'ಲವ್ ಯೂ ರಚ್ಚು' ಚಿತ್ರಕ್ಕಾಗಿ ಅಜಯ್ ರಾವ್ ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿ
"ಲವ್ ಯೂ ರಚ್ಚು" ರಚಿತಾ ರಾಮ್ ಅವರ ಮತ್ತೊಂದು ಹೊಸ ಚಿತ್ರವಾಗಿದ್ದು ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಮೊದಲ ಬಾರಿಗೆ ಅಜಯ್ ರಾವ್ ಅವರೊಂದಿಗೆ ರೊಮ್ಯಾಂಟಿಕ್ ಡ್ರಾಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶನ ಮಾಡುತ್ತಿದ್ದು ಇದು ಶಂಕರ್ ಅವರ ಪಾಲಿನ ಚೊಚ್ಚಲ ನಿರ್ದೇಶನದ ಚಿತ್ರವಾಗಿರಲಿದೆ. ಕ್ರಿಯೇಟಿವ್ ಹೆಡ್ ಸಹ ಆಗಿರುವ ಗುರು ದೇಶಪಾಂ
Published: 23rd January 2021 11:02 AM | Last Updated: 23rd January 2021 12:29 PM | A+A A-

ರಚಿತಾ ರಾಮ್
"ಲವ್ ಯೂ ರಚ್ಚು" ರಚಿತಾ ರಾಮ್ ಅವರ ಮತ್ತೊಂದು ಹೊಸ ಚಿತ್ರವಾಗಿದ್ದು ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಮೊದಲ ಬಾರಿಗೆ ಅಜಯ್ ರಾವ್ ಅವರೊಂದಿಗೆ ರೊಮ್ಯಾಂಟಿಕ್ ಡ್ರಾಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಂಕರ್ ರಾಜ್ ನಿರ್ದೇಶನ ಮಾಡುತ್ತಿದ್ದು ಇದು ಶಂಕರ್ ಅವರ ಪಾಲಿನ ಚೊಚ್ಚಲ ನಿರ್ದೇಶನದ ಚಿತ್ರವಾಗಿರಲಿದೆ. ಕ್ರಿಯೇಟಿವ್ ಹೆಡ್ ಸಹ ಆಗಿರುವ ಗುರು ದೇಶಪಾಂಡೆ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕ ಶಶಾಂಕ್ ಕಥೆ ಬರೆದಿದ್ದಾರೆ.
"ಜಂಟಲ್ಮನ್" ಹಾಗೂ "ಪೆಂಟಗಾನ್" ಚಿತ್ರದ ತರುವಾಯ ಜಿ-ಸಿನೆಮಾಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರಲಿರಿವ ಮೂರನೇ ಯೋಜನೆ ಇದಾಗಿದೆ. “ನಿರ್ದೇಶಕ ಶಶಾಂಕ್ ಅವರ ಸಂವೇದನಾಶೀಲ ಕಥೆಗೆ ಅಜಯ್ ರಾವ ಅವರ ಅಭಿಮಯವು ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡುವ ನಿರೀಕ್ಷೆ ಇದೆ. ಅಜಯ್ ಮತ್ತು ರಚಿತಾ ಸಹ ಸಾಕಷ್ಟು ಹೊಸತನದ ಅಭಿನಯ ನೀಡಲಿದ್ದಾರೆ" ಗುರು ದೇಶಪಾಂಡೆ ಹೇಳುತ್ತಾರೆ.
ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸಿರುವ ಶಂಕರ್ ರಾಜ್, ಶಶಾಂಕ್ ಬಗೆಗೆ ಮೆಚ್ಚುಗೆ ಸೂಚಿಸಿದ್ದಾರೆ. "ಅವರು ನಿರ್ದೇಶಕ ಮಾತ್ರವಲ್ಲದೆ ಅದ್ಭುತ ಕಥೆಗಾರರೂ ಹೌದು" ಎಂದು ಹೇಳಿದ್ದಾರೆ. ".ಲವ್ ಯು ರಚ್ಚು" ಶೀರ್ಷಿಕೆಯನ್ನು ಕೇಳಿದಾಗ ರಚಿತಾ ಅಚ್ಚರಿಪಟ್ಟಿದ್ದರು, ಏಕೆಂದರೆ ರಚ್ಚು ಎನ್ನುವುದು ರಚಿತಾ ಅವರ ಅಡ್ಡ ಹೆಸರಾಗಿದೆ.
"ಶೀರ್ಷಿಕೆಯು ನನ್ನ ಹೆಸರು ಹೊಂದಿದೆ.ಕಥೆಯನ್ನು ಕೇಳಿದ ನಂತರ, ನಾನು ಯೋಜನೆಯನ್ನು ಒಪ್ಪಿಕೊಳ್ಳದೆ ಇರಲು ಸಾಧ್ಯವಾಗಿಲ್ಲ. ಉತ್ತಮ ತಂಡದ ಭಾಗವಾಗುವುದಕ್ಕೆ ನನಗೆ ಸಂತೋಷವಾಗಿದೆ, ”ಎಂದು ನಟಿ ಹೇಳಿದ್ದಾರೆ. ಜನವರಿ 24 ರಂದು ಈ ಚಿತ್ರದ ಮಹೂರ್ತ ನಡೆಯಲಿದ್ದು ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯ ಶಾರ್ಟ್ ಲಿಸ್ಟ್ ಮಾಡುತ್ತಿರುವಾಗಲೇ ಸಂಗೀತ ನಿರ್ದೇಶಕರಾಗಿ ಮಣಿಕಾಂತ್ ಕದ್ರಿ ಅವರನ್ನು ಫೈನಲ್ ಮಾಡಿದ್ದಾರೆ.