ಸಿನಿಮಾ, ಸಮಾಜಮುಖಿ ಕಾರ್ಯಗಳತ್ತ ಇನ್ನು ನನ್ನ ಗಮನ: ರಾಗಿಣಿ ದ್ವಿವೇದಿ

ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿ ಜೈಲಿನಿಂದ ಹೊರಬಂದಿರುವ ನಟಿ ರಾಗಿಣಿ ದ್ವಿವೇದಿ ಎಲ್ಲ ಆತಂಕಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ಇನ್ನು ಮುಂದೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳತ್ತ ಗಮನಹರಿಸುವೆ ಎಂದು ಹೇಳಿಕೊಂಡಿದ್ದಾರೆ. 

Published: 26th February 2021 05:07 PM  |   Last Updated: 26th February 2021 05:14 PM   |  A+A-


Ragini Dwivedi

ನಟಿ ರಾಗಿಣಿ ದ್ವಿವೇದಿ

Posted By : Srinivasamurthy VN
Source : UNI

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿ ಜೈಲಿನಿಂದ ಹೊರಬಂದಿರುವ ನಟಿ ರಾಗಿಣಿ ದ್ವಿವೇದಿ ಎಲ್ಲ ಆತಂಕಗಳಿಂದ ಹೊರಬರಲು ಪ್ರಯತ್ನಿಸುತ್ತಿದ್ದು, ಇನ್ನು ಮುಂದೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಸಮಾಜಮುಖಿ ಕಾರ್ಯಗಳತ್ತ ಗಮನಹರಿಸುವೆ ಎಂದು ಹೇಳಿಕೊಂಡಿದ್ದಾರೆ. 

ವಿಶೇಷ ಚೇತನ ಕ್ರಿಕೆಟ್ ಪಟುಗಳು ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗೆ ರಾಗಿಣಿ ರಾಯಭಾರಿಯಾಗಿದ್ದು, ಈ ಸಂಬಂಧ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಜೈಲಿನಿಂದ ಹೊರ ಬಂದ ದಿನ ಡ್ರಗ್ಸ್ ಕೇಸ್‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ರಾಗಿಣಿ ''ಮಾತಾನಾಡುವುದು ಜಾಸ್ತಿ ಇದೆ, ಪ್ರೆಸ್ ಮೀಟ್ ಮಾಡ್ತೀನಿ'' ಎಂದು ಹೇಳಿದ್ದರು. ಆಮೇಲೆ ರಾಗಿಣಿ ಈ ವಿಚಾರದ ಕುರಿತು ಎಲ್ಲಿಯೂ ಚರ್ಚಿಸಿಲ್ಲ. ಹಾಗಾಗಿ, ಈ ಸುದ್ದಿಗೋಷ್ಠಿ ಕುತೂಹಲ ಮೂಡಿಸಿತ್ತು.

ಡ್ರಗ್ಸ್ ಪ್ರಕರಣದ ಬಗ್ಗೆ ರಾಗಿಣಿ ಮಾತನಾಡಬಹುದು, ಈ ಕೇಸ್‌ನಲ್ಲಿ ತನ್ನ ಪಾತ್ರ ಏನು ಎಂಬುದರ ಬಗ್ಗೆ ಹೇಳಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಗಿಣಿ, ‘'ನನಗೆ ಬೇಡವಾದ ವಿಚಾರ ಇದು, ನಾನು ಮಾತನಾಡಲ್ಲ'' ಎಂದಷ್ಟೇ ಹೇಳಿದ್ದಾರೆ.

'ಕಳೆದ ವರ್ಷ ಎಲ್ಲರ ಜೀವನದಲ್ಲೂ ಕಷ್ಟವಾಗಿತ್ತು. ಈ ವರ್ಷ ಒಳ್ಳೆಯ ಕಡೆ ಗಮನ ಹರಿಸೋಣ. ನನಗೆ 2021ನೇ ವರ್ಷ ಪಾಸಿಟಿವ್ ಆಗಿರಲಿದೆ. ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತೇನೆ, ಕೆಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಸೋಮವಾರ ಮತ್ತೊಂದು ಪ್ರಮುಖ ಪ್ರಕಟಣೆ ಮಾಡುತ್ತೇನೆ'' ಎಂದು ತಿಳಿಸಿದ್ದಾರೆ.

 

'ರಾಗಿಣಿ ದ್ವಿವೇದಿ ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ಮಾಧ್ಯಮಗಳಲ್ಲಿ ನನ್ನ ಕುರಿತು ಬಗೆ ಬಗೆಯಾದ ಸ್ಟೋರಿಗಳು, ಚರ್ಚೆಗಳು, ತೀರ್ಮಾನಗಳು ಆಗಿವೆ, ನನ್ನ ಅಗತ್ಯವಿದ್ದಿದ್ದರೆ ಕಾಯಬೇಕಿತ್ತು ಅಲ್ವೇ?. ಈಗ ಮಾತಾಡಿದ್ರೆ ಏನು ಪ್ರಯೋಜನ'' ಎಂದು ಪ್ರಶ್ನಿಸಿದ್ದಾರೆ.

ದೇವರು ಒಂದು ಕಡೆ ಕಡಿಮೆ ಮಾಡಿದರೆ, ಅದಕ್ಕಿಂತ ಎರಡು ಪಟ್ಟು ಉತ್ತಮವಾದುದನ್ನು ನೀಡುತ್ತಾನೆ ಎಂದಿರುವ ರಾಗಿಣಿ, ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿರುವ ಕರ್ವ 3 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಈ ಸಂಬಂಧ ನಿರ್ಮಾಪಕ ಕೃಷ್ಣ ಚೈತನ್ಯ ಹಾಗೂ ಕೆ ಮಂಜು ರಾಗಿಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಎ2 ಆಗಿದ್ದರು. ಈ ಹಿನ್ನೆಲೆ ಕಳೆದ ವರ್ಷ ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 14ರವರೆಗೂ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯನ್ನು ಸೆಪ್ಟೆಂಬರ್ 15 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಸುಮಾರು 145ಕ್ಕೂ ಹೆಚ್ಚು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಗಿಣಿಗೆ ಜನವರಿ 21 ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಕಾನೂನು ಪ್ರಕ್ರಿಯೆ ಮುಗಿದ ನಂತರ ಜನವರಿ 25 ರಂದು ಜೈಲಿನಿಂದ ಬಿಡುಗಡೆಯಾದರು.

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp