ನಾಗಾಭರಣರಿಗೆ ಇನ್ನೂ ಡಾಕ್ಟರೇಟ್ ಕೊಟ್ಟಿಲ್ಲವೇಕೆ? ಸರ್ಕಾರಕ್ಕೆ ನಟಿ ಜಯಂತಿ ಪ್ರಶ್ನೆ
ಚಂದನವನದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ, ಮೂವತ್ತಾರು ಸದಭಿರುಚಿಯ, ಸಂದೇಶಾತ್ಮಕ ಚಿತ್ರಗಳನ್ನೇ ನೀಡಿರುವ ನಾಗಾಭರಣ ಅವರಿಗೆ ಇನ್ನೂ ಡಾಕ್ಟರೇಟ್ ನೀಡಿಲ್ಲವೇಕೆ ಎಂದು ಹಿರಿಯ ನಟಿ ಜಯಂತಿ ಪ್ರಶ್ನಿಸಿದ್ದಾರೆ.
Published: 23rd January 2021 06:41 PM | Last Updated: 23rd January 2021 06:51 PM | A+A A-

ಜಯಂತಿ-ನಾಗಭರಣ
ಬೆಂಗಳೂರು: ಚಂದನವನದ ಅತ್ಯುತ್ತಮ ನಿರ್ದೇಶಕರಲ್ಲೊಬ್ಬರಾದ, ಮೂವತ್ತಾರು ಸದಭಿರುಚಿಯ, ಸಂದೇಶಾತ್ಮಕ ಚಿತ್ರಗಳನ್ನೇ ನೀಡಿರುವ ನಾಗಾಭರಣ ಅವರಿಗೆ ಇನ್ನೂ ಡಾಕ್ಟರೇಟ್ ನೀಡಿಲ್ಲವೇಕೆ ಎಂದು ಹಿರಿಯ ನಟಿ ಜಯಂತಿ ಪ್ರಶ್ನಿಸಿದ್ದಾರೆ.
ನಾಗಾಭರಣ ಜನ್ಮದಿನದ ಅಂಗವಾಗಿ, ನಗರದ ಬಸವನಗುಡಿಯ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆದ ‘ನಾಗಾಭರಣ ಸಿನಿಮಾವರಣ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾಗಾಭರಣ ಅವರಿಗೆ ಡಾಕ್ಟರೇಟ್ ನೀಡುವ ಮನಸ್ಸು ಸರ್ಕಾರಕ್ಕಿನ್ನೂ ಬಂದಿಲ್ಲವೇಕೆ? ಅವರ ಪ್ರತಿಭೆಯನ್ನು ಇನ್ನೂ ಗುರುತಿಸಿಲ್ಲವೇ? ನಾನು ಜೀವಂತ ಇರುವಾಗಲೇ ಈ ಪ್ರಶಸ್ತಿ ಅವರಿಗೆ ಸಿಗುತ್ತದೆಯೇ” ಎಂದು ಪ್ರಶ್ನಿಸಿದರು.
ನಾಗಾಭರಣ ಅವರನ್ನು ಮುಖತಃ ಭೇಟಿಯಾಗಿ ಹಾರೈಸಬೇಕು ಎಂದು ಅನಾರೋಗ್ಯದ ನಡುವೆಯೂ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಅದೆಷ್ಟೋ ಕಲಾವಿದರಿಗೆ ಇಹಲೋಕ ತ್ಯಜಿಸಿದ ನಂತರ ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡುತ್ತಾರೆ. ಇದರಿಂದ ಆ ಕಲಾವಿದರಿಗೇನು ಪ್ರಯೋಜನ, ಸಂತೋಷಪಡಲು ಸಾಧ್ಯವೇ? ಹೀಗಾಗಿ ಸರ್ಕಾರವು ಸೂಕ್ತ ವ್ಯಕ್ತಿಗಳನ್ನು ಗುರುತಿಸಿ ಅರ್ಹ ಗೌರವ ನೀಡಬೇಕು ಎಂದು ಜಯಂತಿ ಮನವಿ ಮಾಡಿದರು.