'ಕಬ್ಜ'ದಲ್ಲಿ ಮತ್ತೆ ಒಂದಾಗಲಿದ್ದಾರೆ ಮುಕುಂದ-ಮುರಾರಿ!

ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ. 

Published: 13th January 2021 08:54 AM  |   Last Updated: 13th January 2021 12:32 PM   |  A+A-


Sudeep And Upendra

ಉಪೇಂದ್ರ- ಸುದೀಪ್

Posted By : Shilpa D
Source : The New Indian Express

ಆರ್ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆ. 

ಕಬ್ಜ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ. ಈ ಸುದ್ದಿಯನ್ನು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಜನವರಿ 14 ರಂದು ಈ ಕುರಿತು ಅಧೀಕೃತ ಮಾಹಿತಿ ಪ್ರಕಟಿಸುವುದಾಗಿ ಆರ್ ಚಂದ್ರು ತಿಳಿಸಿದ್ದಾರೆ.

ನಿರ್ದೇಶಕ ಚಂದ್ರು ಮತ್ತು ಉಪೇಂದ್ರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನನೇ ಚಿತ್ರ ಕಬ್ಜ, ಈ ಮೊದಲು ಐ ಲವ್ ಯು ಮತ್ತು ಬ್ರಹ್ಮ ಸಿನಿಮಾಗಳಲ್ಲಿ ಇಬ್ಬರು ಒಟ್ಟಾಗಿದ್ದರು.

ಸುದೀಪ್ ಮತ್ತು ಉಪೇಂದ್ರ ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನಂದಕಿಶೋರ್ ನಿರ್ದೇಶನದಲ್ಲಿ ಬಂದಿದ್ದ ಈ ಸಿನಿಮಾದಲ್ಲಿ ಸುದೀಪ್ ಕೃಷ್ಣನ ಪಾತ್ರ ನಿರ್ವಹಿಸಿದ್ದರೆ, ದೇವರು ಇಲ್ಲ ಎಂಬ ವಾದವನ್ನು ಮಂಡಿಸುವ ಸಾಮಾನ್ಯ ವ್ಯಕ್ತ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಸಿನಿಮಾ ಯಶಸ್ವಿಯಾಗಿತ್ತು.

‘ಕಬ್ಜ‘ ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ನಿರ್ದೇಶಕ ಆರ್​ ಚಂದ್ರು ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದಿದ್ದರು ಆದರೆ ಇನ್ನು ಪ್ರಾರಂಭವಾಗಿಲ್ಲ. ಆದರೀಗ ಕಬ್ಬ ಚಿತ್ರತಂಡದಿಂದ ಹೊಸ ಮಾಹಿತಿಯೊಂದು ಹೊರ ಬಿದ್ದಿದೆ.

ಕಬ್ಜ ಸಿನಿಮಾದ ಶೇ40 ರಷ್ಟು ಚಿತ್ರೀಕರಣ ಮುಗಿದಿದೆ, ಇನ್ನುಳಿದಿರುವ ಚಿತ್ರೀಕರಣವನ್ನು ಬೇಗನೆ ಪ್ರಾರಂಭಿಸಿ ಚಿತ್ರೀಕರಣವನ್ನು ಕಂಪ್ಲೀಟ್​ ಮಾಡಬೇಕು ಎಂಬ ಪ್ಲಾನ್​ನಲ್ಲಿದ್ದಾರೆ ನಿರ್ದೇಶಕ ಆರ್​ ಚಂದ್ರು. ಬೆಂಗಳೂರು, ಹೈದರಾಬಾದ್​ ಮುಂತಾದ ಕಡೆಯಲ್ಲಿ ಕಬ್ಜ ಸಿನಿಮಾದ ಚಿತ್ರೀಕರಣ ನಡೆದಿದೆ. ಮಾತ್ರವಲ್ಲದೆ ಅದ್ಧೂರಿ ಸೆಟ್​ಗಳನ್ನು ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ.

ಆರ್ ಚಂದ್ರು ಅವರ ಸುಳಿವು ಗಮನಿಸಿದರೆ ಶಿವರಾಜ್ ಕುಮಾರ್ ಏನಾದರೂ ನಟಿಸುತ್ತಿದ್ದಾರಾ ಎಂಬ ಕುತೂಹಲವೂ ಇದೆ. ಇನ್ನುಳಿದಂತೆ ಏಳು ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರಲಿದ್ದು, ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರು ಸಂಗೀತ ಒದಗಿಸುತ್ತಿದ್ದಾರೆ. ಜಗಪತಿ ಬಾಬು, ನವೀನ್, ಜಯಪ್ರಕಾಶ್, ಕಾಟರಾಜು, ಸುಬ್ಬರಾಜು, ಅವಿನಾಶ್, ಎಂ ಕಾಮರಾಜ ಸೇರಿದಂತೆ ಹಲವರು ನಟಿಸಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp