ಫೆಬ್ರವರಿ 5 ರಂದು ಪ್ರಜ್ವಲ್ ದೇವರಾಜ್ ನಟನೆಯ ಇನ್ಸ್ ಪೆಕ್ಟರ್ ವಿಕ್ರಂ ರಿಲೀಸ್

ಪ್ರಜ್ವಲ್ ದೇವರಾಜ್ ಸದ್ಯ ವೀರಂ ಸೆಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಫೆಬ್ರುವರಿ 5ಕ್ಕೆ ಬಿಡುಗಡೆಯಾಗಲಿದೆ. 

Published: 21st January 2021 12:26 PM  |   Last Updated: 21st January 2021 12:35 PM   |  A+A-


Prajwal deveraj

ಪ್ರಜ್ವಲ್ ದೇವರಾಜ್

Posted By : Shilpa D
Source : The New Indian Express

ಪ್ರಜ್ವಲ್ ದೇವರಾಜ್ ಸದ್ಯ ವೀರಂ ಸೆಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಪ್ರಜ್ವಲ್ ದೇವರಾಜ್ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರ ಫೆಬ್ರುವರಿ 5ಕ್ಕೆ ಬಿಡುಗಡೆಯಾಗಲಿದೆ. 

ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ ಚಿತ್ರದ ನಿರ್ದೇಶಕ ನರಸಿಂಹ. ಕಳೆದ ಮೂರು ವರ್ಷಗಳಿಂದ ಇನ್ಸ್‌ಪೆಕ್ಟರ್ ವಿಕ್ರಂ ಚಿತ್ರದ ಕೆಲಸ ನಡೆದಿತ್ತು, ಇದೀಗ ಚಿತ್ರಕ್ಕೆ ಬಿಡುಗಡೆಯ ಭಾಗ್ಯ ದೊರೆತಿದೆ.

ಈ ಸಿನಿಮಾದಂತೆ ಅನೇಕ ಕನ್ನಡ ಸಿನಿಮಾಗಳು ಬಿಡುಗಡೆಗಾಗಿ ಕಾಯುತ್ತಿವೆ. ಇನ್ಸ್‌ಪೆಕ್ಟರ್ ವಿಕ್ರಂ ನಂತರ ಒಂದೊಂದೇ ಸಿನಿಮಾಗಳು ತೆರೆ ಕಾಣುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಭಾವನಾ ಮೆನನ್, ರಘು ಮುಖರ್ಜಿ ಮುಖ್ಯಭೂಮಿಕೆಯಲ್ಲಿದ್ದಾರೆ. 

ಶೇ.50ರಷ್ಟು ಆಸನ ಸಾಮರ್ಥ್ಯವನ್ನು ಶೇ. 100 ಬದಲಾಯಿಸುವ ಆಶಯದೊಂದಿಗೆ, ಇನ್ಸ್ಪೆಕ್ಟರ್ ವಿಕ್ರಮ್ ಅವರ ತಂಡವು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ನಿಮ್ಮೆಲ್ಲರ ಮನರಂಜನೆಗಾಗಿ ಬರುತ್ತಿದೆ ಎಂದು ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ. ಪ್ರೇಕ್ಷಕರು ಥಿಯೇಟರ್ ನಲ್ಲಿ ಬಂದು ಸಿನಿಮಾ ನೋಡಬೇಕೆಂದು ಮನವಿ ಮಾಡಿದ್ದಾರೆ.

ಟ್ರೈಲರ್ ಅನ್ನು ಜನವರಿ 26 ರಂದು ಬಿಡುಗಡೆ ಮಾಡಲು ತಯಾರಕರು ಯೋಜಿಸಿದ್ದಾರೆ. ಈ ಚಿತ್ರವನ್ನು ಚೊಚ್ಚಲ ನರಸಿಂಹ ನಿರ್ದೇಶಿಸಿದ್ದು, ಇದನ್ನು ವಿಕ್ಯಾಥ್ ವಿ.ಆರ್ ನಿರ್ಮಿಸಿದ್ದಾರೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಪ್ರಜ್ವಲ್‌ ಕೈಯಲ್ಲಿ ಈಗಾಗಲೇ ಮೂರ್ನಾಲ್ಕು ಸಿನಿಮಾಗಳಿವೆ. ಅವುಗಳ ಶೂಟಿಂಗ್ ಕೆಲಸಗಳು ಭರದಿಂದ ಸಾಗಿವೆ. ‘ಅರ್ಜುನ್‌ ಗೌಡ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಅದರಲ್ಲಿ ಪ್ರಜ್ವಲ್ ಅವರದ್ದು ಕಿಕ್‌–ಬಾಕ್ಸರ್ ಪಾತ್ರ. ಇವರ ‘ವೀರಂ’ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಇದರೊಂದಿಗೆ ಪಿ.ಸಿ. ಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲೂ ಪ್ರಜ್ವಲ್ ನಟಿಸಲಿದ್ದಾರೆ.
 

Stay up to date on all the latest ಸಿನಿಮಾ ಸುದ್ದಿ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp