ಮಾರ್ಚ್ 3 ರಿಂದ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಶೂಟಿಂಗ್ ಪುನಾರಂಭ

ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಸ್ಥಗಿತಗೊಂಡಿದ್ದ ಕಬ್ಜ ಸಿನಿಮಾ ಶೂಟಿಂಗ್ ಮಾರ್ಚ್ 3 ರಿಂದ ಪುನಾರಂಭಗೊಳ್ಳಲಿದೆ. 

Published: 27th February 2021 11:16 AM  |   Last Updated: 27th February 2021 11:16 AM   |  A+A-


upendra

ಉಪೇಂದ್ರ

Posted By : Shilpa D
Source : The New Indian Express

ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಸ್ಥಗಿತಗೊಂಡಿದ್ದ ಕಬ್ಜ ಸಿನಿಮಾ ಶೂಟಿಂಗ್ ಮಾರ್ಚ್ 3 ರಿಂದ ಪುನಾರಂಭಗೊಳ್ಳಲಿದೆ. 

ಸದ್ಯ ಹೈದರಾಬಾದ್ ನಲ್ಲಿ ತೆಲುಗು ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿರುವ ಉಪೇಂದ್ರ ಮಾರ್ಚ್ 3 ರಂದು ಕಬ್ಜ ತಂಡ ಸೇರಲಿದ್ದಾರೆ.

ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾವಾಗುತ್ತಿರು ಕಬ್ಜ ಸಿನಿಮಾ ಶೂಟಿಂಗ್ ಕಾರಾಗೃಹ ಎಪಿಸೋಡ್ ನಿಂದ ಆರಂಭವಾಗಲಿದೆ, ಇದಕ್ಕಾಗಿ ಕಲಾ ನಿರ್ದೇಶಕ ಶಿವಕುಮಾರ್ ಅವರಿಂದ ಬಹುದೊಡ್ಡ ಸೆಟ್ ನಿರ್ಮಾಣವಾಗಿದೆ.

ಆಕ್ಷನ್ ಬ್ಲಾಕ್ ಮತ್ತು ಟಾಕಿ ಭಾಗಗಳನ್ನು ಒಳಗೊಂಡಂತೆ ಈ ನಿರ್ದಿಷ್ಟ ಸಂಚಿಕೆಯನ್ನು ಎರಡು ತಿಂಗಳ ಅವಧಿಯಲ್ಲಿ ಚಿತ್ರೀಕರಿಸಲಾಗುವುದು, ಕಬೀರ್ ದುಹಾನ್ ಸಿಂಗ್, ಕೋಟಾ ಶ್ರೀನಿವಾಸ್ ಮತ್ತು ಕಾಮರಾಜ್ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಗ್ಯಾಂಗ್ ಸ್ಟರ್ ಕಥೆಯಾಧಾರಿತ ಸಿನಿಮಾದಲ್ಲಿ ಸುದೀಪ್ ಭಾರ್ಗವ್ ಭಕ್ಷಿ  ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಶ್ರೀ ಸಿದ್ದೇಶ್ವರ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ಅಡಿ ಎಂಟಿಬಿ ನಾಗರಾಜ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ವಿದೆ.

ಕಬ್ಜ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಗುವುದು ಮತ್ತು ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುವುದು.


 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp