
ಅದಿತಿ ಪ್ರಭುದೇವ
ಸ್ಯಾಂಡಲ್ ವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಆಟೋ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ದರ್ಶನ್ ಅಭಿನಯದ "ಸಾರಥಿ" ಚಿತ್ರದ ಹಾಡನ್ನು ಹಾಕಿಕೊಂಡು ಅದಿತಿ ಆಟೋ ಚಲಾಯಿಸುತ್ತಿರಿವ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾಗಳಲ್ಲಿವೈರಲ್ ಆಗಿದ್ದು ಕನ್ನಡ ನಟಿಯ ಆಟೋ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬೆಂಗಳೂರಿನ ಬೀದಿಗಳನ್ನ ಆಟೋದಲ್ಲಿ ಸುತ್ತಿದ ಅದಿತಿ ಸಿನಿಮಾ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಆಟೋ ಹತ್ತಿದ್ದಾರೆ.
ಸಧ್ಯ ನಟಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.