ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ

ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟಿ ಜಯಶ್ರೀ ರಾಮಯ್ಯ ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Published: 25th January 2021 01:44 PM  |   Last Updated: 25th January 2021 05:24 PM   |  A+A-


Actress Jayashree Ramaiah Suicide

ನಟಿ ಜಯಶ್ರೀ ರಾಮಯ್ಯ

Posted By : Nagaraja AB
Source : Online Desk

ಬೆಂಗಳೂರು: ಬಿಗ್ ಬಾಸ್ ಕನ್ನಡ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ನಟಿ ಜಯಶ್ರೀ ರಾಮಯ್ಯ ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ನಟಿ, ಈ ಮೊದಲೂ ಸಹ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು, ಆಪ್ತರೊಂದಿಗೂ ಈ ಬಗ್ಗೆ ಹಂಚಿಕೊಂಡಿದ್ದರು. ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದರು. 

ಆ ಬಳಿಕ ಸಂಧ್ಯಾಕಿರಣ ಪುನರ್ವಸತಿ ಕೇಂದ್ರವೊಂದರಲ್ಲಿ ಮಾನಸಿಕ ಖಿನ್ನತೆಯಿಂದ ಹೊರಬರಲು ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಗ್ಯೂ ಸದಾ ಒಂಟಿಯಾಗಿಯೇ ಇರುತ್ತಿದ್ದರು, ಯಾರೊಂದಿಗೂ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. 

ಖಿನ್ನತೆಯಿಂದ ಹೊರಬರಬೇಕೆಂದು ನೃತ್ಯ ತರಬೇತಿ ತರಗತಿಯನ್ನೂ ನಡೆಸುತ್ತಿದ್ದ ಜಯಶ್ರೀ ಅದನ್ನು ಮುಂದುವರಿಸಲಿಲ್ಲ. ಕಳೆದ ತಿಂಗಳು ಸಂಧ್ಯಾಕಿರಣ ಪುನರ್ವಸತಿ ಕೇಂದ್ರಕ್ಕೆ ಸೇರಿಕೊಂಡಿದ್ದರು. ಅಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇಂದು ಮುಂಜಾನೆ, ಆಕೆಯ ಪೋಷಕರು ಅವಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರು ನಂತರ ಆಶ್ರಮವನ್ನು ಸಂಪರ್ಕಿಸಿದ್ದಾರೆ. ಆಶ್ರಮದ ಸಿಬ್ಬಂದಿ ಅವಳ ಕೋಣೆಗೆ ತೆರಳಿ ನೋಡಿದಾಗ ಆಕೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ನಂತರ ಅವರು ಮಾದನಾಯಕನಹಳ್ಳಿ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಒಳ್ಳೆಯ ಹುಡುಗಿಯಲ್ಲ, ದಯಾಮರಣ ಕೊಡಿ:
ಜಯಶ್ರೀ ಅವರು ಆತ್ಮಹತ್ಯೆಗೆ ಶರಣಾಗಲು ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ''ನಾನು ಏಳೆಂಟು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇನೆ, ನಾನು ಒಳ್ಳೆ ಹುಡುಗಿಯಲ್ಲ, ನನಗೆ ದಯಾ ಮರಣ ಕೊಡಿ'' ಎಂದು ಫೇಸ್ಬುಕ್ ವಿಡಿಯೋ ಮಾಡಿದ್ದರು. ಆದರೆ, ನಂತರ ಕಿಚ್ಚ ಸುದೀಪ ಅವರ ಬುದ್ಧಿವಾದ ನಂತರ ವಿಡಿಯೋ ಡಿಲೀಟ್ ಮಾಡಿ ಸುದೀಪ್ ಗೆ ಧನ್ಯವಾದ ಅರ್ಪಿಸಿದ್ದರು.

ಕನ್ನಡ್ ಗೊತ್ತಿಲ್ಲ, ಉಪ್ಪು ಹುಳಿ ಖಾರ ಮುಂತಾದ ಚಿತ್ರಗಳಲ್ಲಿ ಜಯಶ್ರೀ ನಟಿಸಿದ್ದಾರೆ, ಸಿನಿಮಾ ರಂಗಕ್ಕೂ ಮುನ್ನ ರೂಪದರ್ಶಿಯಾಗಿ ಬಣ್ಣದ ಲೋಕಕ್ಕೆ ಕಾಲಿರಿಸಿದ್ದರು.

ಆದರೆ ಎರಡು ವರ್ಷಗಳ ಹಿಂದೆ ಕುಟುಂಬ ಕಲಹದ ವಿಚಾರ ಬಹಿರಂಗಗೊಂಡಿತ್ತು. 'ನಮ್ಮ ಮಾವ ನನ್ನನ್ನು ಹಾಗೂ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರೆ, ಆಸ್ತಿ ವಿಷಯವಾಗಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ದಾರೆ' ಎಂದು ಅಳಲು ತೋಡಿಕೊಂಡಿದ್ದರು. ಕೊನೆಗೂ ಖಿನ್ನತೆಯಿಂದ ಆಕೆ ಹೊರಬರಲು ಸಾಧ್ಯವಾಗಲಿಲ್ಲವೇಕೆ ಎಂಬುದರ ಮಾಹಿತಿ ತನಿಖೆಯಿಂದಷ್ಟೇ ಹೊರಬರಬೇಕಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp