ಇಷ್ಟು ದಿನ ಮಾಡಿದ ಪಾತ್ರಗಳಲ್ಲಿ ಅಧೀರ ಅತಿ ಕ್ರೇಜಿಯಾದ ಪಾತ್ರ: ಚೊಚ್ಚಲ ಕನ್ನಡ ಚಿತ್ರದ ಬಗ್ಗೆ 'ಸಂಜು' ಮಾತು
ನಟ ಸಂಜಯ್ ದತ್ ಕೆಜಿಎಫ್-2 ಸಿನಿಮಾ ಬಗ್ಗೆ ತುಂಬಾ ಕುತೂಹಲ ಹೊಂದಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲ ಸಂಜಯ್ ನಟಿಸಿದ್ದಾರೆ.
Published: 07th January 2021 10:42 AM | Last Updated: 07th January 2021 12:54 PM | A+A A-

ಸಂಜಯ್ ದತ್
ನಟ ಸಂಜಯ್ ದತ್ ಕೆಜಿಎಫ್-2 ಸಿನಿಮಾ ಬಗ್ಗೆ ತುಂಬಾ ಕುತೂಹಲ ಹೊಂದಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲ ಸಂಜಯ್ ನಟಿಸಿದ್ದಾರೆ.
ಜನವರಿ 8 ರಂದು ರಿಲೀಸ್ ಆಗಲಿರುವ ಟೀಸರ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್, ನಟ ಯಶ್ ಅವರ ಜೊತೆಗೆ ಕೆಲಸ ಮಾಡಿದ ಅನುಭವವನ್ನು ಸಂದರ್ಶನದಲ್ಲಿ ನಟ ಸಂಜಯ್ ದತ್ ಹಂಚಿಕೊಂಡಿದ್ದಾರೆ.
ಪ್ರ: ಕೆಜಿಎಫ್ -2 ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿ?
ಇದುವರೆಗೂ ನಾನು ಮಾಡಿರುವ ಎಲ್ಲಾ ಪಾತ್ರಗಳಲ್ಲಿ ಅಧೀರಾ ಅತಿ ಕ್ರೇಜಿಯೆಸ್ಟ್ ಪಾತ್ರ, ಅಧೀರಾ ಪಾತ್ರಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಸಿದ್ಧತೆ ಮಾಡಿಕೊಳ್ಳಬೇಕಾಯಿತು. ಸುಮಾರು ಒಂದೂವರೆ ಗಂಟೆ ಮೇಕಪ್ ಮಾಡಿಕೊಳ್ಳುತ್ತಿದ್ದೆ, ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆ.
ಪ್ರ: ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಪ್ರಶಾಂತ್ ತೀರ ನಮ್ರ ಸ್ವಭಾವದ ವ್ಯಕ್ತಿ, ಅವರ ಜೊತೆಗಿನ ಕೆಲಸ ಅತಿ ಮೃದುವಾಗಿತ್ತು, ಇದೇ ಮೊದಲ ಬಾರಿಗೆ ನಾನು ಅವರ ಜೊತೆ ಕೆಲಸ ಮಾಡಿದ್ದು, ಅವರು ನನಗೆ ಎಲ್ಲಾ ರೀತಿಯ ಕಂಫರ್ಟ್ ನೀಡಿದ್ದರು. ಕೆಜಿಎಫ್ ಎಂಬ ಬ್ರಹ್ಮಾಂಡದಲ್ಲಿ ನಾನು ಒಂದು ಭಾಗ ಎಂದು ಬಾವಿಸಿದ್ದೆ. ನನಗೆ ಈಗ ಅವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸಾಕಷ್ಟು ವಿಷಯಗಳನ್ನು ಪರಸ್ಪರ ಹಂಚಿಕೊಂಡಿದ್ದೇವೆ. ಅವರ ಕೆಲಸದ ಸ್ಟೈಲೇ ಬೇರೆ. ಅವರಿಂದ ನಾನು ತುಂಬಾ ಕಲಿತಿದ್ದೇನೆ.
ಪ್ರ: ನಿಮ್ಮ ಮತ್ತು ಯಶ್ ನಡುವೆ ಯಾವ ರೀತಿಯ ಆಕ್ಷನ್ ಮತ್ತು ಫೈಟ್ ಸೀಕ್ವೆನ್ಸ್ಗಳನ್ನು ನಿರೀಕ್ಷಿಸಬಹುದು?
ಕೆಜಿಎಫ್-2 ಸಿನಿಮಾ ಅತಿ ಹೆಚ್ಚು ಪೈಟಿಂಗ್ ಸೀನ್ ಒಳಗೊಂಡಿದೆ. ಕೆಜಿಎಫ್ ಮೊದಲ ಭಾಗದ ಮುಂದುವರಿದ ಭಾಗವಾಗಿದೆ, ಮೊದಲ ಭಾಗಕ್ಕಿಂತ ಹೆಚ್ಚಿನದನ್ನು ಇಲ್ಲಿ ನಿರೀಕ್ಷಿಸಬಹುದು. ಯಶ್ ಮತ್ತು ನಾನು ಮುಖಾಮುಖಿಯಾಗಿದ್ದೇವೆ, ನಿಸ್ಸಂಶಯವಾಗಿ, ಇದು ತುಂಬಾ ಖುಷಿ ತಂದಿದೆ. ಬಹಳಷ್ಟು ಪ್ರಾಪರ್ಟಿ ಬಳಕೆಯಾಗಿದೆ..ಅತ್ಯುತ್ತಮ ನೃತ್ಯ ಸಂಯೋಜನೆಯಿದೆ. ಇದಕ್ಕೂ ಮೀರಿ ನಾನು ಹೇಳುವುದಿಲ್ಲ, ಏಕೆಂದರೇ ಪ್ರೇಕ್ಷಕರು ಎಂಜಾಯ್ ಮಾಡಬೇಕಾಗಿದೆ.
ಪ್ರ: ಕೆಜಿಎಫ್-2 ಗೆ ಆಫರ್ ಬಂದಾಗ ನಿಮ್ಮ ಮೊದಲ ಪ್ರತಿಕ್ರಿಯೆ ಹೇಗಿತ್ತು?ಸುದೀರ್ಘ ಸಮಯದ ನಂತರ ನನಗೆ ಈ ರೀತಿಯ ಪಾತ್ರ ದೊರಕಿದ್ದು, ಹೀಗಾಗಿ ನಾನು ತುಂಬಾ ಉತ್ಸುಕನಾಗಿದ್ದೆ, ಪಾತ್ರ ತುಂಬಾ ಪ್ರಬಲವಾದದ್ದು, ಹೀಗಾಗಿ ನಾನು ಕೇಳಿದ ಕೂಡಲೇ ಒಪ್ಪಿಕೊಂಡೆ.
ಪ್ರ: ನೀವು ಮೊದಲು ಮಾಡಿದ ಎಲ್ಲಾ ಪಾತ್ರಗಳಿಗಿಂತ ಈ ಪಾತ್ರ ಎಷ್ಟು ವಿಭಿನ್ನವಾಗಿದೆ?
ನನ್ನ ಮಟ್ಟಿಗೆ ಚಿತ್ರಕಥೆ ಮತ್ತು ಕಥಾ ಹಂದರವೇ ಪಾತ್ರವನ್ನು ರೂಪಿಸುತ್ತದೆ, ಇದು ನಿರ್ದಿಷ್ಟವಾಗಿ, ಅತಿಯಾದ ಆವೇಶ ಮತ್ತು ನಿರ್ದಯ ಪಾತ್ರವಾಗಿದೆ. ಇದು ನನ್ನ ನೆಚ್ಚಿನ ಪಾತ್ರಗಳಲ್ಲಿ ಒಂದಾಗಿದೆ.