
ತಾನ್ಯಾ ಹೋಪ್
ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್-2 ಸಿನಿಮಾದಲ್ಲಿ ತಾನ್ಯಾ ಹೋಪ್ ನಟಿಸುತ್ತಿರುವುದನ್ನು ನಿರ್ಮಾಪಕರು ಖಚಿತ ಪಡಿಸಿದ್ದಾರೆ. ಸಿನಿಮಾಗೆ ತಾನ್ಯಾ ಹೋಪ್ ಕೂಡ ಸಹಿ ಮಾಡಿದ್ದು, ಸಿನಿಮಾ ಬಗ್ಗೆ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ಈ ಮೊದಲು ತಾವು ಈ ರೀತಿಯ ಪಾತ್ರದಲ್ಲಿ ನಟಿಸಿಲ್ಲ ಎಂದು ಹೇಳಿರುವ ತಾನ್ಯ, ಈ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ತುಟಿ ಬಿಚ್ಚಿಲ್ಲ, ಈ ಸಿನಿಮಾದಲ್ಲಿ ನಟಿಸರುತ್ತಿರುವುದು ತಮಗೆ ಅಚ್ಚರಿ ತಂದಿದೆ ಎಂದಿದ್ದಾರೆ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯ ಜೊತೆ ಕೆಲಸ ಮಾಡುವುದು ತಮಗೆ ರೋಮಾಂಚನ ತಂದಿದೆ ಎಂದಿದ್ದಾರೆ.
ಜಯತೀರ್ಥ ಜೊತೆ ಕೆಲಸ ಮಾಡಲು ಕಾತುರದಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. “ಅವರು ರಂಗಭೂಮಿ ಕಲಾವಿದರೂ ಆಗಿರುವುದರಿಂದ, ನಟನೆ, ಸಿನೆಮಾ, ಕಲೆ, ಪಾತ್ರ ಮತ್ತು ಚಿತ್ರದ ಬಗ್ಗೆ ಅವರ ಮೇಲೆ ಅಪಾರ ವಿಶ್ವಾಸವಿದ್ದು, ಅವರಿಂದ ನನ್ನ ನಟನೆಗೆ ಮತ್ತಷ್ಟು ಸಹಾಯವಾಗಲಿದೆ ಎಂದು ಹೇಳಿದ್ದಾರೆ. ಅವರಿಂದ ನಾನು ಕಲಿಯಬೇಕಾಗಿರುವುದು ಬಹಳಷ್ಟಿದೆ, ಯಶಸ್ವಿ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಜಯತೀರ್ಥ ನಿರ್ದೇಶನದಲ್ಲಿ ನಟಿಸುವುದು ನನ್ನ ವೃತ್ತಿ ಬದುಕಿನ ಬೆಳವಣಿಗೆಗೆ ಸಹಾಯವಾಗಲಿದೆ.
ಅಂತಹ ಪಾತ್ರಗಳು ವೈವಿದ್ಯತೆಯಿಂದ ಕೂಡಿರುತ್ತದೆ. ಈ ಅವಕಾಶವನ್ನು ಪಡೆದಿದ್ದಕ್ಕೆ ನನಗೆ ಸಂತೋಷವಾಗಿದೆ, ”ಎಂದು ಅವರು ತಿಳಿಸಿದ್ದಾರೆ. ಬೆಲ್ ಬಾಟಮ್ ಬಗ್ಗೆ ಮಾತನಾಡುತ್ತಾ, ತಾನ್ಯಾ ಅವರು ಚಿತ್ರದ ಬಗ್ಗೆ ಎಲ್ಲವನ್ನೂ ಇಷ್ಟಪಟ್ಟಿದ್ದಾರೆ, ಅದರಲ್ಲೂ ವಿಶೇಷವಾಗಿ ರಿಷಬ್ ಅವರನ್ನು ಡಿಟೆಕ್ಟಿವ್ ದಿವಾಕರ್ ಆಗಿ ನೋಡುತ್ತಿದ್ದು ಅವರಲ್ಲಿ ಹೊಸ ಜಗ್ಗೇಶ್ ಅವರನ್ನು ಕಾಣುತ್ತಿದ್ದಾರೆ.
ಇದು ತುಂಬಾ ತಮಾಷೆಯಾಗಿದೆ. ಈ ಸಿನಿಮಾ ನಿಮ್ಮನ್ನು ಕುರ್ಚಿಯ ತುದಿಯಲ್ಲಿರಿಸುತ್ತದೆ, ಸಂಪೂರ್ಣ ಮನರಂಜನೆಯಾಗಿದೆ, ”ಎಂದು ತಾನ್ಯಾ ಹೇಳುತ್ತಾರೆ, ಮಾರ್ಚ್ ತಿಂಗಳಲ್ಲಿ ಬೆಲ್ ಬಾಟಮ್ -2 ಸಿನಿಮಾ ಶೂಟಿಂಗ್ ನಲ್ಲಿ ತಾನ್ಯಾ ಹೋಪ್ ಭಾಗವಹಿಸಲಿದ್ದಾರೆ. ತಾನ್ಯ ಅವರನ್ನು ಹೊರತು ಪಡಿಸಿ, ಉಳಿದಂತೆ ಅದೇ ಕಲಾವಿದರ ತಂಡ ಇದರಲ್ಲೂ ಮುಂದುವರಿಯುತ್ತಾರೆ.