ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವ: 50 ಚಲನಚಿತ್ರ ಪ್ರದರ್ಶನ
ಗೋವಾದಲ್ಲಿ ನಡೆಯಲಿರುವ 51ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ.
Published: 13th January 2021 03:35 PM | Last Updated: 13th January 2021 03:35 PM | A+A A-

ಸಾಂದರ್ಭಿಕ ಚಿತ್ರ
ಪಣಜಿ: ಗೋವಾದಲ್ಲಿ ನಡೆಯಲಿರುವ 51ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ವಿಶ್ವ ಪನೊರಮಾ ವಿಭಾಗದಲ್ಲಿ ಪ್ರದರ್ಶಿಸಲಾಗುವ ಸಿನಿಮಾಗಳ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದೆ.
ವಿಶ್ವ ಪನೊರಮಾ ವಿಭಾಗದಲ್ಲಿ 50 ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳ ಸಿನಿಮಾಗಳು ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿವೆ.
ಅಮೆರಿಕ, ಬ್ರಿಟನ್, ಕೆನಡಾ, ಇರಾನ್, ಫ್ರಾನ್ಸ್, ಜರ್ಮನಿ, ಸ್ಪೇನ್, ಇಟಲಿ ಇನ್ನೂ ಅನೇಕ ಪ್ರಮುಖ ಸಿನಿಮಾ ನಿರ್ಮಾಣ ದೇಶಗಳ ಜೊತೆಗೆ ಬಾಂಗ್ಲಾದೇಶ, ಕಜಕಿಸ್ತಾನ, ಸ್ಲೊವೋಕಿಯಾ, ಲಿತೂನಿಯಾ, ರೊಮಾನಿಯಾ, ಅಂಡೊರ್ರಾ, ಮೆಸಿಡೋನಿಯಾ ಇನ್ನೂ ಹಲವು ದೇಶಗಳ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ.
51ನೇ ಅಂತರರಾಷ್ಟ್ರೀಯ ಸಿನಿಮಾ ಉತ್ಸವ ಜನವರಿ 16ರಿಂದ ಪ್ರಾರಂಭವಾಗಲಿದ್ದು, 12 ದಿನ ನಡೆಯಲಿರುವ ಈ ಉತ್ಸವವು ಜನವರಿ 24ರಂದು ಸಮಾರೋಪಗೊಳ್ಳಲಿದೆ. ಗೋವಾ ಸಿನಿಮಾ ಉತ್ಸವ ಎಂದು ಕರೆಯಲಾಗುವ ಈ ಉತ್ಸವವು ಏಷ್ಯಾದ ಹಳೆಯ ಮತ್ತು ಭಾರತದ ದೊಡ್ಡ ಸಿನಿಮಾ ಉತ್ಸವ ಆಗಿದೆ. ಈ ಬಾರಿಯ ಗೋವಾ ಸಿನಿಮೋತ್ಸವವನ್ನು ಒಟಿಟಿಯಲ್ಲಿ ಸಹ ನೋಡಬಹುದಾಗಿದೆ. ನೋಂದಾವಣಿ ಮಾಹಿತಿ ಮಾಹಿತಿ ಹಾಗೂ ಪ್ರಸಾರ ಇಲಾಖೆ (ಪಿಐಬಿ) ವೆಬ್ಸೈಟ್ನಲ್ಲಿ ಲಭ್ಯವಿದೆ.