ಮಂಗಳವಾರ ರಜಾದಿನ: ಪುನೀತ್ ಕಂಠಸಿರಿಯಲ್ಲಿ 'ನೀನೆ ಗುರು' ಹಾಡು ಬಿಡುಗಡೆಗೊಳಿಸಿದ ಅಭಿಷೇಕ್ ಅಂಬರೀಶ್
ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಚಿತ್ರದ ಹಾಡನ್ನು ನಟ ಅಭಿಷೇಕ್ ಅಂಬರೀಶ್ ಗಣತಂತ್ರ ದಿನದಂದು ಬಿಡುಗಡೆಗೊಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದನಿಯಾಗಿರುವ ಹಾಡು ಲಹರಿ ಮ್ಯೂಸಿಕ್ ಮೂಲಕ ಹೊರಬಂದಿದೆ.
Published: 26th January 2021 05:33 PM | Last Updated: 26th January 2021 05:33 PM | A+A A-

ನೀನೆ ಗುರು ಹಾಡಿನ ವಿಡಿಯೋ
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಚಂದನ್ ಆಚಾರ್ ಅಭಿನಯದ ಮಂಗಳವಾರ ರಜಾದಿನ ಚಿತ್ರದ ಹಾಡನ್ನು ನಟ ಅಭಿಷೇಕ್ ಅಂಬರೀಶ್ ಗಣತಂತ್ರ ದಿನದಂದು ಬಿಡುಗಡೆಗೊಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದನಿಯಾಗಿರುವ ಹಾಡು ಲಹರಿ ಮ್ಯೂಸಿಕ್ ಮೂಲಕ ಹೊರಬಂದಿದೆ.
ತಂದೆ ಹಾಗೂ ಮಗನ ನಡುವಿನ ಬಾಂಧವ್ಯವನ್ನು ಸಾರುವ 'ನೀನೆ ಗುರು, ನೀನೆ ಗುರಿ, ನೀನೆ ಗುರುತು' ಹಾಡನ್ನು ಗೌಸ್ ಫೀರ್ ಬರೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೊಗಸಾಗಿ ಹಾಡಿದ್ದಾರೆ.
ಈ ಹಾಡು ಕೇಳಿದ ಎಲ್ಲರಿಗೂ ಅವರ ತಂದೆ ನೆನಪಾಗುತ್ತಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ' ಎಂದು ಅಭಿಷೇಕ್ ಅಂಬರೀಶ್ ಶುಭಕೋರಿದ್ದಾರೆ.