ಮಲಯಾಳಂ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ವಿಧಿವಶ
ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಕೊರೋನಾ ಸೋಂಕು ತಗುಲಿತ್ತು.
Published: 21st January 2021 09:56 AM | Last Updated: 21st January 2021 09:56 AM | A+A A-

ಉನ್ನಿ ಕೃಷ್ಣಣ್ ನಂಬೂದಿರಿ
ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಕೊರೋನಾ ಸೋಂಕು ತಗುಲಿತ್ತು.
ಖ್ಯಾತ ನಿರ್ದೇಶಕ ಕೆದಪ್ರಂ ದಾಮೋದರನ್ ನಂಬೂದಿರಿ ಅವರ ಮಾವ ಇವರಾಗಿದ್ದು, ದೇಶಿಕಾನಂ ಮತ್ತು ಕಲ್ಯಾಣರಾಮನ್ ಮುಂತಾದ ಅನೇಕ ಚಿತ್ರಗಳಲ್ಲಿ ಅಜ್ಜನ ಪಾತ್ರವನ್ನು ನಿರ್ವಹಿಸಿದ್ದರು.
ನ್ಯುಮೋನಿಯಾ ಹಿನ್ನೆಲೆಯಲ್ಲಿ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಕೋವಿಡ್ ದೃಢಪಟ್ಟಿತ್ತು. ಉನ್ನಿಕೃಷ್ಣನ್ ಕೆಲವು ದಿನಗಳ ಚಿಕಿತ್ಸೆಯ ನಂತರ ಎರಡು ದಿನಗಳ ಹಿಂದೆ ಕೋವಿಡ್ನಿಂದ ಮುಕ್ತರಾಗಿ ಮರಳಿದ್ದರು.
1996 ರಲ್ಲಿ ಬಿಡುಗಡೆ ಆದ 'ದೇಸದಾನಂ' ಸಿನಿಮಾದಲ್ಲಿ ಮೊದಲ ಬಾರಿಗೆ ಉನ್ನಿಕೃಷ್ಣನ್ ನಟಿಸಿದ್ದರು. ಆ ನಂತರ ಹಲವಾರು ಹಿಟ್, ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯ ತಾತನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಉನ್ನಿಕೃಷ್ಣನ್ ನಂಬೂದಿರಿ ತಮ್ಮ ಕಿರಿಯ ಮಗ, ಹೈಕೋರ್ಟ್ ನ್ಯಾಯಾಧೀಶ ಪಿ.ವಿ. ಕನ್ನಿಕೃಷ್ಣನ್ ಅವರೊಂದಿಗೆ ವಡುತಲದಲ್ಲಿರುವ ತಮ್ಮ ಮನೆಯಲ್ಲಿ ನೆಲಸಿದ್ದರು. ಕಲ್ಯಾಣರಾಮನ್, ಚಂದ್ರಮುಖಿ, ಪಮ್ಮಲ್ ಕೆ. 'ಸಂಬಂಧಂ' ಚಿತ್ರಗಳಲ್ಲಿ ನಟಿಸಿದ್ದಾರೆ.