ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಸಿಷ್ಠ ಸಿಂಹ ನಟನೆ!
ನಟ ವಸಿಷ್ಠ ಸಿಂಹ 2021 ಅನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಜನವರಿ 1 ರಂದು ಸಿಂಹದ ಮರಿಯೊಂದನ್ನು ದತ್ತು ಪಡೆದ ವಸಿಷ್ಟ ಸಿಂಹ ಈ ಮರಿಗೆ ಅವರ ತಂದೆ ವಿಜಯ ನರಸಿಂಹ ಅವರ ಹೆಸರನ್ನಿರಿಸಿದ್ದಾರೆ.
Published: 06th January 2021 11:57 AM | Last Updated: 06th January 2021 12:31 PM | A+A A-

ವಸಿಷ್ಟ ಸಿಂಹ
ನಟ ವಸಿಷ್ಠ ಸಿಂಹ 2021 ಅನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಜನವರಿ 1 ರಂದು ಸಿಂಹದ ಮರಿಯೊಂದನ್ನು ದತ್ತು ಪಡೆದ ವಸಿಷ್ಟ ಸಿಂಹ ಈ ಮರಿಗೆ ಅವರ ತಂದೆ ವಿಜಯ ನರಸಿಂಹ ಅವರ ಹೆಸರನ್ನಿರಿಸಿದ್ದಾರೆ. ಇದೀಗ ಆ ಮರಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇರಿಸಲಾಗಿದೆ. ನಾನು 2021 ಅನ್ನು ವಿಭಿನ್ನವಾಗಿ ಸ್ವಾಗತಿಸಲು ಬಯಸಿದ್ದೆ, ಮತ್ತು ಕುಟುಂಬದಲ್ಲಿ ಹೊಸ ಸದಸ್ಯನನ್ನು ಹೊಂದಲು ನನಗೆ ಸಂತೋಷವಾಗಿದೆ, ಆದರೆ ಯಾವಾಗಲೂ ನಾನು ಇದರ ಪಕ್ಕದಲ್ಲಿರಲು ಸಾಧ್ಯವಿಲ್ಲವಾಗಿಯೂ ಈ ಸಿಂಹದ ಮರಿಯ ಜವಾಬ್ದಾರಿ ತೆಗೆದುಕೊಳ್ಳಲು ನನಗೆ ಖುಷಿ ಇದೆ ಎಂದು ನಟ ಹೇಳಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಖಳನಟನಾಗಿ ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟಿದ್ದ ವಸಿಷ್ಟ ಸಿಂಹ ನಂತರ ನಾಗತಿಹಳ್ಳಿ ಚಂದ್ರಶೇಖರ್ ಅವರ "ಇಂಡಿಯಾ ವರ್ಸಸ್ ಇಂಗ್ಲೆಂಡ್" ಚಿತ್ರದ ಮೂಲಕ ನಾಯಕ ನಟರಾದರು. ಈಗ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಈ ವರ್ಷವೂ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ವಸಿಷ್ಟ ಸಿಂಹ ಈಗಾಗಲೇ ಎರಡು ಪ್ರಾಜೆಕ್ಟ್ಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ, ಮತ್ತು ಈಗ ಮೂರನೆಯ ಯೋಜನೆಗೆ ಸಹಿ ಹಾಕಿದ್ದಾರೆ. ಶ್ರೀಕಾಂತ್ ಅಡಲಾ ನಿರ್ದೇಶನದ ದಗ್ಗುಬಾಟಿ ವೆಂಕಟೇಶ್ ಅಭಿನಯದ "ನರಪ್ಪ" ಚಿತ್ರದಲ್ಲಿ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಅವರು ನೆಗೆಟಿವ್ ರೋಲ್ ನಲ್ಲಿ ಅಭಿನಯಿಸಿದ್ದಾರೆ. ಪ್ರಿಯಾಮಣಿ ಈ ಚಿತ್ರದ ನಾಯಕಿ. ಬುಧವಾರ ಪ್ರಾರಂಭವಾಗುವ ಶೂಟಿಂಗ್ನ ಹಿನ್ನೆಲೆ ಪತ್ರಿಕೆಯೊಂದಿಗೆ ಮಾತನಾಡಿದ ನಟ "2020 ತನಗೆ ಸಾಕಷ್ಟು ಅವಕಾಶಗಳನ್ನು ನೀಡಿತು ಮತ್ತು ಕಳೆದ ವರ್ಷ ನಾನು ಹಾಕಿದ್ದ ಅಡಿಪಾಯದ ಫಲಿತಾಂಶವು ಮುಂದಿನ ಎರಡು ವರ್ಷಗಳಲ್ಲಿ ಕಾಣಿಸುತ್ತದೆ." ಎಂದರು.
"ಲಾಕ್ ಡೌನ್ ನಂತರ, ನಾನು ಎರಡು ತೆಲುಗು ಚಿತ್ರಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ - "ಒಡೆಲ್ಲಾ ರೈಲ್ವೇ ಸ್ಟೇಷನ್" ಹಾಗೂ ಇನ್ನೂ ಹೆಸರಿಡಬೇಕಾಗಿರುವ ಯೋಜನೆ, ಇದು ನನಗೆ ಪ್ರಮುಖವಾಗಿದೆ. "ನರಪ್ಪ "ನನ್ನ ಮೂರನೆ ಚಿತ್ರವಾಗಿರಲಿದೆ."
ನಟ ವಸಿಷ್ಠ ಸಿಂಹ ತಮಿಳು ಚಿತ್ರರಂಗಕ್ಕೆ ಸಹ ಪಾದಾರ್ಪಣೆ ಮಾಡಲಿದ್ದು, ಈ ವರ್ಷದ ದ್ವಿತೀಯಾರ್ಧದಲ್ಲಿ ಯೋಜನೆಯನ್ನು ಪ್ರಾರಂಭಿಸಲು ಅವರು ಯೋಜಿಸಿದ್ದಾರೆ. "ನನ್ನ ತಮಿಳು ಚೊಚ್ಚಲ ಚಿತ್ರಕ್ಕಾಗಿ ನಾನು ದುಶ್ಯಂತ್ ಅವರೊಂದಿಗೆ ಸೇರಬೇಕಿದೆ.. ಅವರು ಈ ಹಿಂದೆ ಕಡಲ್ ದೇಸಮ್ ಖ್ಯಾತಿಯ ಕತೀರ್ ಗೆ ಸಹಾಯಕರಾಗಿದ್ದರು. ಇದು ಅವರ ಮೊದಲ ಸ್ವತಂತ್ರ ಚಿತ್ರವಾಗಿರಲಿದೆ. ನಾವು ಸ್ಕ್ರಿಪ್ಟ್ ಅನ್ನು ಅಂತಿಮಗೊಳಿಸಿದ್ದೇವೆ ಮತ್ತು ಪ್ರಸ್ತುತ, ಪ್ರಿ ಪ್ರೊಡಕ್ಷನ್ ನಡೆಯುತ್ತಿವೆ. ನಾನು ತೆಲುಗು ಚಲನಚಿತ್ರವನ್ನು ಪೂರ್ಣಗೊಳಿಸಿದ ನಂತರ ಶೂಟಿಂಗ್ ಪ್ರಾರಂಭಿಸುತ್ತೇನೆ, ಅದರ ನಂತರ ನನ್ನ ಎರಡು ಬಾಕಿ ಇರುವ ಕನ್ನಡ ಚಲನಚಿತ್ರಗಳು ಸಹ ಲಿಸ್ಟ್ ನಲ್ಲಿದೆ"
ಒಬ್ಬ ನಟ ಒಂದಕ್ಕಿಂತ ಹೆಚ್ಚು ಭಾಷೆಗಳ ಉದ್ಯಮದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಹೇಳಿದ ನಟ ವಸಿಷ್ಟ ಸಿಂಹ “ಪ್ಯಾನ್-ಇಂಡಿಯಾ ಚಿತ್ರಗಳ ರಿಸಲ್ಟ್ ಯಾವಾಗಲೂ ಅನಿರೀಕ್ಷಿತ ಎಂದು ನಾನು ಭಾವಿಸುತ್ತೇನೆ. ಬದಲಾಗಿ, ಕಲಾವಿದ ಪ್ಯಾನ್-ಇಂಡಿಯಾ ಉಪಸ್ಥಿತಿಯನ್ನು ಹೊಂದುವುದು ಉತ್ತಮ. ವಿವಿಧ ಭಾಷೆಗಳಲ್ಲಿ ಕೆಲಸ ಮಾಡುವ ಅವಕಾಶದೊಂದಿಗೆ, ನಟನು ಎಲ್ಲಾ ಪ್ರದೇಶಗಳ ಜನರೊಂದಿಗೆ ಸಂಪರ್ಕ ಸಾಧಿಸುತ್ತಾನೆ, ”ಎಂದು ಅವರು ಹೇಳುತ್ತಾರೆ,“ ಇತರ ಭಾಷೆಗಳಲ್ಲಿ ಚಲನಚಿತ್ರೋದ್ಯಮಗಳಿಗೆ ನನ್ನ ಪ್ರವೇಶವು ಆಕಸ್ಮಿಕವಾದದ್ದು. ಅದೇ ಸಮಯದಲ್ಲಿ ಇದು ಮಹತ್ವದ್ದೂ ಆಗಿದೆ. ಏಕೆಂದರೆ ನನ್ನ ಈ ಮೊದಲಿನ ಕೆಲಸ, ಪಾತ್ರವನ್ನು ನೋಡಿ ನನಗೆ ಈ ಅವಕಾಶ ನೀಡಲಾಗಿದೆ. ಇದು ನನಗೆ ಖುಷಿಯ ವಿಚಾರವಾಗಿದೆ" ಅವರು ಹೇಳಿದ್ದಾರೆ. ಚಿತ್ರದಲ್ಲಿ