಂಡಿರುವ ಶಾನ್ವಿ ಶ್ರೀವಾಸ್ತವ್ ಈಗ ಮಾಲಿವುಡ್ ಪ್ರವೇಶಿಸಿದ್ದಾರೆ. ಮಲಯಾಳಂ ನಟ ನಿವಿನ್ ಪೌಲಿ ಮತ್ತು ಆಸಿಫ್ ಅಲಿ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿದ್ದಾರೆ.

ಈ ಮೂಲಕ ಮಲಯಾಳಂ ಇಂಡಸ್ಟ್ರಿಯಲ್ಲಿ ಶಾನ್ವಿ ಚೊಚ್ಚಲ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರಕ್ಕೆ 'ಮಹಾವೀರ್ಯರ್' ಹೆಸರಿಡಲಾಗಿದ್ದು, ಜೈಪುರದಲ್ಲಿ ಇಂದು ಚಿತ್ರದ ಮುಹೂರ್ತ ನೆರವೇರಿದೆ. 

ಬ್ರಿಡ್ ಶೈನ್ ಈ ಚಿತ್ರ ನಿರ್ದೇಶಿಸುತ್ತಿದ್ದು, ನಿವಿನ್ ಪೌಲಿ ಮತ್ತು ಆಸಿಫ್ ಅಲಿ ನಾಯಕರಾಗಿ ನಟಿಸುತ್ತಿದ್ದಾರೆ. ಈ ಇಬ್ಬರ ಜೊತೆ ಶಾನ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ'.

ಮಹಾವೀರ್ಯರ್' ಚಿತ್ರದ ಮುಹೂರ್ತದ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ನಾನು ಯಾವಾಗಲೂ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶಕ್ಕಾಗಿ ಕಾಯುತ್ತೇನೆ ಎಂದು ಹೇಳಿದ್ದಾರೆ.  ಪ್ರತಿಯೊಬ್ಬರೂ ತಾವು ತಯಾರಿಸುವ ಸಿನಿಮಾಗಾಗಿ ಉದ್ಯಮವನ್ನು ನೋಡುತ್ತಾರೆ. ನನಗೆ ಅವಕಾಶವನ್ನು ನೀಡಲಾಗಿದೆ, ನಾನು ಇದನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಶಾನ್ವಿ ಹೇಳಿದ್ದಾರೆ.

ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಶಾನ್ವಿ, ಸಿನಿಮಾದಲ್ಲಿ ನಾನು 18 ವರ್ಷದ ಯುವತಿ ಪಾತ್ರದಲ್ಲಿ ನಟಿಸುತ್ತಿದ್ದೇದೇನೆ, ಈ ಸಮಯದಲ್ಲಿ ನಾನು ಇಷ್ಟು ಮಾತ್ರ ವಿಷಯ ಹೇಳಬಲ್ಲೆ ಎಂದು ಹೇಳಿದ್ದಾರೆ. ಸದ್ಯ ಶಾನ್ವಿ ಕನ್ನಡ ಭಾಷ ಕಸ್ತೂರಿ ಮಹಲ್ ಸೇರದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp