ನಟ ಕಿಚ್ಚ ಸುದೀಪ್ ಡೆನ್ವರ್ ಬ್ರಾಂಡ್ ರಾಯಭಾರಿ
ನಟ ಕಿಚ್ಚ ಸುದೀಪ್ ಅವರು ಡೆನ್ವರ್ ಬ್ರಾಂಡ್ ರಾಯಭಾರಿಯಾಗಿರುವುದಾಗಿ ಕಂಪನಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ನಿರ್ದೇಶಕ ಸೌರವ್ ಗುಪ್ತಾ ಘೋಷಿಸಿದ್ದಾರೆ. ಈ ರಾಯಭಾರತ್ವ ಎರಡು ವರ್ಷದ ಅವಧಿಯವರೆಗೆ ಇರಲಿದೆ.
Published: 26th January 2021 11:43 AM | Last Updated: 26th January 2021 11:43 AM | A+A A-

ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ, ಕಿಚ್ಚ ಸುದೀಪ್
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಡೆನ್ವರ್ ಬ್ರಾಂಡ್ ರಾಯಭಾರಿಯಾಗಿರುವುದಾಗಿ ಕಂಪನಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ನಿರ್ದೇಶಕ ಸೌರವ್ ಗುಪ್ತಾ ಘೋಷಿಸಿದ್ದಾರೆ. ಈ ರಾಯಭಾರತ್ವ ಎರಡು ವರ್ಷದ ಅವಧಿಯವರೆಗೆ ಇರಲಿದೆ.
ಕಿಚ್ಚ ಸುದೀಪ್ ನಟನೆ ಜತೆಗೆ ಈಗಾಗಲೇ ಸಾಕಷ್ಟು ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದೇ ರೀತಿ ಇದೀಗ ಡೆನ್ವರ್ ಫರ್ಪ್ಯೂಮ್ ಬ್ರಾಂಡ್ಗೂ ರಾಯಭಾರಿಯಾಗಿದ್ದಾರೆ.
ಭಾನುವಾರ ನಗರದ ಎಂಜಿ ರಸ್ತೆಯಲ್ಲಿನ ತಾಜ್ ಹೋಟೆಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು.