ಜನವರಿ 28ರಿಂದ ಶರಣ್ 'ಗುರು ಶಿಷ್ಯರು' ಶೂಟಿಂಗ್ ಪ್ರಾರಂಭ

ಸ್ಯಾಂಡಲ್ ವುಡ್ ನಟ ಶರಣ್ ಅಭಿನಯದ "ಗುರು ಶಿಷ್ಯರು" ಸಿನಿಮಾ ಚಿತ್ರೀಕರಣ ಜನವರಿ 28 ರಿಂದ ಪ್ರಾರಂಭವಾಗಲಿದ್ದು ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಲಿದೆ.

Published: 23rd January 2021 10:31 AM  |   Last Updated: 23rd January 2021 12:26 PM   |  A+A-


ಶರಣ್

Posted By : Raghavendra Adiga
Source : The New Indian Express

ಸ್ಯಾಂಡಲ್ ವುಡ್ ನಟ ಶರಣ್ ಅಭಿನಯದ "ಗುರು ಶಿಷ್ಯರು" ಸಿನಿಮಾ ಚಿತ್ರೀಕರಣ ಜನವರಿ 28 ರಿಂದ ಪ್ರಾರಂಭವಾಗಲಿದ್ದು ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಲಿದೆ. ಕ್ರೀಡಾಧಾರಿತ  ಕಾಮಿಡಿ ಡ್ರಾಮದಲ್ಲಿ "ಅವತಾರ ಪುರುಷ" ನಾಯಕ ನಟ ಶರಣ್ ಜತೆಗೆ ಹಿರಿಯ ನಟ ದತ್ತಣ್ಣ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲ ಶೆಡ್ಯೂಲ್ 6 ದಿನಗಳಲ್ಲಿ ಮುಗಿಸಲು ಯೋಜಿಸಿದ್ದು ಚಿತ್ರದ ಶೀರ್ಷಿಕೆ 1981ರಲ್ಲಿ ತೆರೆಗೆ ಬಂದಿದ್ದ ಕ್ಲಾಸಿಕ್ ಹಾಸ್ಯ ಪ್ರಧಾನ ಚಿತ್ರದಿಂದ ಪಡೆಯಲಾಗಿದೆ. ಈ ಕಥೆ 1995ರ ಅವಧಿಯಲ್ಲಿ ನಡೆಯಲಿದೆ. ಇಲ್ಲಿ ವಿದ್ಯಾರ್ಥಿಗಳು ಮತ್ತು ಪಿಟಿ ಮಾಸ್ಟರ್ ನಡುವಿನ ಸಂಘರ್ಷವನ್ನು ಹಾಸ್ಯದ ಲೇಪನದೊಡನೆ  ತೋರಿಸಲಾಗಿದೆ. ಶರಣ್ ಸ್ವಂತ ಪ್ರೊಡಕ್ಷನ್ ಹೌಸ್, ಲಡ್ಡು ಸಿನೆಮಾಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. 

ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ "ರಾಬರ್ಟ್" ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಇದ್ದು ಇವರು ತರುಣ್ ಕಿಶೋರ್ ಕ್ರಿಯೇಟಿವ್ಜ್ ಬ್ಯಾನರ್ ಅಡಿಯಲ್ಲಿ ಯೋಜನೆಯನ್ನು ಸಹ-ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಮತ್ತು ಸುಧಾಕರ್ ಶೆಟ್ಟಿ ಕ್ರಮವಾಗಿ ಸಂಗೀತ ಮತ್ತು ಚಾಯಾಗ್ರಹಣ ನಿರ್ವಹಿಸುತ್ತಾರೆ.

Stay up to date on all the latest ಸಿನಿಮಾ ಸುದ್ದಿ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp