ಫಿಲ್ಮಿ ಫ್ರೈಡೇಸ್: ಸಿನಿಪ್ರಿಯರಿಗೆ ಭರ್ಜರಿ ರಸದೌತಣ, ಮೇವರೆಗೂ ಸಿನಿ ಸುನಾಮಿ!

2020ರಲ್ಲಿ ಬಿಡುಗಡೆ ಕಾಣಬೇಕಿದ್ದ ಸಿನಿಮಾಗಳೆಲ್ಲಾ ಕೊರೋನಾ ಸಾಂಕ್ರಾಮಿಕ ರೋಗ ಬಿಡುಗಡೆ ಕಾಣದೆ ಮೂಲೆಗೆ ಸೇರಿದ್ದವು. ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿ ಸುನಾಮಿಯೇ ಏಳಲು ಆರಂಭವಾಗುತ್ತಿದೆ. 

Published: 26th January 2021 01:15 PM  |   Last Updated: 26th January 2021 01:15 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

2020ರಲ್ಲಿ ಬಿಡುಗಡೆ ಕಾಣಬೇಕಿದ್ದ ಸಿನಿಮಾಗಳೆಲ್ಲಾ ಕೊರೋನಾ ಸಾಂಕ್ರಾಮಿಕ ರೋಗ ಬಿಡುಗಡೆ ಕಾಣದೆ ಮೂಲೆಗೆ ಸೇರಿದ್ದವು. ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಿನಿ ಸುನಾಮಿಯೇ ಏಳಲು ಆರಂಭವಾಗುತ್ತಿದೆ. 

2020ರ ಕಹಿಯನ್ನು ಮರೆಯಲು ಮುಂದಾಗಿರುವ ಸಿನಿಮಾವಲಯದವರು 2021 ಹೊಸ ವರ್ಷದತ್ತ ಗಮನ ಹರಿಸಿದ್ದಾರೆ. ತಮ್ಮ ಚಿತ್ರಗಳ ಬಿಡುಗಡೆಗಾಗಿ ದಿನಾಂಕವನ್ನು ಹುಡುಕಲು ಆರಂಭಿಸಿದ್ದಾರೆ. 

ಇದರಂತೆ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ರಾಮಾರ್ಜುನ ಮೊದಲ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಇದೇ ವಾರದಲ್ಲಿಯೇ ಪ್ರಜ್ವರ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್, ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾ ದಿನ ಮತ್ತು ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಚಿತ್ರ ಬಿಡುಗಡೆಯಾಗುತ್ತಿದೆ. 

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಏಪ್ರಿಲ್ 1ರಂದು ಬಿಡುಗಡೆಯಾಗುತ್ತಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಮಾರ್ಚ್ 11 ರಂದು ತೆರೆಕಾಣುತ್ತಿದೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಪೊಗರು ಚಿತ್ರ ಫೆ.19 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವು ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲಿಯೂ ಬಿಡುಗಡೆಯಾಗುತ್ತಿದೆ. 
ಈ ನಡುವೆ ಸಲಗ, ಕೋಟಿಗೊಬ್ಬ 3, ಭಜರಂಗಿ 2 ಚಿತ್ರಗಳೂ ಕೂಡ ಬಿಡುಗಡೆಗೆ ದಿನಾಂಕ ನಿಗದಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. 

ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ಏಪ್ರಿಲ್ 15 ರಂದು, ಸುದೀಪ್ ಅಭಿನಯತ ಕೋಟಿಗೊಬ್ಬ 3 ಏಪ್ರಿಲ್ 29, ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಮೇ 14 ರಂದು ಬಿಡುಗಡೆಗೆ ಸಜ್ಜಾಗಿವೆ. 

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp