13 ಕೋಟಿಯತ್ತ ಕೆಜಿಎಫ್ 2 ಟೀಸರ್ ವೀಕ್ಷಣೆ, ಬಾಹುಬಲಿ-2 ಟ್ರೈಲರ್ ದಾಖಲೆ ಪತನ

ಕೆಜಿಎಫ್ 2 ಟೀಸರ್ ವೀಕ್ಷಣೆಯ ಸಂಖ್ಯೆ 13 ಕೋಟಿಯತ್ತ ದಾಪುಗಾಲಿರಿಸಿದ್ದು, ಈ ಹಿಂದೆ ಬಾಹುಬಲಿ-2 ಚಿತ್ರದ ಟ್ರೈಲರ್ ನಿರ್ಮಿಸಿದ್ದ ದಾಖಲೆಯನ್ನು ಕೆಜಿಎಫ್ 2 ಟೀಸರ್ ಹಿಂದಿಕ್ಕಿದೆ.

Published: 11th January 2021 11:49 AM  |   Last Updated: 11th January 2021 12:02 PM   |  A+A-


KGF 2 teaser

ಕೆಜಿಎಫ್ ಚಾಪ್ಟರ್ 2 ಟೀಸರ್

Posted By : Srinivasamurthy VN
Source : Online Desk

ಬೆಂಗಳೂರು: ಕೆಜಿಎಫ್ 2 ಟೀಸರ್ ವೀಕ್ಷಣೆಯ ಸಂಖ್ಯೆ 13 ಕೋಟಿಯತ್ತ ದಾಪುಗಾಲಿರಿಸಿದ್ದು, ಈ ಹಿಂದೆ ಬಾಹುಬಲಿ-2 ಚಿತ್ರದ ಟ್ರೈಲರ್ ನಿರ್ಮಿಸಿದ್ದ ದಾಖಲೆಯನ್ನು ಕೆಜಿಎಫ್ 2 ಟೀಸರ್ ಹಿಂದಿಕ್ಕಿದೆ.

ಹೌದು.. ಬಿಡುಗಡೆಯಾಗಿ 3 ದಿನಗಳೇ ಕಳೆದರೂ ಯೂಟ್ಯೂಬ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಟೀಸರ್ ಹವಾ ಮಾತ್ರ ಇನ್ನೂ ಕಡಿಮೆಯಾದಂತಿಲ್ಲ. ಈಗಾಗಲೇ ಟೀಸರ್ ವೀಕ್ಷಣೆಯ ಸಂಖ್ಯೆ ಯೂಟ್ಯೂಬ್ ನಲ್ಲಿ 12 ಕೋಟಿ ದಾಟಿದ್ದು, ಇನ್ನು ಕೆಲವೇ ಗಂಟೆಗಳ ಅಂತರದಲ್ಲಿ 13 ಕೋಟಿ ತಲುಪಲಿದೆ. 

ಇತ್ತೀಚಿನ ವರದಿಗಳ ಅನ್ವಯ ಕೆಜಿಎಫ್ ಚಾಪ್ಟರ್ 2 ಟೀಸರ್ ಅನ್ನು ಜಗತ್ತಿನಾದ್ಯಂತ ಯೂಟ್ಯೂಬ್ ನಲ್ಲಿ 12,96, 20,019 ಬಾರಿ ವೀಕ್ಷಣೆ ಮಾಡಲಾಗಿದೆ. 

ಇನ್ನು ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ಟ್ರೈಲರ್ ನ ಹಿಂದಿ ಅವತರಣಿಕೆಯನ್ನು 11,81,35,555 ಬಾರಿ ವೀಕ್ಷಣೆ ಮಾಡಲಾಗಿತ್ತು. ಭಾರತೀಯ ಚಿತ್ರರಂಗದಲ್ಲೇ ಟ್ರೈಲರ್ ವೊಂದನ್ನು ಇಷ್ಟು ಭಾರಿ ವೀಕ್ಷಣೆ ಮಾಡಿದ್ದು, ಇದೇ ಮೊದಲು ಎನ್ನಲಾಗಿದೆ. ಇನ್ನು ತೆಲುಗು ಅವತರಣಿಕೆಯ ಟ್ರೈಲರ್ ಅನ್ನು 6,41,17,784 ಬಾರಿ ವೀಕ್ಷಣೆ ಮಾಡಲಾಗಿದ್ದು, ತಮಿಳು ಅವತರಣಿಕೆಯ ಟ್ರೈಲರ್ 2,68,38,598 ಬಾರಿ ವೀಕ್ಷಣೆ ಪಡೆದಿದೆ. 

ಆದರೆ ಈ ದಾಖಲೆಯನ್ನೂ ಕೆಜಿಎಫ್ ಚಾಪ್ಟರ್-2 ಟೀಸರ್ ಅಳಿಸಿ ಹಾಕಿದ್ದು. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಟೀಸರ್ ಅನ್ನು 12,92, 85,566  ಮಂದಿ ವೀಕ್ಷಣೆ ಮಾಡಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp