30 ವರ್ಷಗಳ ಸುದೀರ್ಘ ಸೇವೆಯ ನಂತರ ಸಿನಿಮಾ ಕಾರ್ಮಿಕರ ಒಕ್ಕೂಟಕ್ಕೆ ಅಶೋಕ್ ರಾಜಿನಾಮೆ
: ಹಲವು ವರ್ಷಗಳಿಂದ ಚಲನಚಿತ್ರ ಕಾರ್ಮಿಕ ಒಕ್ಕೂಟ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ನಟ ಅಶೋಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
Published: 07th January 2021 09:56 AM | Last Updated: 07th January 2021 09:56 AM | A+A A-

ಅಶೋಕ್
ಬೆಂಗಳೂರು: ಹಲವು ವರ್ಷಗಳಿಂದ ಚಲನಚಿತ್ರ ಕಾರ್ಮಿಕ ಒಕ್ಕೂಟ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಹಿರಿಯ ನಟ ಅಶೋಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಚಲನಚಿತ್ರ ಕಾರ್ಮಿಕ ಒಕ್ಕೂಟದ ಸ್ಥಾಪಕರೂ ಆಗಿದ್ದ ಅಶೋಕ್ ಹಲವು ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈಗ ಹಠಾತ್ತನೆ ರಾಜೀನಾಮೆ ಸಲ್ಲಿಸಿದ್ದು, ವೈಯಕ್ತಿಕ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿರುವಾಗಿ ತಿಳಿಸಿದ್ದಾರೆ.
'ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹದಿಂದ ದೀರ್ಘಸಮಯದಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷನಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಕೋರುತ್ತೇನೆ. ನಿಮ್ಮೆಲ್ಲರ ಸಹಕಾರ, ಸೌಹಾರ್ದವನ್ನು ಸದಾಕಾಲ ನೆನೆಯುತ್ತೇನೆ' ಎಂದಿದ್ದಾರೆ ಅಶೋಕ್.
ಸದಾ ಕಾರ್ಮಿಕರ ಪರ ನಿಲ್ಲುತ್ತಿದ್ದ ಅಶೋಕ್, ಕಾರ್ಮಿಕರ ಮತ್ತು ನಿರ್ಮಾಪಕರ ನಡುವಿನ ನಾನಾ ಬಿಕ್ಕಟ್ಟುಗಳನ್ನು ಬಗೆ ಹರಿಸಿದವರು. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ನಿರಂತರ ಹೋರಾಟ ಮಾಡಿದವರು. ಕೋವಿಡ್ 19 ಲಾಕ್ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗದ ಕಾರ್ಮಿಕರಿಗೆ ಸಂಘಸಂಸ್ಥೆ ಹಾಗೂ ಸರ್ಕಾರದಿಂದ ತಕ್ಷಣದ ನೆರವು ಕೊಡಿಸಲು ಅಶೋಕ್ ಸಾಕಷ್ಟು ಶ್ರಮ ವಹಿಸಿದ್ದರು.
ಅಶೋಕ್ ಅವರು ಎರಡು ವರ್ಷಗಳ ಹಿಂದೆಯೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಕಾರ್ಮಿಕರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್ ಪಡೆದಿದ್ದರು.