ಅನಿಶ್ ನಿರ್ದೇಶನ, ನಟನೆಯ 'ರಾಮಾರ್ಜುನ' ಜನವರಿ 23ಕ್ಕೆ ಟ್ರೇಲರ್ ಲಾಂಚ್, 29ಕ್ಕೆ ಚಿತ್ರಮಂದಿರಗಳಿಗೆ ಲಗ್ಗೆ
2021ನೇ ವರ್ಷ ಪ್ರಾರಂಭವಾಗುತ್ತಿದ್ದಂತೆ ಮನರಂಜನಾ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಅದರಂತೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಚಿತ್ರಗಳು ಸೇರಿ ಒಂದೊಂದೇ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ.
Published: 21st January 2021 10:59 AM | Last Updated: 21st January 2021 12:33 PM | A+A A-

ರಾಮಾರ್ಜುನ ಚಿತ್ರದಲ್ಲಿ ಅನೀಶ್
2021ನೇ ವರ್ಷ ಪ್ರಾರಂಭವಾಗುತ್ತಿದ್ದಂತೆ ಮನರಂಜನಾ ಲೋಕ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಅದರಂತೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಚಿತ್ರಗಳು ಸೇರಿ ಒಂದೊಂದೇ ಸಿನಿಮಾಗಳು ತೆರೆಗೆ ಬರಲು ಸಿದ್ದವಾಗಿದೆ. ಇದೀಗ ಅನೀಶ್ ಅಭಿನಯದ "ರಾಮಾರ್ಜುನ" ಜನವರಿ 29 ರಂದು ತೆರೆಕಾಣಲಿದೆ ಎಂಬ ಘೋಷಣೆ ಹೊರಬಿದ್ದಿದೆ. ಈ ಚಿತ್ರ ಹೊಸ ವರ್ಷದಲ್ಲಿ ಬಿಡುಗಡೆಯಾದ ಪ್ರಥಮ ಕಮರ್ಷಿಕಲ್ ಎಂಟರ್ಟೈನರ್ ಎನಿಸಿಕೊಳ್ಳಲಿದೆ. ತಮ್ಮ ಚಿತ್ರಕ್ಕೆ ಉದ್ಯಮದ ಕೆಲವು ಪ್ರಮುಖ ನಾಯಕರು, ಸಹೋದ್ಯೋಗಿಗಳಿ ಬೆಂಬಲಿಸಿದ್ದಕ್ಕಾಗಿ ಅನಿಶ್ ಸಂತೋಷಪಟ್ಟಿದ್ದಾರೆ, "ರಾಮಾರ್ಜುನ" ಚಿತ್ರಕ್ಕೆ ನಿರ್ದೇಶನವನ್ನೂ ಅವರೇ ನಿರ್ವಹಿಸಿದ್ದು ಪ್ರೊಡಕ್ಷನ್ ಜವಾಬ್ದಾರಿಯೂ ಸಹ ಅವರ್ ಹೆಗಲ ಮೇಲಿದೆ.
ರಕ್ಷಿತ್ ಶೆಟ್ಟಿ ಇತ್ತೀಚೆಗೆ ಸಹ ನಿರ್ಮಾಪಕರಾಗಿ ಈ ತಂಡಕ್ಕೆ ಸೇರ್ಪಡೆಗೊಂಡಿದ್ದು ಅವರೂ ಚಿತ್ರವನ್ನು ಸಿನೆಮಾ ಮಂದಿರಗಳಿಗೆ ತರುವಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಾರೆ. ಈ ನಡುವೆ ನಿರ್ಮಾಪಕ-ವಿತರಕ ಕಾರ್ತಿಕ್ ಗೌಡ ಅವರಿಂದ ಇನ್ಬೊಂದು ಪ್ರಕಟಣೆ ಹೊರಬಿದ್ದಿದ್ದು , ಅವರು ತಮ್ಮ ಬ್ಯಾನರ್ ಕೆಆರ್ಜಿ ಸ್ಟುಡಿಯೋಸ್ ಅಡಿಯಲ್ಲಿ ಈ ಚಿತ್ರದ ವಿತರಣೆ ಮಾಡಲಿದ್ದಾರೆ. ಈ ಕುರಿತಂತೆ ವಿತರಕರು ಟ್ವಿಟ್ಟರ್ ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ.
ರಕ್ಷಿತ್ ಮತ್ತು ಕಾರ್ತಿಕ್ ಇಬ್ಬರೂ ಈ ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಕಥಾವಸ್ತುವಿನ ಬಗೆಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆಂದುಅನೀಶ್ ಉತ್ಸುಕವಾಗಿ ನುಡಿದರು."ಆ ನಂತರ ಅವರಿಬ್ಬರೂ ತಂಡಕ್ಕೆ ಸೇರಿಕೊಳ್ಲಲು ಬಯಸಿದರು. ರಾಮಾರ್ಜುನ ಚಿತ್ರದ ಬಿಡುಗಡೆಗೆ ಇದು ಅತೀ ಹೆಚ್ಚಿನ ಖುಷಿಯ ಕಾರಣಾವಾಗಿದೆ. " ಎಂದು ಅನೀಶ್ ಹೇಳುತ್ತಾರೆ, ಚಿತ್ರಮಂದಿರಗಳಿಗೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಅನುಮತಿಸಿದ್ದಾಗ ಚಿತ್ರ ಬಿಡುಗಡೆಯಾಗುವುದು ಉತ್ತಮ ಬೆಳವಣಿಗೆಯಾಗಿದೆ.
"ತಮಿಳು ಚಿತ್ರೋದ್ಯಮ"ಮಾಸ್ಟರ್" ಚಿತ್ರದೊಡನೆ ಸಿನಿಮಾ ಮಂದಿರಗಳನ್ನು ತೆರೆದಿದೆ. ಅಲ್ಲದೆ ಇತ್ತೀಚೆಗೆ "ಕ್ರಾಕ್" ಮತ್ತು "ರೆಡ್" ಬಿಡುಗಡೆ ಮಾಡುವ ಮೂಲಕ ತೆಲುಗಿ ಚಿತ್ರರಂಗದಲ್ಲಿಯೂ ಹೊಸ ಹುರುಪು ಪ್ರಾರಂಭವಾಗಿದೆ. ಇದೀಗ ನಾವೂ ನಮ್ಮ ಹೊಟ್ಟೆಪಾಡಿನ ಹಾದಿಯನ್ನು ನೋಡಿಕೊಳ್ಳಬೇಕಾಗಿದೆ" ಅನಿಶ್ ಹೇಳುತ್ತಾರೆ. ಏತನ್ಮಧ್ಯೆ, ನಟ-ನಿರ್ದೇಶಕ ಕೊನೆಯ ನಿಮಿಷದ ನಂತರದ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರು ಚಿತ್ರದ ಟ್ರೇಲರ್ ಅನ್ನು ಜನವರಿ 23 ರಂದು ಬಿಡುಗಡೆ ಮಾಡಲಿದ್ದಾರೆ. ವಿಂಕ್ವಿಸ್ಟಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ರಾಮಾರ್ಜುನ ನಿರ್ಮಾಣವಾಗಿದೆ.
ಆನಂದ್ ರಾಜವಿಕ್ರಮ್ ಸಂಗೀತ ನೀಡಿದರೆ, ಶಂಕರ್ ರಾಮ ಮತ್ತು ಕಿರಣ್ ಚಂದ್ರ ಸಂಭಾಷಣೆ ಬರೆದಿದ್ದಾರೆ. ಆಕ್ಷನ್ ಸಾಹಸಗಳನ್ನು ವಿಕ್ರಮ್ ಮೊರ್ ನಿರ್ವಹಿಸಿದರೆ ನವೀನ್ ಕುಮಾರ್ ಎಸ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, , ಹನುಮಂತ ಗೋರು, ಅರ್ಜುನ ಬಲರಾಜ್, ರಾಜುಬಲ್ವಾಡಿ, ಸ್ವಾತಿ ಮತ್ತು ಮಂಜು ಪಾವಗಡ ಪ್ರಮುಖ ತಾರಾಂಗಣದಲ್ಲಿದ್ದಾರೆ.