ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಮೂಲಕ ತೆಲುಗಿಗೆ ಸೌರವ್ ಲೋಕಿ ಎಂಟ್ರಿ
ಭಜರಂಗಿ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದ ಸೌರವ್ ಲೋಕೇಶ್ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.
Published: 21st January 2021 11:04 AM | Last Updated: 21st January 2021 12:38 PM | A+A A-

ಸೌರವ್ ಲೋಕೇಶ್
ಭಜರಂಗಿ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದ ಸೌರವ್ ಲೋಕೇಶ್ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.
ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ ಸಿನಿಮಾದಲ್ಲಿ ನಟಿಸಿದ್ದ ಸೌರವ್ ಲೋಕಿ ಭಜರಂಗಿ ಲೋಕಿ ಎಂದೇ ಖ್ಯಾತಿ ಪಡೆದಿದ್ದಾರೆ.
ಸುಮಾರು 30 ಸಿನಿಮಾಗಳಲ್ಲಿ ನಟಿಸಿರುವ ಲೋಕಿ, ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ, ಮೆಗಾಸ್ಟಾರ್ ಚಿರಂಜೀವಿ ಅವರ 152ನೇ ಸಿನಿಮಾ ಆಚಾರ್ಯದಲ್ಲಿ ಸೌರವ್ ಲೋಕಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಕೊರಟಾಲಾ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ಕೆಲವು ದಿನಗಳ ಶೂಟಿಂಗ್ ಮುಗಿಸಿದ್ದಾರೆ.
ತನ್ನ ಮೊದಲ ಶಾಟ್ಗಾಗಿ ರಾಮ್ ಚರಣ್ರಂತಹ ಸ್ಟಾರ್ ನಟನ ಜೊತೆ ಸ್ಕ್ರೀನ್ ಶೇರ್ ಮಾಡಲು ಲೋಕಿ ತುಂಬಾ ದಿಗ್ಭ್ರಮೆ ಗೊಂಡದ್ದರು ಎಂದು ಮೂಲಗಳು ತಿಳಿಸಿವೆ. ಕನ್ನಡದಲ್ಲಿ ಅತ್ಯದ್ಭುತ ಕಲಾವಿದರಿಗಾಗಿ ಕೊರಟಾಲ ಶಿವ ಹುಡುಕಾಟ ನಡೆಸುತ್ತಿದ್ದರು. ಅಂತಿಮವಾಗಿ ಅವರಿಗೆ ಸೌರವ್ ಲೋಕಿ ಕಣ್ಣಿಗೆ ಬಿದ್ದಿದ್ದಾರೆ.
ಈ ಚಿತ್ರದಲ್ಲಿ ಕಿಶೋರ್ ಮತ್ತು ಸೋನು ಸೂದ್ ಅವರೊಂದಿಗೆ ಲೋಕಿ ನಟಿಸಲಿದ್ದಾರೆ. ಕೋಣಿದೇಲಾ ಪ್ರೊಡಕ್ಷನ್ ಕಂಪನಿ ಮತ್ತು ಮ್ಯಾಟಿನಿ ಎಂಟರ್ಟೈನ್ಮೆಂಟ್ಸ್ ಅವರ ಬ್ಯಾನರ್ಗಳಲ್ಲಿ ನಿರಂಜನ್ ರೆಡ್ಡಿ ಅವರೊಂದಿಗೆ ರಾಮ್ ಚರಣ್ ಸೇರಿ ಆಚಾರ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿರುವ ಈ ಚಿತ್ರವು 2021ರಲ್ಲಿ ಬಿಡುಗಡೆಯಾಗಲಿದೆ.
ಏತನ್ಮಧ್ಯೆ, ಭಜರಂಗಿ ಲೋಕಿ ಈಗಾಗಲೇ ತೆಲುಗಿನಲ್ಲಿ ಎರಡನೇ ಪ್ರಾಜೆಕ್ಟ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ, ಆದರೆ ಯಾವುದೇ ವಿವರ ಬಿಟ್ಟುಕೊಟ್ಟಿಲ್ಲ, ಸದ್ಯ ಕನ್ನಡದಲ್ಲಿ ಶಿವರಾಜ್ಕುಮಾರ್ ಅವರ ಭಜರಂಗಿ 2 ಮತ್ತು ತಕ್ಕರ್ ಚಿತ್ರದ ಶೂಟಿಂಗ್ ಅನ್ನು ಲೋಕಿ ಪೂರ್ಣಗೊಳಿಸಿದ್ದಾರೆ.