ವಿಕ್ರಮ್ ರವಿಚಂದ್ರನ್ 'ತ್ರಿವಿಕ್ರಮ' ಮೇ ತಿಂಗಳಲ್ಲಿ ಬಿಡುಗಡೆಗೆ ಸಿದ್ಧತೆ

ವಿಕ್ರಮ್ ರವಿಚಂದ್ರನ್ ರ ಬಹು ನಿರೀಕ್ಷಿತ 'ತ್ರಿವಿಕ್ರಮ' ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

Published: 20th January 2021 12:11 PM  |   Last Updated: 20th January 2021 12:32 PM   |  A+A-


Vikram Ravichandran

ತ್ರಿವಿಕ್ರಮ ಚಿತ್ರದ ಪೋಸ್ಟರ್

Posted By : Srinivasamurthy VN
Source : The New Indian Express

ಬೆಂಗಳೂರು: ವಿಕ್ರಮ್ ರವಿಚಂದ್ರನ್ ರ ಬಹು ನಿರೀಕ್ಷಿತ 'ತ್ರಿವಿಕ್ರಮ' ಚಿತ್ರವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ವಿಕ್ರಮ್ ರವಿಚಂದ್ರನ್ ರ ಬಹು ನಿರೀಕ್ಷಿತ 'ತ್ರಿವಿಕ್ರಮ' ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಕುರಿತು ಚಿತ್ರತಂಡ ಸಿದ್ಧತೆಯಲ್ಲಿ ತೊಡಗಿದೆ.  ಸಹನಾಮೂರ್ತಿ ನಿರ್ದೇಶನದ ಆಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರದ ಶೂಟಿಂಗ್‌ ಕೊನೆಯ ಹಂತದಲ್ಲಿದ್ದು. ಮಾರ್ಚ್ ಅಂತ್ಯದಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಲು ತಂಡವು ಸಜ್ಜಾಗಿದೆ. ಅಲ್ಲಿ ಬಾಕಿ ಇರುವ ಎರಡು ಹಾಡುಗಳನ್ನು ಚಿತ್ರತಂಡ ಚಿತ್ರೀಕರಿಸಲಿದೆ. ಈ ಹಿಂದೆ ಪುನೀತ್ ರಾಜ್‌ಕುಮಾರ್ ರ ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದ ಡ್ಯಾನ್ಸ್ ಮಾಸ್ಟರ್ ಶೇಖರ್ ಈ ಹಾಡುಗಲಿಗೂ ನೃತ್ಯ ಸಂಯೋಜನೆ ಮಾಡಲಿದ್ದಾರೆ. 

ಕೋವಿಡ್ -19 ಸಾಂಕ್ರಾಮಿಕ ಅಪ್ಪಳಿಸುವ ಮೊದಲು ಆಸ್ಟ್ರೇಲಿಯಾದ ಸ್ಥಳಗಳನ್ನು ಹಾಡಿನ ಚಿತ್ರೀಕರಣಕ್ಕೆ ಅಂತಿಮಗೊಳಿಸಲಾಗಿತ್ತು. ಇದೀಗ ಪರಿಸ್ಥಿತಿ ತಿಳಿಗೊಂಡಿದೆಯಾದರೂ ಆಸ್ಟ್ರೇಲಿಯಾದಲ್ಲಿ ಹಿಮ ಮಳೆಗಾಗಿ ಕಾಯುತ್ತಿದ್ದೇವೆ. ಮಾರ್ಚ್ ಅಥವಾ ಏಪ್ರಿಲ್ ಹಿಮಮಳೆ ಆರಂಭವಾಗುವ ಸಾಧ್ಯತೆ ಇದ್ದು, ಹೀಗಾಗಿ ಏಪ್ರಿಲ್ ವೇಳೆ ಆಸ್ಟ್ರೇಲಿಯಾಗೆ ತೆರಳು ಯೋಜನೆ ರೂಪಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ. 

ಅಂತೆಯೇ  ವೀಸಾ ಕ್ಲಿಯರೆನ್ಸ್‌ಗಾಗಿ ಚಿತ್ರತಂಡ ಕಾಯುತ್ತಿದ್ದು, ಅದು ಫೆಬ್ರವರಿ ಮೊದಲ ವಾರದಲ್ಲಿ ದೊರೆಯಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಬಿಡುಗಡೆಯ ದಿನಾಂಕದ ಬಗ್ಗೆಯೂ ಮಾಹಿತಿ ನೀಡಿದ ಅವರು,  ಮೇ 30 ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜನ್ಮದಿನವಿದ್ದು. ಅಂದೇ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ. ಚಿತ್ರದ ಪೋಸ್ಟ್-ಪ್ರೊಡಕ್ಷನ್ ಕೆಲಸ ಭರಿದಿಂದ ಸಾಗಿದ್ದು, ನಿಗದಿತ ದಿನಾಂಕದೊಳಗೆ ಪೂರ್ಣವಾಗುವ ವಿಶ್ವಾಸವಿದೆ ಎಂದು ನಿರ್ದೇಶಕ ಸಹನಾ ಮೂರ್ತಿ ಹೇಳಿದ್ದಾರೆ.

ತ್ರಿವಿಕ್ರಮ ‘ಹೈ ವೋಲ್ಟೇಜ್ ಪ್ರೇಮಕಥೆ’ ಎಂಬ ಟ್ಯಾಗ್‌ಲೈನ್ ಅನ್ನು ಹೊಂದಿದೆ. ಗೌರಿ ಎಂಟರ್‌ಟೈನರ್ಸ್‌ನ ಬ್ಯಾನರ್‌ನಲ್ಲಿ ಈ ಚಿತ್ರವನ್ನು ಸೊಮಣ್ಣ ಮತ್ತು ಸುರೇಶ್ ನಿರ್ಮಿಸಿದ್ದಾರೆ. ಇದು ಮಾಡೆಲ್ ಅಕಾಂಕ್ಷಾ ಶರ್ಮಾ ಅವರ ಕನ್ನಡದ ಮೊದಲ ಚಿತ್ರವಾಗಿದೆ.  ಉಳಿದಂತೆ  ಅಕ್ಷರ ಗೌಡ, ಚಿಕ್ಕಣ್ಣ, ಸಾಧು ಕೋಕಿಲಾ, ಸುಚೇಂದ್ರ ಪ್ರಸಾದ್, ಶಿವಮಣಿ, ಆದಿ ಲೋಕೇಶ್ ಮತ್ತು ತೆಲುಗು ನಟ ಜಯಪ್ರಕಾಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತವಿದ್ದು, ಸಂತೋಷ್ ರಾಯ್ ಪತಾಜೆ ಮತ್ತು ಗುರು ಪ್ರಶಾಂತ್ ರಾಯ್ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
 

Stay up to date on all the latest ಸಿನಿಮಾ ಸುದ್ದಿ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp