ಸಿನಿಮಾ ನನ್ನ ಗುರುತು, ಬಿಗ್ ಬಾಸ್ ನನ್ನ ಹೃದಯಕ್ಕೆ ಹತ್ತಿರವಾದದ್ದು:  ಬಿಗ್ ಬಾಸ್ ಅನುಭವ ಹಂಚಿಕೊಂಡ ಸುದೀಪ್

ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

Published: 27th February 2021 12:08 PM  |   Last Updated: 27th February 2021 12:08 PM   |  A+A-


Sudeep

ಸುದೀಪ್

Posted By : Shilpa D
Source : The New Indian Express

ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

17  ಮಂದಿ ಸ್ಪರ್ಧಿಗಳು ಒಂದೇ ಸೂರಿನಡಿ ಮುಂದಿನ 100 ದಿನಗಳು ಕಾಲ ಕಳೆಯಲಿದ್ದಾರೆ. ದಲನೇ ಸೀಸನ್. ಏಕೆಂದರೆ ಅದು ನಮ್ಮ ಪಾಲಿಗೆ ಮೊದಲ ಪ್ರಯತ್ನ. ಆಯೋಜಕರಿಗೆ, ಸ್ಪರ್ಧಿಗಳಿಗೆ, ಪ್ರೇಕ್ಷಕರಿಗೆ ಮತ್ತು ನಿರೂಪಕನಾಗಿ ನನಗೂ ಸಹ ಮೊದಲ ಅನುಭವ ಹಾಗಾಗಿ ಅದು ನನಗೆ ಬಹಳ ವಿಶಿಷ್ಟ ಮತ್ತು ಇಷ್ಟವಾದ ಸೀಸನ್ ಆಗಿದೆ ಎಂದು ಸುದೀಪ್. ಹೇಳಿದ್ದಾರೆ.

ಕಳೆದ 7 ಸೀಸನ್ ಗಳಿಂದ ನಾನು ಬಿಗ್ ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದೇನೆ, ಪ್ರತಿ ಸೀಸನ್ ಕೂಡ ನನಗೆ ಹೊಸತು ಮತ್ತು ಅಚ್ಚರಿ, ಆರಂಭದ ದಿನದಿಂದಲೂ ನಾನು ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಸುದೀಪ್ ಅನುಭವ ಹಂಚಿಕೊಂಡಿದ್ದಾರೆ.

ಇಡೀ ಪಯಣದಲ್ಲಿ ನಾನು ಕುತೂಹಲದಿಂದ ಕೂಡಿರುತ್ತೇನೆ, ಯಾರು ಗೆಲುವು ಸಾಧಿಸುತ್ತಾರೆ ಎಂದು ಊಹಿಸಲು ಸಾಧ್ಯವಿಲ್ಲ, ಶೂಟಿಂಗ್ ಮತ್ತು ಕಾರ್ಯಕ್ರಮ ನಿರೂಪಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಾವು ಏನು ಮಾಡಬೇಕು ಎಂಬ ಬಗ್ಗೆ ಶೂಟಿಂಗ್ ನಲ್ಲಿ ಸ್ಪಷ್ಟತೆ ಇರುತ್ತದೆ, ಆದರೆ  ರಿಯಾಲಿಟಿ ಶೋನಲ್ಲಿ ಇದ್ಯಾವುದು ಇರುವುದಿಲ್ಲ,  ಸ್ಪರ್ಧಿ ಏನು ಮಾತನಾಡುತ್ತಾರೆ ಎಂಬುದರ ಮೇಲೆ ನನ್ನ ಮುಂದಿನ ನಡೆ ಅವಲಂಬಿಸಿರುತ್ತದೆ, ಇಲ್ಲಿ ಸಿದ್ಧತೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

"ನಾನು ನನ್ನ ಜೀವನವನ್ನು ಇಷ್ಟಪಡುತ್ತೇನೆ ಮತ್ತು ನಾನು ಏನು ಮಾಡುತ್ತಿದ್ದೇನೆ ಎಂಬುದು ನನ್ನ ಆಯ್ಕೆಯಾಗಿದೆ. ಸಿನಿಮಾ ನನ್ನ ಗುರುತು, ಆದರೆ ಬಿಗ್ ಬಾಸ್ ನನಗೆ ತುಂಬಾ ಹತ್ತಿರ. ಈ ಪ್ರದರ್ಶನವು ವರ್ಷಗಳಲ್ಲಿ ನನ್ನನ್ನು ಬದಲಾಯಿಸುತ್ತಿದೆ. ಈ ಶೋನ  ನಂತರ ನಾನು ಬೇರೆಯ ರೀತಿ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ 8ರಲ್ಲಿ 17 ಜನ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದು, ಎಲ್ಲರನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಎಲ್ಲರಿಗೂ ನೆಗಿಟಿವ್ ಬಂದಿದೆ. ಮನೆಗೆ ಕಳುಹಿಸುವ ಮುನ್ನ ಮೂರನೇ ಸಲ ಕೊವಿಡ್ ಪರೀಕ್ಷೆ ಮಾಡಲಾಗುತ್ತದೆ. ಆಗ ಯಾರಿಗಾದರೂ ಪಾಸಿಟಿವ್ ಬಂದರೆ ಅವರನ್ನು ಕಳುಹಿಸಲು ಸಾಧ್ಯವಿಲ್ಲ. ಸದ್ಯಕ್ಕೆ 17 ಮಂದಿ ಸಿದ್ಧರಾಗಿದ್ದಾರೆ. 

ಪ್ರತಿದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ಕನ್ನಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಪ್ರತಿ ವರ್ಷದಂತೆ ವೂಟ್‌ನಲ್ಲಿ ಅನ್‌ಕಟ್ ದೃಶ್ಯಗಳು ಟೆಲಿಕಾಸ್ಟ್ ಆಗಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp