ರಾಜಕೀಯ ಕಥೆಯುಳ್ಳ ಸಿನಿಮಾಗೆ ಕ್ರೇಜಿಸ್ಟಾರ್ ನಿರ್ದೇಶನ!

ಬಿಎಂ ಗಿರಿರಾಜ್ ನಿರ್ದೇಶನದ ಕನ್ನಡಿಗ ಸಿನಿಮಾದಲ್ಲಿ ನಟಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

Published: 20th January 2021 10:44 AM  |   Last Updated: 20th January 2021 12:31 PM   |  A+A-


ravi chandran

ರವಿಚಂದ್ರನ್

Posted By : Shilpa D
Source : The New Indian Express

ಬಿಎಂ ಗಿರಿರಾಜ್ ನಿರ್ದೇಶನದ ಕನ್ನಡಿಗ ಸಿನಿಮಾದಲ್ಲಿ ನಟಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮುಂದಿನ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಕನ್ನಡಿಗ ಸಿನಿಮಾ ಮುಂದಿನ ಕೆಲ ತಿಂಗಳುಗಳಲ್ಲಿ ರಿಲೀಸ್ ಆಗಲಿದೆ. ಹೀಗಾಗಿ ಈ ಸಿನಿಮಾ ನಂತರ ರವಿಚಂದ್ರನ್ ರಾಜಕೀಯ ಕಥೆ ಹೊಂದಿರುವ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.

ನಿರ್ದೇಶನದ ಜೊತೆ ಪ್ರಮುಖ ಪಾತ್ರದಲ್ಲಿ ಕೂಟ ರವಿಚಂದ್ರನ್ ನಟಿಸುತ್ತಿದ್ದಾರೆ. ಕನ್ನಡಿಗ ಸಿನಿಮಾ ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ರವಿಚಂದ್ರನ್ ಮುಂದಿನ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಈ ಹಿಂದೆ ಎನ್ ಎಸ್ ರಾಜ್ ಕುಮಾರ್, ಪೃಥ್ವಿ, ಜಟ್ಟ, ಮೈನಾ, ಮೈತ್ರಿ, ಕಟಕ ಮತ್ತು ಕನ್ನಡಿಗ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಹೊಸ ಪ್ರೊಡಕ್ಷನ್ ಹೌಸ್ ಮೂಲಕ ಮುಂದಿನ ಸಿನಿಮಾಗೆ ಸಿದ್ಧರಾಗುತ್ತಿದ್ದಾರೆ.

ಸದ್ಯ ರವಿಚಂದ್ರನ್ ತಮ್ಮ ಮುಂದಿನ ಸಿನಿಮಾಗಾಗಿ ಕಥೆ ಸಿದ್ಧತೆ ನಡೆಸುತ್ತಿದ್ದಾರೆ,  ಎಲ್ಲವು ಸಿದ್ಧಗೊಂಡ ನಂತರ ಅಧಿಕೃತವಾಗಿ ಪ್ರಕಟವಾಗಲಿದೆ.

Stay up to date on all the latest ಸಿನಿಮಾ ಸುದ್ದಿ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp