
ಸಂಗ್ರಹ ಚಿತ್ರ
ದುನಿಯಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಸಕ್ಕರೆ ನಾಡಲಿನಲ್ಲಿ ಚಿತ್ರೀಕರಣ ನಡೆಯಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಆ್ಯಕ್ಷನ್ ದೃಶ್ಯಗಳ ಚಿತ್ರೀಕರಣವನ್ನು ಮಂಡ್ಯದಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಚಿತ್ರೀಕರಣಕ್ಕೆ ಹಳ್ಳಿಗಾಡಿನ ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ಹಿರೋಯಿನ್ ಗಾಗಿ ಚಿತ್ರತಂದ ಹುಡುಕಾಟ ಆರಂಭಿಸಿದೆ.
ಮಂಡ್ಯದಲ್ಲಿ ಒಟ್ಟು 12 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ ಹಿರಿಯ ಕಲಾವಿದರಾದ ನಟಿ ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ಇನ್ನಿತರರು ಕಾಣಿಸಿಕೊಳ್ಳಲಿದ್ದಾರೆ.
"ಅಮರ್" ನಂತರ "ಬ್ಯಾಡ್ ಮ್ಯಾನರ್ಸ್"ಅಬಿಷೇಕ್ ಅವರ ಎರಡನೇ ಚಿತ್ರವಾಗಲಿದೆ, ಮತ್ತು ಅವರು ಸೂರಿಯೊಂದಿಗೆ ಕೆಲಸ ಮಾಡುತ್ತಿರುವುದು ಇದು ಮೊದಲಾಗಿದೆ. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ, ಈಗ ರಗಡ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ, ಈಗ ರಗಡ್ ಲುಕ್ನಲ್ಲಿ ಬರ್ತಿದ್ದಾರೆ. ದುನಿಯ ಸೂರಿ ಜೊತೆ ಅಮೃತ್ ಭಾರ್ಗವ್ ಕಥೆ ಹಾಗೂ ಚಿತ್ರಕಥೆ ಮಾಡಿದ್ದಾರೆ.