ನಿಮ್ಮ ಹುಟ್ಟುಹಬ್ಬದ ಕೇಕ್ ನಲ್ಲಿ ನನಗೂ ಪಾಲಿದೆ: ಯಶ್'ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ರಾಧಿಕಾ ಪಂಡಿತ್
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಯಶ್ ಅವರಿಗೆ ನಟಿ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
Published: 08th January 2021 11:22 AM | Last Updated: 08th January 2021 12:15 PM | A+A A-

ಯಶ್ ಹಾಗೂ ರಾಧಿಕಾ ಪಂಡಿತ್
ಬೆಂಗಳೂರು: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಅವರು 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಯಶ್ ಅವರಿಗೆ ನಟಿ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರು ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.
ಪತಿಯ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ಅವರು, ಯಶ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಕೊರೋನಾ ಸಾಂಕ್ರಾಮಿಕ ಕಾರಣದಿದಾಗಿ ಹುಟ್ಟುಹಬ್ಬದ ಆಚರಣೆಗೆ ಬ್ರೇಕ್ ಹಾಕಿರುವ ಯಶ್ ಅವರು ಮನೆಯಲ್ಲಿ ಕುಟುಂಬಸ್ಥರೊಂದಿಗೆ ಸರಳವಾಗಿ ಆಚರಣೆ ಮಾಡಿದ್ದಾರೆ. ರಾಧಿಕಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಕೇಕ್ ಮಾಡಿದ ಬಳಿಕ ರಾಧಿಕಾ ಮೂಗಿಗೆ ಕೇಕ್ ಮೆತ್ತಿರುವುದು, ರಾಧಿಕಾ ಹಾಗೂ ಯಶ್ ಮುಖವೆಲ್ಲಾ ಕೇಕ್ ಆಗಿರುವುದು ಕಂಡು ಬಂದಿದೆ.
ಈ ಫೋಟೋವನ್ನು ಹಂಚಿಕೊಂಡಿರುವ ರಾಧಿಕಾ ಅವರು, 'ಕೆಲವೊಮ್ಮೆ ನಾನು ಯೋಚಿಸುತ್ತೇನೆ ನೀವು ಇಷ್ಟೊಂದು ಪರ್ಫೆಕ್ಟ್ ಆಗಿರಲು ಕಾರಣವೇನು ಎಂದು...ಆನಂತರ ನನಗೆ ತಿಳಿಯುತ್ತದೆ ಇದಕ್ಕೆ ಕಾರಣವೇ ನೀವು. ನಿಮ್ಮ ಪಾಲಿನ ಕೇಕ್ ಕೂಡ ನನಗೆ ಕೊಡುತ್ತೀರಾ ಅದಕ್ಕೆ ಎಂದು. ಹ್ಯಾಪಿ ಬರ್ತಡೇ ಬೆಸ್ಟಿ' ಎಂದು ಬರೆದುಕೊಂಡಿದ್ದಾರೆ.