
ರಮೇಶ್ ಅರವಿಂದ್
ರಮೇಶ್ ಅರವಿಂದ್ ಸಾಕಷ್ಟು ವಿರಾಮದ ನಂತರ ಮತ್ತೆ ಸಿನಿಮಾ ಶೂಟಿಂಗ್ ಗೆ ಮರಳಿದ್ದಾರೆ. ರಮೇಶ್ ಅವರೀಗ ಸಂದೇಶ್ ಪ್ರೊಡಕ್ಷನ್ಸ್ ಜತೆ ಸಂಪರ್ಕದಲ್ಲಿದ್ದಾರೆ. ತಮ್ಮ ಮಗಳ ವಿವಾಹದ ನಿಮಿತ್ತ ವಿರಾಮತೆಗೆದುಕೊಂಡ ನಟ-ನಿರ್ದೇಶಕ, ನಿಹಾರಿಕಾ ವಿವಾಹದ ನಂತರ ಈಗ ತಾನು ಮತ್ತೊಮ್ಮೆ ಉತ್ತಮ ರೀತಿಯಲ್ಲಿ ಕಂ ಬ್ಯಾಕ್ ಹೇಳಲು ಸಿದ್ದವಾಗಿದ್ದಾರೆ.
"ಶಿವಾಜಿ ಸುರತ್ಕಲ್"ನಟ, ನಿರ್ಮಾಪಕರೊಂದಿಗೆ ಕೆಲವು ಸುತ್ತಿನ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಯೋಜನೆಯನ್ನು ಫೈನಲ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು ಮುಂದಿನ ದಿನದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ನಟ ಮತ್ತು ನಿರ್ಮಾಪಕರಿಬ್ಬರೂ ಇದಾಗಲೇ ಹಲವಾರು ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದಾರೆ ಮತ್ತು ಈ ಮೊದಲು ಹಲವಾರು ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈಗ ಈ ಜೋಡಿ ಮತ್ತೊಂದು ಕುತೂಹಲಕಾರಿ ಸಿನಿಮಾ ತಯಾರಿಗಾಗಿ ಒಂದಾಗುತ್ತಿದೆ.
ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿರುವ ರಮೇಶ್, ಚಿತ್ರವನ್ನು ನಿರ್ದೇಶಿಸಲು ತಮ್ಮ ತಂಡದಿಂದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡಲು ಯೋಜಿಸಿದ್ದಾರೆ, "ಈ ವರ್ಷ, ರಮೇಶ್ ಹೆಚ್ಚಿನ ಅಭಿನಯದಲ್ಲಿ ತೊಡಗಿಸಿಕೊಳ್ಲಲು ಉತ್ಸುಕನಾಗಿದ್ದಾರೆ. ಕ್ರಿಯೇಟಿವ್ ಟೀಮ್ ನಲ್ಲಿ ಹೆಚ್ಚಿನ ಪಾಲನ್ನು ತೆಗೆದುಕೊಳ್ಲಲು ಇಡೀ ಚಿತ್ರವನ್ನುಡಿಸೈನ್ ಮಾಡಲು ಅವರು ತೀರ್ಮಾನಿಸಿದ್ದಾರೆ., ಆದರೆ ಅವರು ತಮ್ಮ ತಂಡದಿಂದ ಕೆಲವು ಯುವ ಮತ್ತು ಪ್ರತಿಭಾವಂತ ಸಿನಿ ನಿರ್ದೇಶಕರನ್ನು ಸಿನಿಮಾ ನಿರ್ದೇಶನಕ್ಕಾಗಿ ಪರಿಚಯಿಸಲಿದ್ದಾರೆ, ಸಂದೇಶ್ ನಾಗರಾಜ್ ನಿರ್ಮಿಸಿದ ಚಿತ್ರದೊಂದಿಗೆ ಈ ರೀತಿಯ ಮೊದಲ ಪ್ರಯತ್ನ ಆಗಲಿದೆ." ನಟ-ನಿರ್ದೇಶಕರ ಆಪ್ತ ಮೂಲವೊಂದು ಹೇಳುತ್ತದೆ,
ಏತನ್ಮಧ್ಯೆ, ರಮೇಶ್ ತಮ್ಮ ನಿರ್ದೇಶನದ ಪ್ರಾಜೆಕ್ಟ್ "100" ಬಿಡುಗಡೆಗೊಳಿಸಲು ಕಾಯುತ್ತಿದ್ದು ಸಿನಿಮಾ ಮಂದಿರದಲ್ಲಿ ಶೇ. 100ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಕ್ಕ ನಂತರವೇ ಸಿನಿಮಾ ಬಿಡುಗಡೆಗೆ ಅವರು ತೀರ್ಮಾನಿಸಿದ್ದಾರೆ. ಸೂರಜ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದಾರೆ. ಇದರಲ್ಲಿ ರಚಿತಾ ರಾಮ್ ಮತ್ತು ಪೂರ್ಣಾ ಪ್ರಧಾನ ಪಾತ್ರದಲ್ಲಿದ್ದಾರೆ. ಇನ್ನು "ಶಿವಾಜಿ ಸುರತ್ಕಲ್" ಮುಂದುವರಿದ ಭಾಗವೂ ಸಹ ಸೆಟ್ತೇರಲು ಕಾಯುತ್ತಿದೆ. ಆಕಾಶ್ ಶ್ರೀವಾತ್ಸ ನಿರ್ದೇಶನದ ಈ ಚಿತ್ರ ಪ್ರಸ್ತುತ ತಯಾರಿ ಹಂತದಲ್ಲಿದೆ ಇಲ್ಲಿ ಸಹ ರಮೇಶ್ ಇನ್ನೊಮ್ಮೆ ತನಿಖಾಧಿಕಾರಿಯಾಗಿಕಾಣಿಸಿಕೊಳ್ಳಲು ಸಿದ್ದವಾಗಿದ್ದಾರೆ.