ಸಿನೆಮಾಗಳಲ್ಲಿ ನಟನೆ ನನಗೆ ಜೀವನಾಧಾರ, ನನ್ನ ಅನ್ನದ ದಾರಿ ಅದು: ಅದಿತಿ ಪ್ರಭುದೇವ
ಅದಿತಿ ಪ್ರಭುದೇವ ಅವರಿಗೆ ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸವಿದೆ. ಅವರ ಕೈಯಲ್ಲಿ ಈಗ 5 ಸಿನೆಮಾಗಳಿವೆ. ಅದರಲ್ಲಿ ಒಂದು ಚಿತ್ರಕ್ಕೆ ಅವರ ಹುಟ್ಟುಹಬ್ಬದ ದಿನ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ತಮಗೆ ಈ ರೀತಿ ಮೇಲಿಂದ ಮೇಲೆ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತಿರುವುದಕ್ಕೆ ಅವರು ಖುಷಿಯಾಗಿದ್ದಾರೆ.
Published: 13th January 2021 12:47 PM | Last Updated: 13th January 2021 03:21 PM | A+A A-

ಅದಿತಿ ಪ್ರಭುದೇವ
ಅದಿತಿ ಪ್ರಭುದೇವ ಅವರಿಗೆ ಈ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸವಿದೆ. ಅವರ ಕೈಯಲ್ಲಿ ಈಗ 5 ಸಿನೆಮಾಗಳಿವೆ. ಅದರಲ್ಲಿ ಒಂದು ಚಿತ್ರಕ್ಕೆ ಅವರ ಹುಟ್ಟುಹಬ್ಬದ ದಿನ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ತಮಗೆ ಈ ರೀತಿ ಮೇಲಿಂದ ಮೇಲೆ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುತ್ತಿರುವುದಕ್ಕೆ ಅವರು ಖುಷಿಯಾಗಿದ್ದಾರೆ.
ನನ್ನ ಹಿಂದಿನ ಕೆಲಸಗಳನ್ನು ನೋಡಿಕೊಂಡು ನನಗೆ ಈಗ ಕೆಲಸಗಳು ಬರುತ್ತಿವೆ. ಇಷ್ಟು ವರ್ಷಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿ ನಾನು ಗಮನಿಸಿರುವುದೇನೆಂದರೆ ನಿಜವಾದ ಪ್ರತಿಭೆಗೆ ಇಲ್ಲಿ ಮನ್ನಣೆ ಸಿಗುತ್ತದೆ ಎನ್ನುತ್ತಾರೆ. ಸ್ಟಾರ್ ನಟರ ಜೊತೆ ನಟಿಸಲು ಅವಕಾಶ ಸಿಗಲಿಲ್ಲವೇಕೆ ಎಂದು ಕೇಳಿದಾಗ ಇಲ್ಲಿ ಪ್ರತಿಯೊಬ್ಬರೂ ಒಂದಲ್ಲ, ಒಂದು ರೀತಿಯಲ್ಲಿ ಸ್ಟಾರ್ ಗಳೇ. ಪ್ರತಿಯೊಬ್ಬರಿಗೂ ಅವರದೇ ಆದ ಶಕ್ತಿ, ಸಾಮರ್ಥ್ಯಗಳಿರುತ್ತದೆ. ಸ್ಟಾರ್ ನಟರ ಜೊತೆ ನಟಿಸುತ್ತಿಲ್ಲವೇಕೆ ಎಂದು ಹಲವರು ಕೇಳುತ್ತಾರೆ, ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಲು ಬಯಸುತ್ತೇನೆ, ಗಾರ್ಮೆಂಟ್ಸ್ ಲ್ಲಿ ಕೆಲಸ ಮಾಡುವ ನೌಕರರಂತೆ, 9 ರಿಂದ 5 ಗಂಟೆಯವರೆಗೆ ಕೆಲಸ ಮಾಡುವವರಂತೆ ನಾನು ಕೂಡ ಅವರು ತೆರೆಯ ಮೇಲೆ ಬರುವುದಿಲ್ಲ, ನಾನು ತೆರೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಅಷ್ಟೇ ವ್ಯತ್ಯಾಸ. ಸ್ಟಾರ್ ನಟರ ಜೊತೆ ನಟಿಸಲು ಅವಕಾಶ ಸಿಗಬೇಕು ಎಂದು ಕಾಯುತ್ತಾ ಕೂರದೇ ನನಗೆ ಸಿಕ್ಕಿದ ಕೆಲಸವನ್ನು ಮಾಡುತ್ತಾ ಹೋಗುತ್ತೇನೆ ಎನ್ನುತ್ತಾರೆ.
ಅದಿತಿ ಪ್ರಭುದೇವ ಅವರ ಕೈಯಲ್ಲಿ ಸದ್ಯ ಒಂಭತ್ತನೇ ದಿಕ್ಕು, ಚ್ಯಾಂಪಿಯನ್, ಓಲ್ಡ್ ಮಾಂಕ್, ಗಜಾನನ ಅಂಡ್ ಗ್ಯಾಂಗ್, ಆನ, ತೋತಾಪುರಿ, ಟ್ರಿಪಲ್ ರೈಡಿಂಗ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, 5ಡಿ ಚಿತ್ರಗಳಿವೆ. ಅವುಗಳಲ್ಲಿ ಎರಡು ಚಿತ್ರಗಳ ಶೂಟಿಂಗ್ ಮುಗಿಸಿದ್ದು ಉಳಿದವು ಸಿದ್ಧತೆ ಹಂತದಲ್ಲಿವೆ.
ಪ್ರತಿಯೊಬ್ಬರೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಆರಂಭದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ನನಗೆ ಕೆಲಸ ಕೊಡುವವರ ಜೊತೆ ಸೇರಿ ಕೆಲಸ ಮಾಡಬೇಕೆಂಬುದು ನನ್ನ ಸೂತ್ರ. ಪ್ರತಿಯೊಂದು ಚಿತ್ರಗಳೂ ನಾನು ಮಾಡಿದ್ದು ಯಾವುದಾದರೂ ಒಂದು ಕಾರಣಕ್ಕೆ ಒಪ್ಪಿಕೊಂಡಂತದ್ದು, ಅದು ಕಥೆ, ತಂತ್ರಜ್ಞಾನ, ಹಣಕಾಸಿನ ಕಾರಣಗಳಿರಬಹುದು.
ಚಿತ್ರಗಳಲ್ಲಿ ನಟಿಸುವುದು ನನಗೆ ದುಬಾರಿಯ ವಿಷಯವಲ್ಲ, ಅದು ನನ್ನ ಜೀವನಾಧಾರ. ಇಲ್ಲಿಗೆ ನಾನು ಬಂದಿರುವುದು ನಟಿಸಲು, ಹಾಗಾಗಿ ಅದು ದೊಡ್ಡ ಚಿತ್ರ, ಸಣ್ಣ ಚಿತ್ರ ಎಂದು ನಟಿಸುವಾಗ ನನಗೆ ಅನಿಸುವುದಿಲ್ಲ. ನಟರಿಗೆ ವೃತ್ತಿಜೀವನದಲ್ಲಿ ಉಚ್ಛ್ರಾಯ ಕಾಲವೆಂಬುದಿರುತ್ತದೆ, ಕೆಲ ವರ್ಷಗಳ ನಂತರ ಅದು ಕಡಿಮೆಯಾಗುತ್ತದೆ ಎನ್ನುತ್ತಾರೆ ಅದಿತಿ ಪ್ರಭುದೇವ.